ಅತ್ಯುತ್ತಮ ಆಸ್ಪತ್ರೆಗೆ ಶ್ರಮ: ಡಾ. ಈಶ್ವರ ಸವಡಿಗೆ ಸನ್ಮಾನ

0
20
loading...

ಗಂಗಾವತಿ : ನಗರದ ಸಾರ್ವಜನಿಕ ಸರಕಾರಿ ಉಪ ವಿಭಾಗ ಆಸ್ಪತ್ರೆಯನ್ನು ಅತ್ಯುತ್ತಮಗೊಳಿಸಿ ರಾಜ್ಯದಲ್ಲೇ ನಂ.1 ಸರಕಾರಿ ಆಸ್ಪತ್ರೆಯಾಗಿ ‘ಕಾಯಕಲ್ಪ’ ಪ್ರಶಸ್ತಿ ಗಳಿಸುವಂತೆ ಶ್ರಮಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಈಶ್ವರ ಸವಡಿಗೆ ತಾಲೂಕಿನ ಸೋಮನಾಳ ಗ್ರಾಮದ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ.
ಶುಕ್ರವಾರ ನಗರದ ಆಸ್ಪತ್ರೆಗೆ ಆಗಮಿಸಿದ್ದ ಸೋಮನಾಳ ಗ್ರಾಮಸ್ಥರು ಡಾ. ಸವಡಿಗೆ ಅವರಿಗೆ ಸನ್ಮಾನಿಸಿದರು. ಕಳೆದ ಎರಡು ವರ್ಷದ ಹಿಂದೆ ಲಿಂಗಸ್ಗೂರಿನ ಮುದಗಲ್‌ ಸರಕಾರಿ ಆಸ್ಪತ್ರೆಯಿಂದ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿ ಆಗಮಿಸಿದ ಡಾ. ಈಶ್ವರ ಸವಡಿ ಸರಕಾರದ ನಿಯಮಾನುಸಾರ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿ ಆರೋಗ್ಯ ರಕ್ಷಾ ಸಮಿತಿ ಸಹಕಾರದೊಂದಿಗೆ ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆಯುವಂತೆ ಸಂಪೂರ್ಣ ಪರಿವರ್ತಿಸಿ ಈಡೀ ರಾಜ್ಯಕ್ಕೆ ಮಾದರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರದ ಆರೋಗ್ಯ ಇಲಾಖೆಯ ವಿವಿಧ ಅನುದಾನವನ್ನು ಸದ್ಬಳಕೆ ಮಾಡಿ ಸರಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರಲ್ಲಿ ಮೂಡಿದ್ದ ನಿರ್ಲಕ್ಷ ಭಾವನೆಯನ್ನು ಹೋಗಲಾಡಿಸುವಂತೆ ಅಭಿವೃದ್ಧಿಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಹ ಸೌಲಭ್ಯಗಳನ್ನು ಉಪ ವಿಭಾಗ ಆಸ್ಪತ್ರೆಯಲ್ಲಿ ಒದಗಿಸುವಲ್ಲಿ ಡಾ. ಸವಡಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯ ಅತ್ಯುತ್ತಮ ಗುಣಮಟ್ಟದಿಂದಾಗಿ ತಿಂಗಳಲ್ಲಿ 374 ಸುಸೂತ್ರವಾಗಿ ಹೆರಿಗೆಯಾಗಿರುವುದು ರಾಜ್ಯದಲ್ಲೆ ಮಾದರಿಯೆನಿಸಿಕೊಂಡಿದೆ. ಆಸ್ಪತ್ರೆಯ ಗುಣಮಟ್ಟವನ್ನು ಗಮನಿಸಿದ ಕೇಂದ್ರ ಮತ್ತು ರಾಜ್ಯ ಸರಕಾರ ಕಾಯಕಲ್ಪ ಪ್ರಶಸ್ತಿ ನೀಡಿದೆ. ಈ ಕಾರಣಕ್ಕೆ ಡಾ. ಈಶ್ವರ ಸವಡಿಗೆ ಸೋಮನಾಳ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ.
ಗ್ರಾಮಸ್ಥರ ಗೌರವ ಸ್ವೀಕರಿಸಿದ ಡಾ. ಸವಡಿ ಮಾತನಾಡಿ, ಸ್ಥಳೀಯ ಶಾಸಕರ ಮತ್ತು ಆಸ್ಪತ್ರೆಯ ಎಲ್ಲಾ ವೈದ್ಯರ, ಸಿಬ್ಬಂದಿಗಳ ಸಹಕಾರಿಂದ ಸರಕಾರಿ ಉಪ ವಿಭಾಗ ಆಸ್ಪತ್ರೆಯನ್ನು ಗುಣಮಟ್ಟದ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಸರಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿದ್ದು, ಬಡ ಮತ್ತು ಎಲ್ಲ ಸ್ಥರದ ನಾಗರೀಕರಿಗೆ ಉತ್ತಮ ಸೌಲಭ್ಯ ದೊರಕಿಸಿಕೊಡುವಲ್ಲಿ ಕೆಲಸ ಮಾಡಿದ್ದೇನೆ. ಗ್ರಾಮಸ್ಥರು ನೀಡಿರುವ ಈ ಸನ್ಮಾನಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು. ಸೋಮನಾಳ ಗ್ರಾಮದ ಪ್ರಮುಖ ಮಾರ್ಕೇಂಡೆಪ್ಪ ಹೂಗಾರ, ಬಸವರಾಜ ಪೋಲಿಸ್‌ ಪಾಟೀಲ್‌, ಪಂಪಾಪತಿ ಪೋಲಿಸ್‌ ಪಾಟೀಲ್‌ ಮತ್ತಿತರು ಇದ್ದರು.

loading...