ಅಧಿಕಾರಕ್ಕೆ ಬಂದರೆ ಸಾಲ ಮನ್ನಾ: ಎಚ್‌ಡಿಕೆ

0
22
loading...

ಕನ್ನಡಮ್ಮ ಸುದ್ದಿ-ಸಿಂದಗಿ: ರೈತರು ದೇಶದ ಬೆನ್ನಲಬು ಎಂದು ಹೇಳುತ್ತ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಜೆಡಿಎಸ್‌ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕು ಸೇರಿದಂತೆ ಅನೇಕ ಬ್ಯಾಂಕುಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಯ ವ್ಯಕ್ತಪಡಿಸಿದರು.
ತಾಲೂಕಿನ ಆಲಮೇಲ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡ ವಿಕಾಸ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ಇರುವುದರಿಂದ ಕಷ್ಟ ಪಡುತ್ತ ನೇಣಿಗೆ ಶರಣಾಗುತ್ತಿದ್ದರು ಕೂಡಾ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಆಲಮೇಲ ಗ್ರಾಮಕ್ಕೆ ತಾಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆಗಳು ಇದ್ದರು ಕೂಡಾ ರಾಜಕೀಯ ಇಚ್ಚಾಸಕ್ತಿಯ ಕೊರತೆಯಿಂದ ಈ ಪಟ್ಟಣ ತಾಲೂಕಾ ಕೇಂದ್ರದಿಂದ ವಂಚಿತವಾಗಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಆಲಮೇಲ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಭೀಮಾ ನದಿಯ ನೀರನ್ನು ಆಲಮೇಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳಿಗೆ ಕುಡಿಯಲು ಪೈಪ ಲೈನ ಮುಖಾಂತರ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಈ ಬಾರಿ ತೊಗರಿ ಖರೀದಿಯಲ್ಲಿ ತಾರತಮ್ಯ ಮಾಡಿದ್ದು ಇದರಿಂದ ಅನೇಕ ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರೈತ ಆತ್ಮ ಹತ್ಯೆ ಮಾಡಿಕೊಂಡರೆ ಮಾಜಿ ಸಿಎಂ ಯಡಿಯೂರಪ್ಪ ಮೂರು ತಿಂಗಳ ಬಳಿಕ ರೈತನ ಕುಟುಂಬಕ್ಕೆ ಹೋಗಿ ಸಾಂತ್ವಾನ ಹೇಳುತ್ತಾರೆ ಇದು ನ್ಯಾಯವೇ ರೈತರ ಮೇಲೆ ಗುಂಡು ಹಾರಿಸುವ ನೀಚ ರಾಜಕಾರಣಿಗಳಿಗೆ ಅಧಿಕಾರ ನೀಡಬೇಡಿ ನಿಮ್ಮೊಂದಿಗೆ ಸದಾ ಇರುವ ಜೆಡಿಎಸ್‌ ಗೆ ಅಧಿಕಾರ ನೀಡಿ ಒಂದು ಬಾರಿ ನನಗೆ ಅವಕಾಶ ಕೊಟ್ಟು ನೋಡಿ ರಾಜ್ಯದ ಬದಲಾವಣೆ ಮತ್ತು ರೈತರ ಬದುಕನ್ನು ಹಸನ ಮಾಡದೆ ಹೊದಲ್ಲಿ ನನ್ನನ್ನು ಅಧಿಕಾರದಿಇಂದ ಕೆಳಗಿಳಿಸಿ ಎನ್ನುತ್ತಲೆ ಭಾವುಕರಾದರು.
ನಾನು ಹೈಟೇಕ್‌ ಮುಖ್ಯ ಮಂತ್ರಿಯಾಗಲ್ಲ- ನಾನೋಬ್ಬ ಸಿದಾ ಸಾದ ರಾಜಕಾರಣಿ ಸಾಮಾನ್ಯರ ಬದುಕು ನನಗೆ ಬೇಕು ಹಿಂದೆ ಆಳಿದ ಮತ್ತು ಈಗ ಆಳುತ್ತಿರುವ ಸಿಎಂ ಗಳ ಹಾಗೆ ನಾನು ಹೈಟೆಕೆ ಜೀಈವನ ನಡೆಸಲ್ಲ ಸಾಮಾನ್ಯ ಜನಸೇವಕನ್ನಾಗಿ ಆಡಳಿತ ಮಾಡುತ್ತೆನೆ, ಧರ್ಮದ ಹೆಸರಿಲ್ಲಿ ಬಿಜೆಪಿ, ಕಾಂಗ್ರೆಸ್‌ ಆಡಳಿತ ಮಾಡುತ್ತಿದ್ದಾರೆ. ಆದರೆ ನಾನು ರೈತರ ಮತ್ತು ಜನಸಮಾನ್ಯರ ಹಿತಕ್ಕಾಗಿ ಆಡಳಿತ ಮಾಡುತ್ತೇನೆ. ಅಲ್ಪಸಂಖ್ಯಾತರಿಗೆ ಹಾಗೂ ಹಿಂದೂಳಿದ ವರ್ಗಕ್ಕ ವಿಶೇಷ ಸ್ಥಾನಮಾನ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸುತ್ತೇನೆ.
ಆಲಮೇಲ ಪಟ್ಟಣದಲ್ಲಿ ಕ್ರೀಡಾಂಗಣ, ಒಳಚರಂಡಿ, ರಸ್ತೆ ಹಾಗೂ ಕರೆ ತುಂಬುವ ಕೆಲಸ, ಹಾಗೂ ಸಮೀಪದ ಕಡಣಿ ಬ್ರೀಡ್ಜ್‌ ದಿಂದ ಭೀಮಾನದಿಗೆ ಇರುವ ಬ್ರಿಜ್ಡ್‌ ಮೇಲ್ರ್ದಜೆಗೆ ಏರಿಸುವ ಬೇಡಿಕೆಗಳು ಸುಮಾರು ವರ್ಷಗಳಿಂದಲೂ ಇದ್ದು ಅವುಗಳ ಈಡೇರಿಕೆಗೆ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಒಂದು ದೊಡ್ಡ ಅನ್ಯಾಯ.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ನಾಜಮಿನ ದೇವರಮನಿ ಜೆಡಿಎಸ್‌ ಮುಖಂಡರಾದ ಮುನ್ನಾ ತಾಂಬೋಳ್ಳಿ, ಎಮ್‌.ಆರ್‌.ಪಾಟೀಲ, ರೇಷ್ಮಾ ಪಡೇಕನ್ನೂರ,ಅಶೋಕ ಮನಗೂಳಿ, ಉಮೇಶ ಜೋಗೂರ, ಬಿ.ಡಿ.ಪಾಟೀಲ, ಅರವಿಂದ ಹಂಗರಗಿ, ಡಾ.ಶಾಂತವೀರ ಮನಗೂಳಿ, ಡಾ. ದಸ್ತಗೀರ ಮುಲ್ಲಾ, ಅಕ್ಬರ ಮುಲ್ಲಾ, ರಿಯಾಜ ಫಾರೂಕಿ, ಅಪ್ಪುಗೌಡ ಪಾಟೀಲ, ಭೀಮನಗೌಡ ಪಾಟೀಲ, ಮಲ್ಲಿಕಾರ್ಜುನ ಶೇಂಬೇವಾಡ, ಡಾ. ರಾಜಶೇಖರ ಸಂಗಮ, ಸಿಇದ್ದಣ್ಣ ಚೌಧರಿ, ಕುಮಾರ ದೇಸಾಯಿ, ಅಪ್ಪುಗೌಡ ಪಾಟೀಲ, ಶಿರಾಜ ಬೇಣ್ಣೇಶಿರೂರ, ಅಮರ ನಾರಾಯಣಕರ, ಶೈಲಜಾ ಸ್ತಾವರಮಠ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

loading...