ಅಧಿಕಾರಿಗಳ ಕಾರ್ಯವು ಚುರುಕಿನಿಂದ ಆರಂಭಗೊಂಡಿದೆ

0
15
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಾಂಗದ ಚುನಾವಣಾ ಹೊಣೆಗಾರಿಕೆ ಹೊಂದಿರುವ ಅಧಿಕಾರಿಗಳ ಕಾರ್ಯವು ಚುರುಕಿನಿಂದ ಆರಂಭಗೊಂಡಿದೆ. ಸಂಹಿತೆ ಘೋಷಣೆಯಾದ ಬಳಿಕ ಕ್ಷೇತ್ರದ ಸೆಕ್ಟರ್‌ ಅಧಿಕಾರಿಗಳ, ಪ್ಲಾಯಿಂಗ್‌ ಸ್ಕಾಡ್‌ಗಳ ತಂಡಗಳ ಎರಡನೇ ಸಭೆಯು ಗುರುವಾರ ತಾಲೂಕಾ ಕಛೇರಿಯಲ್ಲಿ ನೆರವೇರಿತು.
ಕ್ಷೇತ್ರಾದ್ಯಂತ ಬಸ್‌ ತಂಗುದಾಣಗಳಲ್ಲಿ, ಹಾಗೂ ಪಟ್ಟಣ, ನಗರ, ತಾಲೂಕಾ ಕೇಂದ್ರಗಳಲ್ಲಿ ಸರ್ಕಾರಿ ಯೋಜನೆಯ ಪ್ರಚಾರ ಬೋರ್ಡಗಳಲ್ಲಿ ರಾಜ್ಯ ಕಾಂಗ್ರೇಸ್‌ ಸರ್ಕಾರದ ಸಚಿವರ ಭಾವಚಿತ್ರಗಳು ಕಾಣದಂತೆ ಸ್ಥಳೀಯ ಸೆಕ್ಟರ್‌ ಅಧಿಕಾರಿಗಳು ಅವುಗಳ ಮೇಲೆ ಬಿಳಿ ಬಟ್ಟೆಯಿಂದ ಇಲ್ಲವೆ ಇತರೆ ಸಾಮಗ್ರಿಯಿಂದ ಮುಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಭಾರತೀಯ ಜನತಾ ಪಕ್ಷವು ಇತ್ತೀಚೆಗೆ ಪ್ರತೀ ಬೂತ್‌ ದಲ್ಲಿ 5 ಸಂಖ್ಯೆಯಲ್ಲಿ ತಮ್ಮ ಕಾರ್ಯಕರ್ತರ ನಿವಾಸಗಳ ಗೋಡೆಗಳ ಮೇಲೆ ಬರೆಸಿದ್ದ ಬರಹಗಳ ಮೇಲೆ ಬೇರೆ ಬಣ್ಣ ಬಳಿದು ಅದು ಕಾಣಿಸದಂತೆ ಮಾಡುತ್ತಿದ್ದಾರೆ.
ಹಳಿಯಾಳ ತಾಲೂಕು :- ಸಹಾಯಕ ತೋಟಗಾರಿಕಾ ಅಧಿಕಾರಿ ಎ ಆರ್‌ ಹೇರಿಯಲ್‌ ಇವರನ್ನು ಕೆಸರೊಳ್ಳಿ, ಗರಡೊಳ್ಳಿ, ಕರ್ಲಕಟ್ಟಾ, ತಿಪ್ಪಿನಗೇರಿ, ಸಾಂಬ್ರಾಣಿ, ಗುಂಡೋಳ್ಳಿ ಹೀಗೆ ಒಟ್ಟು 9 ಮತಗಟ್ಟೆಗಳ ಸೆಕ್ಟರ್‌ ಅಧಿಕಾರಿಯನ್ನಾಗಿಸಲಾಗಿದೆ. ಎಸ್‌ ಹೆಚ್‌ ಲಮಾಣಿ (ಎ ಪಿ ಎಮ್‌ ಸಿ ಕಾರ್ಯದರ್ಶಿ) ಇವರನ್ನು ಕಾಳಗಿನಕೊಪ್ಪ, ಅಜಮನಾಳ, ಹೊಸುರ, ತಟ್ಟಿಗೇರಿ, ದೊಡಕೊಪ್ಪ, ಜನಗಾ, ಜತಗಾ, ಬಸವಳ್ಳಿ, ನಂದಿಗದ್ದಾ (10 ಮತಗಟ್ಟೆಗಳು). ಎ ಸಿ ಹಳೆಮನಿ (ಝಡ್‌ ಪಿ ಇಂಜಿನಿಯರಿಂಗ್‌ ಉಪವಿಭಾಗ ಅಧಿಕಾರಿ) ಬಾಳಶೆಟ್ಟಿಕೊಪ್ಪ, ಕುಳಗಿ,ಅಂಬಿಕಾನಗರ, ಬೊಮ್ಮನಳ್ಳಿ,ಕೆಗದಾಳ, ಭಾಗವತಿ, ತಟ್ಟಿಹಳ್ಳ (11 ಮತಗಟ್ಟೆಗಳು) . ರವೀಂದ್ರ ಮೆಟಗುಡ್ಡ ( ಹೆಸ್ಕೊಮ್‌) ಅರ್ಲವಾಡ, ಹುಣಸವಾಡ, ಸಾತ್ನಳ್ಳಿ, ಪಾಳಾ, ಮಂಗಳವಾಡ, ಹವಗಿ(11 ಮತಗಟ್ಟೆಗಳು). ಎಸ್‌ ಎ ಮುಲ್ಲಾ (ಬಿ ಎ ಓ) ಮದ್ನಳ್ಳಿ, ಹೋಮನಳ್ಳಿ, ದುಸಗಿ, ಮುತ್ತಲಮುರಿ, ಅಂತ್ರೋಳ್ಳಿ, ತೇರಗಾಂವ, ಕೇರವಾಡ, ಮಾಗವಾಡ (12 ಮತಗಟ್ಟೆಗಳು). ಆರ್‌ ಹೆಚ್‌ ಕುಲಕರ್ಣಿ (ಪಿ ಡಬ್ಲ್ಯು ಡಿ) ಬಿ.ಕೆ.ಹಳ್ಳಿ, ತತ್ವಣಗಿ, ಹೊಸುರ, ಅಮನಕೊಪ್ಪ, ಗಡಿಯಾಳ, ಜೋಗನಕೊಪ್ಪ, ಮುಂಡವಾಡ, ನಾಗಶೆಟ್ಟಿಕೊಪ್ಪ, ಗೋಲೆಹಳ್ಳಿ (12 ಮತಗಟ್ಟೆಗಳು). ಎಸ್‌ ಬಿ ಮಾನೆ (ಪಿಯು ಕಾಲೇಜ) ಮುರ್ಕವಾಡ, ಶಿವಪುರ, ಕೆ.ಕೆ.ಹಳ್ಳಿ, ಮುಗದಕೊಪ್ಪ, ಬೆಳವಟಗಿ, ಸಂಕನಕೊಪ್ಪ, ಹೊಸವಟ್ನಾಳ, ಕಾವಲವಾಡ, ಹಂಪಿಹೊಳಿ (13 ಮತಗಟ್ಟೆಗಳು. ನಾಗೇಶ ನಾಯ್ಕ (ಕೃಷಿ ಇಲಾಖೆ) ಯಡೋಗಾ, ಬಿದ್ರೋಳ್ಳಿ, ಹಂದಲಿ, ರಾಮಾಪುರ, ವಿಟ್ನಾಳ, ಅಂಬೇವಾಡಿ, ಆಲೂರ, ಸಾತಮನಿ, ಜಾವಳ್ಳಿ, ನೀರಲಗಾ, ಕೇರವಾಡ. ಕೇಶವ ಚೌಗುಲೆ (ಪುರಸಭೆ) ತಿಮ್ಮಾಪುರ, ಚಿಬ್ಬಳಗೇರಿ, ಕಾಮಡೋಳ್ಳಿ, ಹಾಗೂ ಹಳಿಯಾಳ ಪಟ್ಟಣದ ಮತಗಟ್ಟೆ ಸಂಖ್ಯೆ 88 ರಿಂದ 97ರವರೆಗೆ (14 ಮತಗಟ್ಟೆಗಳು). ಮಹದೇವಪ್ಪಾ ಹಂಚಿನಮನಿ (ಡಿಗ್ರಿ ಕಾಲೇಜ) ತೇಗ್ನಳ್ಳಿ, ಬಾನಸಗೇರಿ ಹಾಗೂ ಹಳಿಯಾಳ ಪಟ್ಟಣದ ಮತಗಟ್ಟೆ ಸಂಖ್ಯೆ 98 ರಿಂದ 104 ರವರೆಗೆ (9 ಮತಗಟ್ಟೆಗಳು).
ಕೆ ಜತಣ್ಣ (ದಾಂಡೇಲಿ ನಗರಸಭೆ) ದಾಂಡೇಲಿ ನಗರದ ಮತಗಟ್ಟೆ ಸಂಖ್ಯೆ 137 ರಿಂದ 146 (10 ಮತಗಟ್ಟೆಗಳು). ರಾಘವೇಂದ್ರ ಮಡಿವಾಳ (ದಾಂಡೇಲಿ ಪಿಯು ಕಾಲೇಜ) ದಾಂಡೇಲಿ ನಗರದ ಮತಗಟ್ಟೆ ಸಂಖ್ಯೆ 147 ರಿಂದ 163 (10 ಮತಗಟ್ಟೆಗಳು). ಖಾನ ಮೆಹಬೂಬ ಅಲಿ(ದಾಂಡೇಲಿ ಜಿಟಿಟಿಸಿ) ದಾಂಡೇಲಿ ನಗರದ ಮತಗಟ್ಟೆ ಸಂಖ್ಯೆ 156 ರಿಂದ 167 (10 ಮತಗಟ್ಟೆಗಳು). ಎಮ್‌ ಡಿ ಒಕ್ಕುಂದ (ದಾಂಡೇಲಿ ಡಿಗ್ರಿ ಕಾಲೇಜ) ಕೋಗಿಲ ಬನ , ಬಡಾಕಾನ್ಸಿರ್ಡಾ ಹಾಗೂ ದಾಂಡೇಲಿ ನಗರದ ಮತಗಟ್ಟೆ ಸಂಖ್ಯೆ 160 ರಿಂದ 174 (11 ಮತಗಟ್ಟೆಗಳು).

loading...