ಅರಣ್ಯೀಕರಣಕ್ಕೆ ಪಣತೊಟ್ಟ ಗ್ರೀನ್ ಸೇವಿಯರ್ಸ್  

0
32
50 ಮಿನಿ ಅರಣ್ಯ ನಿರ್ಮಾಣ ಗುರಿ | ಒಂದು ಸಾವಿರ ಸಸಿ ನೆಟ್ಟ ಸಂಸ್ಥೆ
ಮಾಲತೇಶ ಮಟಿಗೇರ
ಬೆಳಗಾವಿ: ನೈಸರ್ಗಿಕ ವಾತಾವರಣವನ್ನು ಯಥಾಸ್ಥಿತಿಗೆ ತರುವ ನಿಟ್ಟಿನಲ್ಲಿ ಗ್ರೀನ್  ಸೇವಿಯರ್ಸ್ ಸಂಘಟನೆಯು 3 ಸಾವಿರಕ್ಕೂ ಹೆಚ್ಚು ಸಸಿಗಳನ್ನೊಳಗೊಂಡಿರುವ 50 ಮಿನಿ ಅರಣ್ಯ ನಿರ್ಮಾಣ ಮಾಡಿ, ನಗರದ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.
ನಗರ ವ್ಯಾಪ್ತಿ ಒಳಗೊಂಡಂತೆ ಆಸುಪಾಸಿನ ಪ್ರದೇಶಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಒಗೊಂಡಿರುವ 50 ಮಿನಿ ಅರಣ್ಯ ನಿರ್ಮಾಣ ಮಾಡಲು ಈ ಸಂಘಟನೆ ಶ್ರಮಿಸುತ್ತಿದೆ. ಕನಿಷ್ಠ 3000ಚದರ ಅಡಿಯಲ್ಲಿ 1000 ಸಸಿ ನೆಡಲಾಗುತ್ತಿದೆ. ಇದೇ ಮಾದರಿಯಲ್ಲಿ ಗ್ರೀನ್ ಸೇವಿಯರ್ಸ್ 2017 ಏಪ್ರಿಲ್‍ನಿಂದ 2018ರ ಮಾರ್ಚ್ ಅವಧಿಯಲ್ಲಿ 50 ಮಿನಿ ಅರಣ್ಯ ಬೆಳೆಸಲು ಯೋಜನೆ ಹಾಕಿಕೊಂಡಿದ್ದು, ರವಿವಾರದಂದು ಕೂಡ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದ ಹೊರವಲಯದಲ್ಲಿ ಸುಮಾರು 300 ಜನ ಶಾಲಾ-ಕಾಲೇಜು ವಿದ್ಯಾರ್ಥಿಗಳ ನೆರವಿನೊಂದಿಗೆ ಸುಮಾರು 3ಗಂಟೆ ಅವಧಿಯಲ್ಲಿ ಹಲಸು, ನೇರಳೆ, ಮಾವು, ನೆಲ್ಲಿಕಾಯಿ, ಕೋಕಂ, ಹುಣಸೆ, ನುಗ್ಗೆ, ಬಿಲ್ವ, ಸಂಪಿಗೆ, ರೇನ್‍ಟ್ರೀ, ಇಂಡಿಯನ್ ರೆಡ್‍ಸಿಲ್ಕ್, ಕಾಟನ್, ಬೇವು ಸೇರಿದಂತೆ ಒಟ್ಟು 1500 ಸಸಿಗಳನ್ನ ನೆಡಲಾಯಿತು.
ಜಿಲ್ಲೆಯಾಧ್ಯಂತ ಮೋಡ ಕಾಣಿಸಿಕೊಂಡರೆ ಮಳೆಯಾಗುವುದು ಕಚಿತವೆಂಬ ಕಾಲವಿತ್ತು. ಆದರೆ, 10ವರ್ಷಗಳಿಂದ ಆಗಸದಲ್ಲಿ ಮೋಡಗಳ ಓಡಾಟ ಕಾಣಿಸುತ್ತಿದೆ ಹೊರತು, ಮಳೆಸುರಿಯುತ್ತಿಲ್ಲ. ಕೆಲ ಬಾರಿ ಕಾರ್ಮೋಡ ಕಾಣಿಸಿಕೊಂಡರೂ ಮಳೆಸುರಿಯುವುದಿಲ್ಲ. ಈ ಕುರಿತು ಸಮೀಕ್ಷೆ ಕೈಗೊಂಡಾಗ ಮರಗಳ ಸಂಖ್ಯೆ ಕಡಿಮೆಯಾಗಿದ್ದು ಮಳೆ ಸುರಿಯುವಿಕೆ ಕಡಿಮೆಯಾಗಲು ಕಾರಣ ಎಂಬ ಸಂಗತಿ ತಿಳಿದ ನಂತರ ‘ಗ್ರೀನ್ ಸೇವಿಯರ್ಸ್’ ಹುಟ್ಟಿಗೆ ಕಾರಣವಾಗಿದೆ.
ಸಂಸ್ಥೆ ಸ್ಥಳೀಯರ ನೆರವು ಪಡೆದು ಸಂತೋಷಕೂಟ ಮಾದರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಉತ್ಸಾಹ ಮೂಡಿಸುವ ಕಾರ್ಯಕ್ರಮಗಳೇ ಗ್ರೀನ್ ಸೇವಿಯರ್ಸ್ ಶಿಷ್ಟಾಚಾರವಾಗಿದೆ. ಅಧಿಕಾರಿಗಳು, ವೈದ್ಯರು, ವಕೀಲರು, ಉದ್ಯಮಿಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನೊಳಗೊಂಡಿರುವ ಗ್ರೀನ್ ಸೇವಿಯರ್ಸ್ ಚಟುವಟಿಕೆಗಳಲ್ಲಿ  ಭಾನುವಾರ ಮಾತ್ರ ಭಾಗಿಯಾಗುತ್ತಾರೆ. ಪ್ರತಿ ಭಾನುವಾರ ಮಾತ್ರ ಸಸಿ ನೆಡುವ ಕಾರ್ಯವನ್ನು ಸಂಸ್ಥೆ ಹಮ್ಮಿಕೊಳ್ಳುತ್ತಿದೆ.
ಅಷ್ಟೇ ಅಲ್ಲದೆ ಸಸಿ ನೆಟ್ಟು ಎರಡು ಮೂರು ವಾರಗಳ ನಂತರ ಆ ಸ್ಥಳಕ್ಕೆ ಬೇಟಿ ನೀಡಿ, ಸಸಿಗೆ ಬೇಕಾಗುವು ಗೊಬ್ಬರ, ನೀರಿನ ವ್ಯವಸ್ಥೆಯನ್ನು ಈ ಸಂಸ್ಥೆ ಮಾಡುತ್ತಿದೆ.
ಒಟ್ಟಾರೆಯಾಗಿ ಗ್ರೀನ್ ಸೇವಿಯರ್ಸ್ ಸಂಘಟನೆ 2016ರ ಏ.10 ರಿಂದ ಇಲ್ಲಿಯವರೆಗೆ ಪ್ರತಿ ಭಾನುವಾರವೂ ಸಸಿ ನೆಡುವ ಹಾಗೂ ಈಗಾಗಲೇ ನೆಟ್ಟ ಸಸಿಗಳಿಗೆ ಗೊಬ್ಬರ, ನೀರು ಹಾಕಿ ರಕ್ಷಣೆ ಮಾಡುತ್ತಿರುವ ಕಾರ್ಯದಲ್ಲಿ ತನ್ನನ್ನ ತೊಡಗಿಸಿಕೊಂಡಿರೋದು ವಿಶೇಷವಾಗಿದೆ.
========ಬಾಕ್ಸ್=========
ಸಸಿ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದು ಇದೆ ಮೊದಲೇನೂ ಅಲ್ಲ. ಈ ಹಿಂದೆಯು ಭಾಗಿಯಾಗಿದ್ದವೆ. ಗ್ರೀನ್ ಸೇವಿಯರ್ಸ್ ಸಂಘಟನೆ ಮಿನಿ ಅರಣ್ಯ ನಿರ್ಮಾಣ ಕೈಗೊಂಡ ಕಾರ್ಯದಲ್ಲಿ ಭಾಗಿಯಾಗಿರುವುದು ತುಂಬು ಖುಷಿ ಕೊಡುತ್ತಿದೆ. ಬೆಳಗಾವಿ ನಗರದಲ್ಲಿ ಜನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಅರಣ್ಯ ನಾಶವಾಗುತ್ತಿದೆ. ಅರಣ್ಯ ಬೆಳೆಸಬೇಕಾಗದ ಅವಶ್ಯಕತೆ ಇದೆ. ನಾವು ಸಹ ಗೋಗಟೆ ಕಾಲೇಜಯಿಂದ 150 ವಿದ್ಯಾರ್ಥಿಗಳು ಭಾಗಿಯಾಗಿದ್ದೆವೆ.
ನಿರಂಜನ್
ಗೋಗಟೆ ಕಾಲೇಜ್ ವಿದ್ಯಾರ್ಥಿ
2 ಂಣಣಚಿಛಿhmeಟಿಣs
ಅಟiಛಿಞ heಡಿe ಣo ಖeಠಿಟಥಿ oಡಿ ಈoಡಿತಿಚಿಡಿಜ
loading...