ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ಕೊಟ್ಟೂರು

0
33
loading...

ಕುಷ್ಟಗಿ: ವಿದ್ಯಾರ್ಥಿಗಳು, ಸಾರ್ವಜನಿಕರು ಪರಿಸರ ಹಾಗೂ ನಿಮ್ಮ ಸುತ್ತಮುತ್ತಗಳಲ್ಲಿ ಇರುವ ಕಾಡುಗಳ ಬಗ್ಗೆ ಕಾಳಜಿವಹಿಸಿ. ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಆಸಕ್ತಿ ಬೆಳೆಸಿಕೊಳಬೇಕು. ಇದರ ಜೊತಗೆ ಅರಣ್ಯಗಳ ರಕ್ಷಣೆಯಲ್ಲಿ ಕೈಜೋಡಿಸಬೇಕು ಅರಣ್ಯಾಧಿಕಾರಿಗಳಾದ ಗುರುನಗೌಡ ಪಾಟೀಲ್‌ ಹೇಳಿದರು.
ತಾಲೂಕಿನ ಕಲಕೇರಿ ಸಸ್ಯಕ್ಷೇತ್ರದಲ್ಲಿ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ನಡೆದ ಅರಣ್ಯ ಅರಿವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇದು ಹಲವು ಕಡೆಗಳಲ್ಲಿ ಅರಣ್ಯಗಳಿಗೆ ಬೆಂಕಿ ಬೀಳುವದರಿಂದ ಅರಣ್ಯದಲ್ಲಿ ಇರುವ ಪಕ್ಷಿ, ಪ್ರಾಣಿಗಳು ನಾಶವಾಗುತ್ತಿವೆ ಇವುಗಳನ್ನು ನಾವುಗಳು ತಡೆಗಟ್ಟಬೇಕು. ಅರಣ್ಯ ನಾಶದಿಂದ ಪರಿಸರದ ಮೇಲೆ ಆಗುವ ದುಷ್ಟರಿಣಾಮ ಹಾಗೂ ದೊಡ್ಡ ಬದಲಾವಣೆಗಳ ಆಗುತ್ತವೆ. ಅರಣ್ಯಗಳ ಕೊಡಿಗೆ ದೊಡ್ಡದ್ದಿದೆ ಎಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು, ಯುವಜನರ ಪಾತ್ರ ಅತ್ಯಂತ ಮಹತ್ವಾಗಿದ್ದು,ದೇಶದ ಜವಾಬ್ದಾರಿಯಾಗಿದ್ದುಪರಿಸರದ ಹೊಣೆಗಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ, ಮನುಷ್ಟನ ದುರಾಸೆಯಿಂದಾಗಿ ಇಡೀ ಪ್ರಕೃತಿ ಆಪತ್ತಿನ ಅಂಚಿಗೆ ಹೋಗುತ್ತಿದೆ. ಸಂಪನ್ಮೂಲಗಳು, ಎಷ್ಟೇ ಹೇರಲವಾಗಿದ್ದರೂ ಸಮರ್ಪಕ ಬಳಕೆಯ ಕೊರತೆಯಿಂದಾಗಿ ಇಂದು ಅನೇಕ ಅವಢಗಳಿಗೆ ಅವಕಾಶವಾಗುತ್ತದೆ. ಪ್ರಕೃತಿಯಲಲಿರುವ ಎಲ್ಲವೂ ತನಗೊಬ್ಬನಿಗಾಗಿಯೇ ಇವೆ ಎಂಬ ಮಾನವನವ ಧೋರಣೆಯಿಂದಾಗಿ ಇನ್ನಿಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಹೀಗಾಗಿ ನಾವುಗಳು ಸರಿಯಾಗಿ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಅಂದಾಗ ಮಾತ್ರ ನಾಡು ಉಳಿಸಲು ಸಾಧ್ಯವಾಗಲ್ಲಿದೆ ಎಂದರು. ಕಾರ್ಯಕ್ರಮದಲ್ಲಿ ಸಮದ ಕೊಟ್ಟೂರು ಮಾತನಾಡಿ ಅವರು ಅರಣ್ಯಗಳು ಮಾನವನಿಗೆ ಹಲವಾರು ಕಾಣಿಕೆಗಳನ್ನು ನೀಡುತ್ತಿವೆ.
ಈ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದರು. ಶರಣಗೌಡ ರಾಮದುರ್ಗ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಪರಮೇಶ್ವರಗೌಡ ಗೌಡರ, ಸಮಿತಿಯ ಸದಸ್ಯರಾದ ದೇವಪ್ಪ ಗಡಗಿ, ಹನಮಂತಪ್ಪ ವಾಲೀಕಾರ, ಬಸಯ್ಯ ಗಡಾದ, ಹನುಮಪ್ಪ ಮಾಳಿ, ಮೂಬುಸಾಬ ಮಸೂತಿ, ಮಾಸಪ್ಪ ಬಂಡ್ರಗಲ್ಲು, ಕೊಪ್ಪಳ ಜಿಲ್ಲಾ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯರಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಯುವಕರು ಭಾಗವಹಿಸಿದರು.

loading...