ಅಶೋಕ ಪಟ್ಟಣ ಸೋಲುವ ಭೀತಿ ಶುರುವಾಗಿದೆ: ಮಾಜಿ ಶಾಸಕ ಮಹಾದೇವಪ್ಪ

0
52
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಶಾಸಕರು ಅಶೋಕ ಪಟ್ಟಣ ಅವರು ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಹಾಗೂ ಶಾಸಕರ ದಬ್ಬಾಳಿಕೆ ತಾಲೂಕಿನ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆಗಳು ನಡೆಸುತ್ತಿದ್ದಾರೆ ರಾಜ್ಯಭಾರ ಮಾಡುತ್ತಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಆರೋಪಿಸಿದರು.
ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಿಂದ ಹೋರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸ ಮಿನಿ ವಿಧಾನ ಸೌಧದಲ್ಲಿ ಮನವಿ ಸಲ್ಲಿಸಿ ಪ್ರತಿಭಟಣಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ರಾಮದುರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿ.ಜೆ.ಪಿ ಕಾರ್ಯಕರ್ತರು ‘ಮೋದಿ ಮೋದಿ’ ಎಂದು ಘೋಷಣೆ ಕುಗಿದ್ದಕ್ಕೆ ಪಕ್ಷದ ಇಬ್ಬರು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಕಿಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ, ಈ ವೇಳೆ ಘೋಷಣೆ ಕೂಗಿದ ಸಮಯದಲ್ಲಿ ನೂರಾರು ಕಾರ್ಯಕರ್ತರಿದ್ದರೂ ಶಾಸಕ ಅಶೋಕ ಪಟ್ಟಣ ಅವರ ಕುಮ್ಮಕ್ಕಿನಿಂದ ಕೇವಲ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ನಮ್ಮ ಕಾರ್ಯಕರ್ತರ ಮನೋಬಲ ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಅಭಿವೃದ್ದಿ ಹೆಸರು ಹೇಳುತ್ತಾ ಎಲ್ಲವು ಕಳಪೆ ಮಟ್ಟದ್ದಾಗಿದೆ ಪ್ರವಾಸಿ ತಾನ ಮಾಡುತ್ತೇನೆ ಎಂದು ಶಿವನ ಮೂರ್ತಿಯ ನಿರ್ಮಿಸಿ ಅದರ ಹೆಸರಲ್ಲಿ ನೂರಾರು ಕೋಟಿ ಬೆಲೆಬಾಳುವ ತಾಲೂಕಿನ ಮರಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ತೋರಣಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ ಮಾತನಾಡಿ ಶಾಸಕರು ಹಾಗೂ ಕಾಂಗ್ರೆಸ್‌ ಸರ್ಕಾರ ಏನೆ ತೊಂದರೆ ನೀಡಲಿ ಅದನ್ನು ಸಹಿಸಿಕೊಂಡು ಇಲ್ಲಿಯವರೆಗೆ ತಾಳ್ಮೆಯಿಂದ ಇದ್ದು ಕೆಲಸ ಮಾಡುತ್ತಿರುವ ನಮ್ಮ ಕಾರ್ಯಕÀರ್ತರ ಮೇಲೆ ತೊಂದರೆ ನೀಡುತ್ತಿದ್ದಾರೆ ಇದು ಅಂತ್ಯವಾಗಬೇಕಾದರೆ ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಬೇಕು ಆದ್ದರಿಂದ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ತಾಪಂ ಸದಸ್ಯ ಶಿವಪ್ಪ ಮೇಟಿ ಮಾತನಾಡಿ ಶಾಸಕರು ತಾಲೂಕಿನ ಇತ್ತಿಚೆಗೆ ತಾಲೂಕಿನಲ್ಲಿ ಪ್ರವಾಸ ಮಾಡುವಾಗ ತಮ್ಮ ವಾಹನದಲ್ಲಿ ಸಲಕಿ, ಗುದ್ದಲಿ ಮತ್ತು ಬುಟ್ಟಿಯನ್ನು ಇಟ್ಟುಕೊಂಡು ಅನುದಾನ ಇಲ್ಲದ ಕಡೆಯು ಗುದ್ದಲಿ ಪೂಜೆ ಮಾಡುತ್ತಿದ್ದು ಎಲ್ಲ ಕಾಮಗಾರಿಗಳು ಕಳಪೆ ಒಂದು ದಂದೆ ನಡಯುತ್ತಿದೆ ಇವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿ ಇಲ್ಲವಾದಲ್ಲಿ ಇನ್ನು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿ.ಪಂ. ಮಾಜಿ ಸದಸ್ಯ ಹಾಗೂ ಧನಲಕ್ಷ್ಮೀ ಶುಗರ್ಸ ಉಪಾಧ್ಯಕ್ಷ ಜಿ.ಜಿ.ಪಾಟೀಲ ಮಾತನಾದರು,
ಬಿಜೆಪಿ ಮಲ್ಲಣ್ಣ ಯಾದವಾಡ, ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ತಾ.ಪಂ ಸದಸ್ಯರಾದ ಮಾರುತಿ ಕೊಪ್ಪದ, ಎ.ಪಿ.ಎಮ.ಸಿ ಸದಸ್ಯ ದ್ಯಾವಪ್ಪ ಬೆಳವಡಿ, ಮುಸ್ಥಫಾ ದಾವಲಭಾಯಿ ಮಾಜಿ ಜಿ.ಪಂ ಅಧ್ಯಕ್ಷೆ ಮಹಾದೇವಿ ರೊಟ್ಟಿ, ಚಂದ್ರಕಾಂತ ಯತ್ನಟ್ಟಿ, ರತ್ನಾ ಯಾದವಾಡ, ವಿಜಯ ನಾಯಿಕ, ಚಂದ್ರಕಾಂತ ಹೊಸಮನಿ, ಕುಮಾರ ಈಳಿಗೇರ, ರಸೂಲ ಖಾಜಿ, ಚಂದ್ರು ಬೆಳವಡಿ, ಎಸ್‌.ಆರ್‌. ಗುರುಬಸಣ್ಣವರ, ಸುಧೀರ ಚೊಳಚಗುಡ್ಡ, ಮಾರುತಿ ಮಾನೆ, ಸೇರಿದತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...