ಅಹಿಂಸಾ ಮಾರ್ಗದ ಮೂಲಕ ಶಾಂತಿ ಬಯಸಿದ ಭಗವಾನ ಮಹಾವೀರ’

0
17
loading...

ವಿಜಯಪುರ: ಜೀವನದ ಕೊನೆಯ ಕ್ಷಣದವರೆಗೂ ಜಗತ್ತಿನ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕನ್ನು ಬೆಳಗಿಸಲು ಪ್ರಯತ್ನಿಸಿದ ಭಗವಾನ ಮಹಾವೀರ ಅವರ ಅಹಿಂಸಾ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿವಾಯ್‌ಎಸ್‌ಪಿ ಡಿ.ಅಶೋಕ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಚ್ಚಿ ಭವನದಲ್ಲಿ ಹಮ್ಮಿಕೊಂಡ ಭಗವಾನ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸ ನೀಡಿದ ಅಭಯ ಪೋರವಾಲ ಅವರು, ಸತ್ಯ, ಅಹಿಂಸೆ, ಶಾಂತಿ ಸಂದೇಶ ನೀಡಿದ, ಮಾನವ ಕಲ್ಯಾಣಾಭಿವೃದ್ದಿಗೆ ಶ್ರಮಿಸಿದ ಭಗವಾನ ಮಹಾವೀರರ ಸಂದೇಶಗಳು ಸಾರ್ವಕಾಲಿಕವಾಗಿವೆ. ಮುಂದಿನ ಪೀಳಿಗೆಗೆ ಭಗವಾನ ಮಹಾವೀರರ ತತ್ವಾದರ್ಶನಗಳನ್ನು ತಿಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಶೀತಲಕುಮಾರ ಓಗಿ ಅವರು ಮಾತನಾಡಿ, ಪ್ರತಿಯೊಂದು ಜೀವಿಯೂ ಸ್ವತಂತ್ರವಾಗಲು ಬಿಡಬೇಕು. ಅದರ ಮೇಲೆ ಒತ್ತಡವನ್ನು ಹೇರಬಾರದು. ಭಗವಾನ ಮಹಾವೀರರು ತಮ್ಮ ರಾಜ್ಯವನ್ನು ಬಿಟ್ಟು ಜನರ ಅಭಿವೃದ್ದಿಗಾಗಿ ದುಡಿದ ಮಹಾತ್ಮರು. ನಾವು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜೆ.ಟಿ.ತಳಕೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಯೋಜನಾಧಿಕಾರಿ ಅಲ್ಲಾಪುರ, ಲಾಲಚಂದ್ರ ಜೈನ್‌, ಸುಖರಾಜ್‌ ಜೈನ್‌, ಜಗರಾಜ್‌ ಜೈನ್‌, ದಿನೇಶ ಶಹಾ, ನಿತಿನ ರುಣವಾಲ, ಬಾಬುರಾವ ಆನಾಜಿ, ಮಹಾವೀರ ಪಾರೇಖ, ಬೆಣಿಕಾಂತ ಶಹಾ, ಇತರರು ಉಪಸ್ಥಿತರಿದ್ದರು.

loading...