ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂ ಮಹಿಳೆಯರು ಮುಂದೆ: ರಾಜೇಂದ್ರ ನಾಯ್ಕ

0
22
loading...

ಕಾರವಾರ: ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಬಾರದು ಎಂಬುದು ಹಳೆಯ ಮಾತು. ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದ ಮಹಿಳೆಯರು ಇಂದಿನ ಆಧುನಿಕ ಯುಗದಲ್ಲಿ ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ ಎಂದು ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಹೇಳಿದರು.
ಅವರು ನಗರದ ರಾಕ್ ಗಾರ್ಡ್‍ನ್‍ನಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸುಕ್ರಿ ಬೊಮ್ಮ ಗೌಡ ಅವರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರು ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಿದ್ದಾರೆ. ಎಂಜಿನೀಯರ್, ಡಾಕ್ಟರ್, ಪೈಲಟ್ ಸೇರಿದಂತೆ ಬಹಳ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಮುಂಚೂಣಿಗೆ ಬರುತ್ತಿದ್ದಾರೆ. ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ ಹೆಣ್ಣು ಪುರುಷರಿಗೆ ಸಮಾನವಾಗಿ ಕರ್ತವ್ಯ ನಿಭಾಯಿಸುತ್ತಾಳೆ. ಗಂಡಸರು ಮಹಿಳೆಯರನ್ನು ಗೌರವಪೂರ್ವಕವಾಗಿ ಆದರಿಸಬೇಕು ಎಂದು ಹೇಳಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನೆರೆದ ಮಹಿಳೆಯರನ್ನು ಅಭಿನಂದಿಸಿದರು.

ಶಾಸಕರಿಗೆ ಕಾದು ಸುಸ್ತಾದ ಮಹಿಳೆಯರು: ಸ್ಥಳೀಯ ಶಾಸಕರ ಬರುವಿಕೆಗಾಗಿ ಕಾಯುತ್ತಿದ್ದ ಸಂಘಟಕರು, ಮಧ್ಯಾಹ್ನ 3 ಗಂಟೆಗೆ ನಿಗದಿಯಾದ ಕಾರ್ಯಕ್ರಮವನ್ನು ಸಾಯಂಕಾಲ 5 ಗಂಟೆಯಾದರೂ ಪ್ರಾರಂಭಿಸಿರಲಿಲ್ಲ. ಪ್ರಾರಂಭಿಸುವ ಹಂತಕ್ಕೆ ಬಂದಾಗ ವಿದ್ಯುತ್ ಕೈಕೊಟ್ಟಿದ್ದರಿಂದ ಕಾರ್ಯಕ್ರಮ ಇನ್ನಷ್ಟು ತಡವಾಗಿ ಪ್ರಾರಂಭಿಸಲಾಯಿತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಜೇಂದ್ರ ನಾಯ್ಕ ಅವರು, ಸಮಾರಂಭದಲ್ಲಿ ದೂರದ ಹಳ್ಳಿಗಳಿಂದ ಬಂದ ಮಹಿಳೆಯರನ್ನು ಈ ರೀತಿ ತಡ ಮಾಡಿ ತೊಂದರೆ ನೀಡಬಾರದು. ಅಲ್ಲದೇ ಜನಪ್ರತಿನಿಗಳಿಗೆ ಸಮಯದ ಪರಿಜ್ಞಾನ ಅತೀ ಅವಶ್ಯಕವಾಗಿದೆ. ಸಂಘಟಕರು ಕೂಡ ರಾಜಕಾರಣಿಗಳ ಬರುವಿಕೆಗೆ ಕಾಯಬಾರದು. ಯಾವುದೇ ಕಾರ್ಯಕ್ರಮವನ್ನು ನಿಗದಿತ ಸಮಯದೊಳಗೆ ಮಾಡುವಂತಾಗಬೇಕು ಎಂದು ಅಕಾರಿಗಳಿಗೆ ಕಿವಿ ಮಾತು ಹೇಳಿದರು.

loading...