ಆರೋಗ್ಯ ಕೇಂದ್ರದ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ

0
22
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಮೂರೂರು-ಕಲ್ಲಬ್ಬೆ ಗ್ರಾಮ ಪಂಚಾಯತದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಕಾಮಗಾರಿಗೆ ಶಾಸಕಿ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಅವರು ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯು ಟಿ ಖಾದರ್‌ ಅವರು ಆರೋಗ್ಯ ಸಚಿವರಾಗಿದ್ದಾಗ ಅಧಿವೇಶನದ ಪ್ರಥಮ ಅವಧಿಯಲ್ಲಿಯೇ ಈ ವಿಷಯವನ್ನು ಪ್ರಸ್ಥಾಪಿಸಿದ್ದೆ. ಜನರ ಅನೂಕಲಕ್ಕೆ ತಕ್ಕಂತೆ ಸ್ಥಳವನ್ನು ನಿಗದಿ ಪಡಿಸಬೇಕಾಗಿದ್ದರಿಂದ ಸ್ವಲ್ಪ ತಡವಾಗಿದೆ. ಮೂರೂರಿನ ಬದಲು ಕಲ್ಲಬ್ಬೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗುತ್ತಿರುವುದಕ್ಕೆ ಯಾರೂ ಬೇಸರ ಪಡಬಾರದು. ಮತ್ತು ಈ ಆಸ್ಪತ್ರೆಯ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು.
ಆದರೆ ಶಾರದಾ ಶೆಟ್ಟಿ ಅವರು ಮಾಡಿದಷ್ಟು ಅಭಿವೃದ್ದಿ ಕೆಲಸವನ್ನು ಈ ವರೆಗೆ ಯಾರೂ ಮಾಡಿಲ್ಲ. ಸರಕಾರದಿಂದ ಆಗಬೇಕಾದ ಪ್ರಾಥಮಿಕ ಕೆಲಸಗಳು ಆರೋಗ್ಯ, ಸಾರಿಗೆ, ನೀರು, ಬೆಳಕು ಹಾಗೂ ರಸ್ಥೆ ವ್ಯವಸ್ಥೆ. ನಮ್ಮ ಶಾಸಕರು ನಮಗೆ ಇವೆಲ್ಲವುಗಳನ್ನು ಒದಗಿಸಿಕೊಟ್ಟಿರುವುದು ಸಂತಸದ ಸಂಗತಿ “ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಬ್ಬೆ ಗ್ರಾ.ಪಂ ಅಧ್ಯಕ್ಷೆ ಶೋಭಾ ನಾಯ್ಕ ವಹಿಸಿದ್ದರು. ಪ್ರಾರಂಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಮೂರೂರು ಗ್ರಾ.ಪಂ ಅಧ್ಯಕ್ಷೆ ಕಲ್ಪನಾ ಗೌಡ, ಹರೀಶ್‌ ಭಟ್ಟ್‌, ರವಿ ಗೌಡ, ಆರ್‌.ಜಿ.ಗುನಗಿ, ಡಾ.ಕಿಶೋರ್‌ ಕುಮಾರ್‌, ಎಸ್‌.ವಿ.ಮಾಹುಲಿ, ನಾಗವೇಣಿ ಮುಕ್ರಿ, ಗೀತಾ ಹೆಗಡೆ, ವಿ.ಎಲ್‌.ನಾಯ್ಕ, ತಾರಾ ಗೌಡ ಹಾಗೂ ಊರನಾಗರಿವರು ಉಪಸ್ಥಿತರಿದ್ದರು.

loading...