ಇಂದಿರಾ ಕ್ಯಾಂಟೀನ್ ದಿನಕ್ಕೆ 900 ಆಹಾರ: ರುಚಿ-ಶುಚಿಗೆ ಉತ್ತಮ ಸ್ಪಂದನೆ

0
21
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪಟ್ಟಣದಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್‍ದಲ್ಲಿ ನಿತ್ಯ ಗರಿಷ್ಠ 600 ಜನರಿಗೆ ನೀಡುತ್ತಿದ್ದ ಆಹಾರವನ್ನು 900 ಜನರಿಗೆ ದೊರೆಯುವ ಸಂಖ್ಯೆಗೆ ಹೆಚ್ಚಿಸಲಾಗಿದೆ.
ಪಟ್ಟಣದ ಭೌಗೋಳಿಕವಾಗಿ ಹಾಗೂ ಜನಸಾಂದ್ರತೆಯ ಅನುಗುಣವಾಗಿ ಈ ಮಿತಿಯನ್ನು ಹೆಚ್ಚಿಸಲು ತುಂಬಾ ಅವಶ್ಯಕತೆ ಇದ್ದು, ಕಾರಣ ಹಳಿಯಾಳ ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 600 ಜನರ ಮಿತಿಯಿಂದ 900 ಜನರಿಗೆ ಮಿತಿಯನ್ನು ಏರಿಸಲಾಗುವುದೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. (ಬೆಳಿಗಿನ ಉಪಹಾರ 200, ಮಧ್ಯಾಹ್ನ ಹಾಗೂ ರಾತ್ರಿ ಊಟ ತಲಾ 200)

ಬಸ್ ನಿಲ್ದಾಣ ಹಾಗೂ ವಿವಿಧ ತಾಲೂಕಾ ಕಚೇರಿಗಳ ಸಮೀಪವರ್ತಿ ಸ್ಥಳದಲ್ಲಿ ಪ್ರಾರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯವರು ಲೋಕಾರ್ಪಣೆಗೊಳಿಸಿದ್ದರು. ಇಂದಿರಾ ಕ್ಯಾಂಟೀನ್‍ಗೆ ವ್ಯವಸ್ಥಿತ ಕಟ್ಟಡ ಇದ್ದು, ಉಪಹಾರ ಮತ್ತು ಊಟಕ್ಕೆ ಶೇ. 60 ರಷ್ಟು ಮೊತ್ತವನ್ನು ಸಹಾಯಧನ ರೂಪದಲ್ಲಿ ಭರಿಸುತ್ತದೆ. ಹೀಗಾಗಿ ಅವಶ್ಯಕತೆ ಇರುವವರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕೆಂದು ಸಚಿವರು ಕೋರಿದರು.
ಅತಿ ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ನೀಡುವ ಕರ್ನಾಟಕ ಸರಕಾರದ ಜನಪರವಾದ ಮಹತ್ವಾಕಾಂಕ್ಷಿ ಯೋಜನೆಯ ಇಂದಿರಾ ಕ್ಯಾಂಟೀನ್ ಅನ್ನು ಹಳಿಯಾಳ ಪಟ್ಟಣದಲ್ಲಿ ಮಾರ್ಚ್ 14 ರಂದು ಆರಂಭಿಸಲಾಗಿದ್ದು, ಪ್ರತಿದಿನ ಉಪಹಾರ ಹಾಗೂ ಊಟಕ್ಕೆ ಭರಪೂರ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿರುವದನ್ನು ಕಾಣಬಹುದಾಗಿದೆ. ಇದು ಉಪಹಾರ ಹಾಗೂ ಊಟದ ಶುಚಿ ಮತ್ತು ರುಚಿಯ ಉತ್ತಮ ಫಲಿತಾಂಶವಾಗಿದೆ.

loading...