ಉದ್ಯಾನವನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಿದ್ದತೆ

0
17
loading...

ನರಗುಂದ: ಇತಿಹಾಸದ ಸಂರಕ್ಞಣೆ ಮಾಡುವ ದೃಷ್ಟಿಯಿಂದ ಹಾಗೂ ಈ ಕ್ಷೇತ್ರವನ್ನು ಆಳಿದ ಬಾಬಾಸಾಹೇಬ ಭಾವೆಯವರ ಕಾಲದಲ್ಲಿಯ ಗುಡ್ಡದ ಮೇಲ್ಬಾಗದಲ್ಲಿರುವ ಕೋಟೆ ಭಾಗದ ಸಂರಕ್ಷಣೆ ಮತ್ತು ಗುಡ್ಡದ ಬದಿಯಲ್ಲಿ ಉದ್ಯಾನವನ ನಿರ್ಮಿಸುವ ಉದೇಶ ಹೊಂದಿದ ವಲಯ ಅರಣ್ಯ ಇಲಾಖೆ ಕಳೆದ ವರ್ಷದ ಡಿಸೆಂಬರ್‌ದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಗುಡ್ಡದ ಬದಿಯ ಸುಮಾರು 25 ಹೆಕ್ಟರ್‌ ಜಾಗೆಯನ್ನು ಉದ್ಯಾನವನ ನಿರ್ಮಾಣಕ್ಕೆ ಪುರಸಭೆ ನೀಡಿದೆ. ಇದರಲ್ಲಿ ಮಕ್ಕಳಿಗಾಗಿ ವಿವಿಧ ಆಟದ ಸಾಮಗ್ರಿಗಳ ಅಳವಡಿಕೆ, ಹಾಗೂ ಸಸ್ಯ ಉದ್ಯಾನವನ, ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸುವುದು, ಪ್ರವಾಸಿ ತಾಣವಾಗಿ ಮಾರ್ಪಡಿಸುವುದು ಹಾಗೂ ಯಾತ್ರಿಗಳು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಉದ್ಯಾನವನದಲ್ಲಿ ವಿಶ್ರಾಂತಿಗಾಗಿ ಪರಗೋಲ, ಹಾಗೂ ವಿಹಾರ್ಥವಾಗಿ ಬಂದ ಸಾರ್ವಜನಿಕರಿಗೆ ಕುಳಿತಕೊಳ್ಳಲು ಸಿಮೆಂಟ್‌ ಆಸನಗಳು ಮತ್ತು ಗುಡ್ಡದ ಮೇಲ್ಬಾಗದಲ್ಲಿರುವ ಧ್ವಜ ಸ್ಥಂಬದ ಸುತ್ತಲೂ ಕಟಂಜರಿಗಳ ನಿರ್ಮಾಣ ಹಾಗೂ ಬಾಬಾ ಸಾಹೇಬ ಅವರ ಕಾಲದಲ್ಲಿದ್ದ ಗುಡ್ಡದ ಮೇಲ್ಬಾಗದಲ್ಲಿರುವ ಕೋಟೆ ಗೋಡೆ ರಕ್ಷಣೆ ಹಾಗೂ ಗುಡ್ಡದ ಮೇಲ್ಬಾಗದಲ್ಲಿರುವ ಪುಷ್ಕರಣೆ ಮತ್ತು ಇತರ ಐತಿಹಾಸಿಕ ಸಂರಕ್ಷಣೆ ಸ್ಮಾರಕಗಳ ರಕ್ಷಣೆ ಇದರ ಜೊತೆಗೆ ಬಾಬಾಸಾಹೇಬರು ಆಳಿದ ಕಾಲದಲ್ಲಿದ್ದ ಅವರು ಬಳಸಿದ ಖಡ್ಗ ಹಾಗೂ ಇತರ ಅವರ ಕಾಲಾವಧಿಯಲ್ಲಿದ್ದ ಎಲ್ಲ ವಸ್ತುಗಳ ಸಂಗ್ರಹಾಲಯ ಮತ್ತು ಗುಡ್ಡದ ಬದಿಯಲ್ಲಿ ರಂಗಮಂದಿರ ಮಾಡುವ ಗುರಿ ವಲಯ ಅರಣ್ಯ ಇಲಾಖೆ ವಹಿಸಿಕೊಂಡಿದೆ.
ಈ ಕುರಿತು ವಲಯ ಅರಣ್ಯ ಇಲಾಖೆ ಅಧಿಕಾರಿ ಕಿರಣ ಅಂಗಡಿ ವಿವರ ನೀಡಿ, ನರಗುಂದ ಗುಡ್ಡದಲ್ಲಿ ಐತಿಹಾಸಿಕವಾದ ಬಾಬಾ ಸಾಹೇಬರ ಕಾಲದಲ್ಲಿಯ ಎಲ್ಲ ಸ್ಮಾರಕಗಳ ರಕ್ಷಣೆಗಾಗಿ ಈಗಾಗಲೇ ವಲಯ ಅರಣ್ಯ ಇಲಾಖೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರವಾಸಿತಾನವನ್ನಾಗಿ ಮಾಡಲು ಈಗಾಗಲೇ ಸಿದ್ದತೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಪ್ರವಾಸೊಧ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಹಚ್ಚಿ ಚಿನ್ನದ ಗಣಿ ನಿಗಮಕ್ಕೆ ಮತ್ತು ಜಿಲ್ಲಾ ಪಂಚಾಯತಿಗೆ 7.5 ಕೋಟಿ ರೂದ ಪ್ರಸ್ತಾವನೆ 2017ರ ಅಗಷ್ಟದಲ್ಲಿ ಕಳಿಸಲಾಗಿದೆ. ಈಗಾಗಲೇ ಕಳೆದ ವರ್ಷದ ಡಿಸೆಂಬರ್‌ದಲ್ಲಿ 40 ಲಕ್ಷ ಬಿಡುಗಡೆಗೊಂಡಿದ್ದು, ಹಂತ ಹಂತವಾಗಿ ಕಾರ್ಯ ನಡೆಸಲಾಗುತ್ತಿದೆ. 2020 ರೊಳಗಾಗಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

loading...