ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳಿ: ಪಾಟೀಲ

0
7
loading...

ಹಾನಗಲ್ಲ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದಿಂದ ವಾಣಿಜ್ಯೋತ್ಸವ ‘ಇನ್‌ಸ್ಪ್ರೀಯೋ 2018′ ಕಾರ್ಯಕ್ರಮವನ್ನು ಜಿಲ್ಲಾ ಚಾರ್ಟೆಡ್‌ ಅಕೌಂಟಂಟ್‌ ಸಚಿನ್‌ ಪಾಟೀಲ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬನ ಜೀವನಕ್ಕೆ ನಾಂದಿ, ವಿದ್ಯಾರ್ಥಿ ಜೀವನ ಮುಗಿದಮೇಲೆ ಪ್ರತಿಯೊಬ್ಬನು ತನ್ನ ಜೀವನ ಹೊಡೆದಾಟಕ್ಕೆ ಉದ್ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶಗಳು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು, ಚಾರ್ಟೆಡ್‌ ಅಕೌಂಟಂಟ್‌ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಯಾಗಿ ಆಗಮಿಸಿದ್ದ ಸವಣೂರ ವಿಭಾಗದ ಅಸಿಸ್ಟಂಟ್‌ ಕಮಿಷನರ್‌ ಮಹ್ಮದ್‌ ರೋಷನ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ, ಶ್ರದ್ಧೆ, ಶಿಸ್ತು, ನೈತಿಕ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸಿದರು.
ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳ, ರಸಪ್ರಶ್ನೆ, ಪ್ರಚಲಿತ ವಿಷಯಗಳ ಕುರಿತು ವಿಷಯ ಮಂಡನೆ ಹಾಗೂ ತ್ಯಾಜ್ಯ ವಸ್ತುಗಳ ಮರುಬಳಕೆ ಎಂಬ 4 ವಿವಿಧ ಬಗೆಯ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮಹ್ಮದ್‌ ಶರೀಫ್‌ ಹಾನಗಲ್ಲ ವಹಿಸಿದ್ದರು. ಹಾಗೂ ಕಾಲೇಜಿನ ಬೋಧಕ/ಬೋಧಕೇತರ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

loading...