ಉದ್ಯೋಗ ಹೊಂದಲು ಸಂವಹನ ಕೌಶಲ್ಯ ಅತ್ಯವಶ್ಯ

0
18
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆ ಮತ್ತು ಕಠಣ ಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಪ್ರತಿಷ್ಠತ ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತಿಭೆ ಮತ್ತು ಸಂವಹನ ಕೌಶಲ ಹೊಂದಿರುವುದು ಮುಖ್ಯವಾಗಿರುತ್ತದೆ ಎಂದು ಪಿರಮಲ್‌ ಸ್ವಾಸ್ಥ್ಯ ಕಂಪನಿಯ ಎಚ್‌.ಆರ್‌. ಸದ್ರಾಕ್‌ ತಿಳಿಸಿದರು.
ಅವರು ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಉದ್ಯೋಗ ಮತ್ತು ಮಾಹಿತಿ ಘಟಕದಿಂದ ಹಮ್ಮಿಕೊಂಡಿದ್ದ ಕ್ಯಾಂಪಸ್‌ ಸಂರ್ದಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಲು ಸಂವಹನ ಕೌಶಲ ಅತ್ಯವಶ್ಯಕ. ಆದುದರಿಂದ ವಿದ್ಯಾರ್ಥಿಗಳು ಅಗತ್ಯವಾದ ಭಾಷೆಯ ಸಂವಹನ ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಉದ್ಯೋಗವೆಂಬುದು ಮೂಲಭೂತವಾದ ಓಟವಿದ್ದ ಹಾಗೆ ಯಾರು ತಮ್ಮ ಓಟದಲ್ಲಿ ಮುಂದೆ ಬರುತ್ತಾರೋ ಅವರಿಗೆ ಉದ್ಯೋಗ ಕಟ್ಟಿಟ್ಟ ಬುತ್ತಿ ಎಂದರು.
ಪ್ರಾಚಾರ್ಯ ಎಸ್‌.ಜಿ.ಕೇಶಣನವರ ಮಾತನಾಡಿ, ಜೀವನದಲ್ಲಿ ಧೈರ್ಯದಿಂದ ಮುನ್ನುಗಿದಾಗ ಮಾತ್ರ ಯಶಸ್ಸು ಸಾಧ್ಯ. ಜೀವನ ನಿರಂತರ ಚಲಿಸುವ ಪ್ರಕ್ರಿಯೆಯಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಧೈರ್ಯ ಮುಖ್ಯ. ಸಾಕಷ್ಟು ವಿದ್ಯಾರ್ಥಿಗಳು ಕೌಶಲ್ಯ ಹೊಂದಿದ್ದರೂ ಅವರಲ್ಲಿ ಸಂಪರ್ಕದ ಕೊರತೆ ಇದೆ.ವಿದ್ಯಾರ್ಥಿಗಳು ಉದ್ಯೋಗದಾತರಾಗಲು ಇಂದಿನ ಜಾಗತೀಕರಣ ಸಂದರ್ಭದಲ್ಲಿ ಜಾತಿ, ಧರ್ಮಗಳ ಹಿನ್ನೆಲೆ ಹಾಗೂ ಪ್ರಭಾವಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಹೊಂದಿದ ಶ್ರಮಪಡುವ ಪ್ರವತ್ತಿ, ಕಲಿಕೆಯ ಆಸಕ್ತಿ, ಜ್ಞಾನದ ಹಸಿವು, ನಿಷ್ಠೆ ಹಾಗೂ ಜೀವನದ ಬದ್ಧತೆ ಅವರು ಉದ್ಯೋಗ ಕೈಗೊಳ್ಳುವಲ್ಲಿ ಪ್ರಮುಖವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯೋಗ ಮಾಹಿತಿ ಘಟಕದ ಡಾ. ಎಂ.ಆರ್‌.ಕಿವರಾಮ ಮತ್ತು ಡಾ. ಸಂದೀಪಕುಮಾರ.ಕೆ ವಿದ್ಯಾರ್ಥಿಗಳಿಗೆ ಉದ್ಯೋಗದ ಮಾಹಿತಿ ನೀಡಿದರು. ಉಪನ್ಯಾಸಕ ಎ.ಜೆ. ಹಂಡಿ, ಎಂ.ಜಿ.ತುಪ್ಪದ, ಪಾಟೀಲ ಇತರರು ಉಪಸ್ಥಿತರಿದ್ದರು.

loading...