ಎರಡು ಸರ್ಕಾರಗಳು ರೈತರ ನೆರವಿಗೆ ಬಾರದೆ ಕೆಸರೆಚಾಟಕ್ಕೆ ಸೀಮಿತವಾಗಿವೆ: ಮಲ್ಲಿಕಾರ್ಜುನ

0
23
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ರಾಜ್ಯದಲ್ಲಿ ಕಳೆದ ಐದಾರು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು ರೈತರ ಜೀವನ ಚಿಂತಾ ಜನಕವಾಗಿದೆ. ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಯೊಚಿಸುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಗಳು ರೈತರ ನೆರವಿಗೆ ಧಾವಿಸದೆ ತಮ್ಮ ಚುನಾವಣೆ ಪ್ರಚಾರಕ್ಕಾಗಿ ಪರಸ್ಪರ ಕೆರಚಾಟ ಎರಚುತ್ತಾ ರೈತರಿಗೆ ಮೋಸ ಮಾಡುತ್ತಿವೆ ಎಂದು ಜೆಡಿಎಸ್‌ ಜಿಲ್ಲಾ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಹುಂಬಿ ಹೇಳಿದರು.
ಸೋಮವಾರ ನೂರಾರು ಜೆಡಿಎಸ್‌ ಕಾರ್ಯಕರ್ತರು ರೈತಭವನದಿಂದ ಉಪವಿಭಾಗಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ ಮೂಲಕ ಆಗಮಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಹಾಕುತ್ತಾ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರೈತನ ಬಗ್ಗೆ ಕಾಳಜಿ ಇಲ್ಲದದ ಸರ್ಕಾರ, ರೈತರನ್ನು ಪರುತಪಿಸುವಂತೆ ಮಾಡುತ್ತಿವೆ ಆದ್ದರಿಂದ ರೈತರ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೆರಿಸುವಂತೆ ಆಗ್ರಹಿಸಿದರು.
ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸಲು ತಾವುಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ದೇಶದ ಪ್ರಧಾನ ಮಂತ್ರಿಗಳಿಗೆ ತಿಳಿಸಿ ಕರ್ನಾಟಕದ ಜನತೆಯ ಹಿತಾಸಕ್ತಿ ಕಾಪಾಡಬೇಕೆಂದು ಒತ್ತಾಯಿಸಿದರು. ರೈತರ ಈ ಬೆಡಿಕೆಗಳು ಈಡೇರದಿದ್ದರೆ ಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಿವಾನಂದ ಬೇಟಗೇರಿ, ಸಂಗಯ್ಯ ದಾಭಿಮಠ, ದಾನಪ್ಪಗೌಡ ಕುಸಲಾಪೂರ, ನಾಗಪ್ಪ ಬೋಳಶಟ್ಟಿ, ಅರ್ಜುನ ಕಲಕೂಟಕರ, ಅಬುಬುಕರ ಕಲ್ಲೂರ, ಪ್ರಸಾದ ದೇಶಪಾಂಡೆ, ಮುದಕಪ್ಪ ಮಾಡಲಗಿ ಹಾಗೂ ನೂರಾರು ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

loading...