ಎಲ್ಲರೂ ಒಂದೆ ಎಂಬ ಎಲ್ಲರಿಗೂ ಇರಬೇಕು: ಸಚಿವ ಕುಲಕರ್ಣಿ

0
22
loading...

ಕನ್ನಡಮ್ಮ ಸುದ್ದಿ- ಧಾರವಾಡ: ಆತ್ಮಾನಂದ ನಗರದಲ್ಲಿ ಗೊಂದಳಿ ಸಮಾಜ ಸಂಘದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗೊಂದಳಿ ಸಮಾಜ ಸೌಹಾರ್ಧಯುತವಾಗಿದ್ದು ಎಲ್ಲರೂ ಒಂದೆ ಎಂಬ ಭಾವನೆಯಿಂದ ಮುನ್ನಡೆಯಬೇಕು. ಮುಸ್ಲಿಂ ಕ್ರೈಸ್ತ ಬ್ರಾಹ್ಮಣ ಲಿಂಗಾಯತ ಎಲ್ಲ ಜಾತಿಯ ಜನರು ಅವರ ಅವರ ಧರ್ಮಕ್ಕೆ ತಕ್ಕ ಆಚರಣೆ ಮಾಡಬಹುದು ಆದರೆ ಸಮಾಜದಲ್ಲಿ ಎಲ್ಲರೂ ಒಂದೆ ಎಂಬ ಅರಿವು ಎಲ್ಲರಿಗೂ ಇರಬೇಕು. ಅತ್ಮಾನಂದ ನಗರದಲ್ಲಿ ಒಳ ಚರಂಡಿ ಯೊಜನೆ ಕಾಂಕ್ರೆಟ ರಸ್ತೆ ಕಾಮಗಾರಿಯು ಶೀಘ್ರದಲ್ಲಿ ಪ್ರಾರಂಭ ಮಾಡುತ್ತೆನೆೆಂದರು.
ಈ ಸಂದರ್ಭದಲ್ಲಿ ಗೊಂದಳಿ ಸಮಾಜದಿಂದ ಮನವಿ ಸಲ್ಲಿಸಿತು. ನಾವು ಅಲೇಮಾರಿ ಜನಾಂಗ ನಮ್ಮ ಮಕ್ಕಳಿಗೆ ಯಾವುದೆ ರೀತಿ ಶಿಷ್ಯ ವೇತನ ಇಲ್ಲಾ ಸರ್ಕಾರದಿಂದ ಯೊಜನೆಗಳು ಸಿಗುತ್ತಿಲ್ಲ. ಬಾಂಡೆಗಳನ್ನು ಮಾರಿ ಕೌದಿಗಳನ್ನು ಹೊಲಿದು ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ ನಮಗೆ ವಸತಿ ಅವಕಾಶ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿತು. ಈ ಸಂದರ್ಭದಲ್ಲಿ ಸಂಘದ ನಾಗೆಂದ್ರ ಧುಮ್ಮಾಳೆ, ಶಿವಾಜಿ ಬಾಗಲೆ,ದೀಲಿಪ ಸಿಂಗನಾಥ,ಆನಂದ ಸಿಂಗನಾಥ,ರಾಜು ವೆಲ್ಕರ ಉಪಸ್ಥಿತರಿದ್ದರು. ಚೇತನ ಮಾನೆ, ಸ್ವಾಗತಿಸಿದರು. ವಾಸು ಜೊಶಿ ನಿರೂಪಿಸಿದರು. ಜ್ಞಾನೆಶ್ವರ ಬಾಗಲೆ ವಂದಿಸಿದರು.

loading...