ಒಗ್ಗಟ್ಟಿನಿಂದ ಯಶಸ್ವಿಯಾಗಿ ಬದುಕಲು ಸಾಧ್ಯ: ಕಳಕಪ್ಪ

0
15
loading...

ಮುಂಡರಗಿ: ಮಾದಿಗ ಸಮಾಜ ರಾಜ್ಯದಲ್ಲಿ ಒಟ್ಟಾರೆ 60 ಲಕ್ಷ ಜನಸಂಖ್ಯೆ ಹೊಂದಿದ್ದರು ಆದರೆ ಸಮಾಜ ಇನ್ನು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಪಟ್ಟಣದ ವ್ಹಿ.ಜಿ.ಲಿಂಬಿಕಾಯಿ ಬಯಲು ಜಾಗೆಯಲ್ಲಿ ರವಿವಾರ ಮಾದಿಗ ಸಂಘಟನೆಗಳ ಒಕ್ಕೂಟದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂಡರಗಿ ಪಟ್ಟಣದಲ್ಲಿ ಇಂತಹ ಬಹುದೊಡ್ಡ ಸಮಾವೇಶ ಮಾಡಿರುವುದು ಸ್ವಾಗತಾರ್ಹ ಮಾದಿಗ ಸಮಾಜ ಜಾಗೃತರಾಗಿ ಶಿಕ್ಷಣವನ್ನು ಪಡೆದಲ್ಲಿ ಎಲ್ಲವನ್ನು ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಶಿರಹಟ್ಟಿ ಮೀಸಲು ಕ್ಷೇತ್ರವಿದ್ದರೂ ಮಾದಿಗರಿಗೆ ಆದ್ಯತೆ ಕಡಿಮೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಒಗ್ಗಟ್ಟಿನಿಂದ ಸಮಾಜ ಮುನ್ನಡೆಸಿದಲ್ಲಿ ಪ್ರತಿಯೊಬ್ಬರು ಯಶಸ್ವಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವಮೂರ್ತಿ ಶಿವಶರಣ ಮಾದಾರ ಚನ್ನಯ್ಯ ಸ್ವಾಮಿಗಳು, ಮಾತನಾಡಿ ಸಮಾಜದ ಪ್ರಕ್ರಿಯೆ ಯಾವತ್ತು ನಿಲ್ಲುವುದಿಲ್ಲ. ಪ್ರತಿಯೊಬ್ಬ ಯುವಕರಲ್ಲಿ ಸ್ವಾಭಿಮಾನ ಹುಟ್ಟು ಹಾಕಿದೆ. ಎಲ್ಲಾರೂ ರಾಜಕೀಯವಾಗಿ ಜಾಗೃತರಾಗಬೇಕು ಸಮಾಜದ ಹೋರಾಟಕ್ಕಾಗಿ ಒಂದೊಂದು ಯುವಕರನ್ನು ತಯಾರಿಸುವ ಕೆಲಸವಾಗಬೇಕಿದೆ. ಕರ್ನಾಟಕದಲ್ಲಿ 36 ಎಸ್‌.ಸಿ ಮೀಸಲಾತಿ ಎಲ್ಲಾ ಕ್ಷೇತ್ರಗಳಲ್ಲಿ ಮಾದಿಗರ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಭಯ ಹುಟ್ಟಿಸುವ ಕೆಲಸವನ್ನು ಮಾದಿಗ ಸಮಾಜ ಮಾಡಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಪಂ.ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿ ಸ್ವಾತ್ಯಂತ್ರ ಸಿಕ್ಕು 70 ವರ್ಷ ಗತಿಸಿದರು ಮಾದಿಗ ಸಮಾಜ ಇನ್ನು ಒಗ್ಗೂಡಿಕೆಯಾಗಿಲ್ಲ. ಮಾದಿಗ ಸಮಾಜದೊಂದಿಗೆ ಎಲ್ಲಾ ಜಾತಿಗಳು ಹೊಂದಾಣಿಕೆಯಿಂದ ಇದ್ದು ಆರ್ಥಿಕವಾಗಿ&ಶೈಕ್ಷಣಿಕವಾಗಿ ಹಿಂದುಳಿಯಲಾಗಿದೆ.
70ಲಕ್ಷ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೆ 2018 ಚುನಾವಣೆಯಲ್ಲಿ ಮಾದಿಗ ಸಮಾಜ ಕಡೇಗಣಿಸಿದರೇ ತಕ್ಕ ಪಾಠ ಕಲಿಸಲಾಗುವುದು ಅದಲ್ಲದೇ ನ್ಯಾಯಾಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆಗೆ ಸಿಎಂ ತೀವ್ರವಾಗಿ ಸಭೆ ಕರೆದು ಆಯೋಗ ಜಾರಿಗೆ ಮಾಡಿದಲ್ಲಿ ರಾಜ್ಯದ ಮಾದಿಗ ಜನಾಂಗ ಹಗಲಿರುಳು ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸುಜಾತಾ ದೊಡ್ಡಮನಿ ಮಾತನಾಡಿ ಮುಂಡರಗಿಯಲ್ಲಿ ಮಾದಿಗ ಜಿಲ್ಲಾ ಸಮಾವೇಶ ನಡೆಸಲು ಹಲವಾರು ಅಡ್ಡಿ ಆತಂಕಗಳು ಬಂದರು ಭಯ ಪಡದೇ ಸಂಘಟಿಕರ ಜೊತೆಗೆ ಮಾದಿಗ ಸಮಾಜದ ಹಲವಾರು ರಾಜಕೀಯ ಮುಖಂಡರುಗಳಿದ್ದು ಯಾರು ಕೂಡಾ ವೇದಿಕೆಗೆ ಬರದೇ ಇರುವುದಕ್ಕೆ ಮುಖ್ಯವಾಗಿ ಸಮಾಜ ಒಗ್ಗೂಡಿವಿಕೆ ಎಂದು ಹೇಳಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಗೌರವ ಅಧ್ಯಕ್ಷತೆ ವಹಿಸಿದ್ದ ಮೋಹನ ಆಲಮೇಲಕರ ಪ್ರೋ.ಸತೀಶ ಪಾಶಿ, ಜಿ.ಪಂ.ಸದಸ್ಯ ಈರಣ್ಣ ನಾಡಗೌಡ್ರ, ಮಾತನಾಡಿದರು. ಸೋಮಣ್ಣ ಹೈತಾಪೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಂಜಯ ಚೌಡಾಳ ಮಾತನಾಡಿದರು ಪ್ರೋ.ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಗದಿಗೆಪ್ಪಜ್ಜನವರು,ಗುರುನಾಥ ದಾನಪ್ಪನವರ,ರಮೇಶ ಮುಂದಿನಮನಿ,ಅಶೋಕ ಕುಡತಿನಿ, ಹೊಳೆಆಲೂರ ಜಿ.ಪಂ.ಸದಸ್ಯ ಪಡಿಯಪ್ಪ ಪೂಜಾರ, ವೆಂಕಟೇಶ ದ್ವಾಸಲಕೇರಿ, ಎಚ್‌.ಡಿ.ಪೂಜಾರ, ಡಿ.ಜಿ.ಪೂಜಾರ, ಮಾರುತಿ ಹೊಸಮನಿ, ದೇವಪ್ಪ ಕಂಬಳಿ, ಹೇಮಗಿರೀಶ ಹಾವಿನಾಳ, ತಾಲೂಕಾ ಮಾದಿಗ ಮಹಾಸಭಾ ಅಧ್ಯಕ್ಷ ದುರಗಪ್ಪ ಹರಿಜನ ಲಕ್ಷ್ಮಣ ತಗಡಿನಮನಿ,ಹೆಚ್‌.ಡಿ.ಪೂಜಾರ, ಮರಿಯಪ್ಪ ಸಿದ್ದಣ್ಣವರ, ನಿಂಗರಾಜ ಹಾಲಿನವರ,ಮಾರುತಿ ಹೊಸಮನಿ, ಅಶೋಕ ಹೊಸಮನಿ, ಚಂದ್ರು ಹರಿಜನ, ಶಿವು ಹರಿಜನ, ಸೋಮಣ್ಣ ಹೈತಾಪೂರ, ಲಕ್ಷ್ಮಣ ದೊಡ್ಡಮನಿ, ಕೆ.ಎನ್‌,ದೊಡ್ಡಮನಿ,ಪರಶುರಾಮ ಮ್ಯಾಗೇರಿ, ಸಹದೇವಪ್ಪ ಡಂಬಳ. ಎಂ.ಎಂ.ಗುಂಡಿಕೇರಿ, ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಸಮುದಾಯದ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...