ಕಬ್ಬಿನ್ ಬಿಲ್ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

0
29
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ನೀಡಿಲ್ಲ. ಎಂದು ಆರೋಪಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗ್ಗಿದರು.
ಕಳೆದ 2013-14 ಮತ್ತು 2015-16 ರಂದು ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರೈತರಿಂದ ನೀಡಬೇಕಾದ ಕಬ್ಬಿನ ಬಿಲ್ ನೀಡದೇ ರೈತರಿಗೆ ಮೋಸ ಮಾಡುತ್ತಿದೆ. ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು ಯಾವುದೆ ಪ್ರಯೋಜನೆಯಾಗಿಲ್ಲ. ಕೂಡಲೇ ಕಬ್ಬಿನ ಬಿಲ್ ಕೂಡಿಸುವಂತೆ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು. ಒಂದು ವೇಳೆ ಕಬ್ಬಿನ್ ಬಿಲ್ ನೀಡದೆ ಹೋದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಜಿಲ್ಲಾಡಳಿತಕ್ಕೆ ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸೂರ್ಯಕಾಂತ ಶೀಗಿಹಳ್ಳಿ, ಬಸಪ್ಪ ಚಿಕ್ಕೇರಿ, ಕಸ್ತೂರಿ ಹಳೇಮನಿ, ಮಂಜುನಾಥ ಹಿತ್ತಲಮನಿ, ಗಂಗಪ್ಪ ಹಿತ್ತಲಮನಿ, ಯಲ್ಲಪ್ಪ ಎಡಾಲ, ಈರಪ್ಪಾ ಬೆಳವಡಿ, ಈರಪ್ಪಾ ಕೊಟಗಿ, ನಾಗಪ್ಪಾ ಬೋಗುರ, ಗದಗಯ್ಯ ಶಾಪೂರಮಠ, ವೀರಭದ್ರ ದಾಸ್ತಿಕೊಪ್ಪ, ರಾಜು ಸೋದರ, ಮಲ್ಲಪ್ಪ ಕುರಗುಂದ, ನಿಂಗಪ್ಪ ಹಿತ್ತಲಮನಿ, ಅಕ್ಬರ್ ಗೋಕಾಕ ಮತ್ತಿತರರು ಉಪಸ್ಥಿತರಿದ್ದರು.

loading...