ಕಲಾವಿದರನ್ನು ಪ್ರೋತ್ಸಾಹಿಸಿ, ರಂಗಭೂಮಿ ಉಳಿಸಿ: ನಾಗರಾಜ

0
17
loading...

ಹಾನಗಲ್ಲ : ಗ್ರಾಮೀಣ ರಂಗಭೂಮಿ ಉಳಿದರೆ ನಮ್ಮ ಸಂಸ್ಕøತಿ ಉಳಿದಂತೆ, ಕಲಾವಿದರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ರಂಗಭೂಮಿಯನ್ನು ನಮಗಾಗಿ ಉಳಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯ ನಿರ್ದೇಶಕ ಕೆ. ನಾಗರಾಜ ನುಡಿದರು.

ಹಾನಗಲ್ಲ ತಾಲೂಕಿನ ರಂಗಗ್ರಾಮ ಶೇಷಗಿರಿಯಲ್ಲಿ ಮೈಸೂರಿನ ರಂಗಾಯಣ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಗಜಾನನ ಯುವಕ ಮಂಡಳ ಸಂಯುಕ್ತವಾಗಿ ಆಯೋಜಿಸಿದ ಎರಡು ದಿನಗಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಲಾವಿದರನ್ನು ಗೌರವಿಸಿ ಬೆಂಬಲಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಕಲಾವಿದರಿಗೆ ವೇದಿಕೆಗಳನ್ನು ಒದಗಿಸಿದರೆ ಅತ್ಯುತ್ತಮವಾದ ರಂಗ ಪ್ರದರ್ಶನಗಳನ್ನು ನೀಡಬಲ್ಲರು. ಶೇಷಗಿರಿಯಂತಹ ಪುಟ್ಟ ಗ್ರಾಮದಲ್ಲಿ ಅತ್ಯಂತ ಶ್ರೇಷ್ಠವಾಗಿ ಬೆಳೆದಿರುವ ರಂಗ ಕಲೆ ಇಡೀ ನಾಡಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಪ್ರೋ. ಮಾರುತಿ ಶಿಡ್ಲಾಪೂರ, ರಂಗಾಸಕ್ತಿ ಒಂದು ಸಾಂಸ್ಕ್ರತಿಕ ಶ್ರೀಮಂತಿಕೆಯಾಗಿದೆ. ಹಾನಗಲ್ಲ ಶ್ರೀ ಮಠಕ್ಕೆ ಯೋಗಿಗಳು ಬೇಟಿ ನೀಡಿ ಧನ್ಯರೆನ್ನುತ್ತಾರೆ. ಕಾಡಶಟ್ಟಿಹಳ್ಳಿಯ ಪಂ. ಪಂಚಾಕ್ಷರಿ ಗವಾಯಿಗಳ ಶ್ರೀಮಠದಲ್ಲಿ ಸಂಗೀತ ಕಲಾವಿದರು ಹಾಡಿ ಸಂತೃಪ್ತಿ ಹೊಂದುತ್ತಾರೆ. ಹಾಗೆಯೇ ರಂಗ ಕಲಾವಿದರು ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಿ ತಾವು ಕೃತಾರ್ಥರಾದೇವು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಶೇಷಗಿರಿ ರಂಗ ವೈಭವವನ್ನು ಮೆರೆದಿದೆ. ಅಲ್ಲಿನ ಸಹೃದಯದವರು ರಂಗ ಕಲೆಯನ್ನು ಬೆಳೆಸಿದ್ದಾರೆ ಎಂದರು.

ಅಕ್ಕಿ-ಆಲೂರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ಶಿವಯೋಗಿ ಬಮ್ಮಿಗಟ್ಟಿ, ಉಪನ್ಯಾಸಕ ಪ್ರೊ.ಎಂ.ಆರ್.ಹೆಗಡೆ, ಪ್ರೊ.ಎಚ್.ಎಸ್.ಬಾರ್ಕಿ, ಗಣ್ಯರಾದ ಅಶೋಕ ಉರಣಕರ, ಸಿದ್ದಪ್ಪ ಕರಡಿ, ಸಂಘದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ಪ್ರೊ.ನಾಗರಾಜ ಧಾರೇಶ್ವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶುಭಕರ ಪುತ್ತೂರ, ರಂಗಗೀತೆ ಹಾಡಿದರು. ಡಿ.ವೈ.ದೇವಿಪ್ರಸಾದ ಸ್ವಾಗತಿಸಿದರು. ಎಂ.ಪಿ.ಜಮೀರ ಕಾರ್ಯಕ್ರಮ ನಿರೂಪಿಸಿದರು, ಸಿದ್ದು ಕೊಂಡೋಜಿ ವಂದಿಸಿದರು.
ನಟರಾಜ ಹೊನ್ನವಳ್ಳಿ ಅವರ ಅಹಲ್ಯಾ ನಾಟಕ, ಡಾ.ಶ್ರೀಪಾದ ಭಟ್ ಅವರ ಯುದ್ಧ ಬಂತು ಮನೆಯವರೆಗೆ ನಾಟಕಗಳನ್ನು ಮೈಸೂರಿನ ಸಂಚಾರಿ ರಂಗಾಯಣ ತಂಡ ಅಭಿನಯಿಸಿತು. ಕಲಾವಿದರಾದ ಎ.ಎಸ್.ಸುಭಾಸ, ಎಚ್.ಎಂ.ಗಿರೀಶ, ಬಿ.ಚಾಂದನಿ, ಮಿಲನಗೌಡ, ಅಂಜನ್, ಶ್ರೀಧರ, ಸಿ.ಅಜ್ಜಯ್ಯ, ಎ.ಎಂ.ಕವಿತಾ, ದಿವ್ಯಾ, ಎ.ಎಸ್.ಶೃತಿ, ಡಿ.ಆರ್.ನಿತಿನ, ಗರಿಕೆ ಮಧು, ಮಧು ಪಾಂಡೆ, ಎಸ್.ಕಿರಣಕುಮಾರ, ಸಿ.ಪಿ.ಭಾಸ್ಕರ ನಾಟಕಗಳನ್ನು ಪ್ರದರ್ಶಿಸಿದರು.

loading...