ಕಾಂಗ್ರೆಸ್‌ಗೆ ಅಧಿಕಾರದ ಮದವೇರಿದೆ: ಸಚಿವ ಜಾವಡೇಕರ್‌

0
13
loading...

ಕನ್ನಡಮ್ಮ ಸುದ್ದಿ-ಕಾರವಾರ: ಬೆಂಗಳೂರಿನಲ್ಲಿ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಗ ಹಾಡುಹಗಲೇ ತನ್ನ ಸ್ನೇಹಿತನ ಮೇಲೆ ಗೂಂಡಾಗಿರಿ ತೋರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದು ಕಾಂಗ್ರೆಸ್‌ನ ಅಧಿಕಾರದ ಮದ ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಹೇಳಿದರು.
ಅವರು ಇಲ್ಲಿಯ ಮಾಲಾದೇವಿ ಮೈದಾನದಲ್ಲಿ ಕಾರವಾರದಿಂದ ಮಂಗಳೂರು ವರೆಗಿನ ಜನಸುರಕ್ಷಾ ಯಾತ್ರೆಯನ್ನು ಉದ್ಘಾಟಿಸಿದರು. ನಂತರ ಪಾದಯಾತ್ರೆಯಲ್ಲಿ ನಗರದ ಸುಭಾಷ ವೃತ್ತದವರೆಗೆ ತೆರಳಿ ಅಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ,
ರಾಜ್ಯದಲ್ಲಿ ಅಮಾಯಕ ಹಿಂದುಗಳ ಹತ್ಯೆಯಾಗುತ್ತಿದೆ. ಈ ಹತ್ಯೆಯ ಹಿಂದೆ ಕೇರಳದ ಉಗ್ರ ಸಂಘಟನೆ ಪಿಎಫಐ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಪಿಎಫಐ ಕೇರಳದ ಗೂಂಡಾಗಳನ್ನು ಕರ್ನಾಟಕ ಕಳುಹಿಸಿ ಇಲ್ಲಿ ಅಮಾಯಕರ ಹತ್ಯೆ ಮಾಡಿಸುತ್ತಿದೆ. ಇಂಥ ಸುಮಾರು 1500 ಗೂಂಡಾಗಳನ್ನು ರಾಜ್ಯದ ಕಾಂಗ್ರೆಸ್‌ ಸಕಾರ ನಿಧೋಷಿಯೆಂದು ಬಿಡುಗಡೆ ಮಾಡಿದೆ. ಇದು ನಾಚೀಕೆಗೆಡು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಿಂದು ವಿರೋಧಿ ನೀತಿಯಿಂದ ಅಮಾಯಕ ಹಿಂದುಗಳ ಹತ್ಯೆ ನಡೆಸಿದ ಉಗ್ರ ಸಂಘಟನೆಗಳಿಗೆ ಕ್ಲಿನ್‌ ಚಿಟ್‌ ಕೊಡುವ ಕೆಲಸವಾಗುತ್ತಿದೆ ಎಂದ್ರು ಸಚಿವ ಪ್ರಕಾಶ ಜಾವಡೇಕರ ರಾಜ್ಯ ಸರ್ಕಾರವನ್ನು ಟೀಕಿಸಿದರು.
ರಾಜ್ಯದ ಕಾಂಗ್ರೆಸ್‌ನ ಆಡಳಿತದಲ್ಲಿ ಸಜ್ಜನರಿಗೆ ಅವಮಾನ, ಗೂಂಡಾಗಳಿಗೆ ಗೌರವ ನೀಡುವ ಕೆಲಸವಾಗುತ್ತಿದೆ. ಹಿಂದು ವಿರೋಧಿ ಧೋರಣೆಯ ಜನವಿರೋಧಿ ಸರ್ಕಾರ ಕಿತ್ತೆಸೆಯುವುದಕ್ಕಾಗಿ ಭಾರತೀಯ ಜನತಾ ಪಾರ್ಟಿಯು ಈ ಜನಸುರಕ್ಷಾ ಯಾತ್ರೆ ಹಮ್ಮಿಕೊಳ್ಳುತ್ತಿದೆ. ಹೊನ್ನಾವರದ ಯುವಕ ಪರೇಶ ಮೆಸ್ತರಂಥ ಅಮಾಯಕರನ್ನು ನಿರ್ಧಯವಾಗಿ ಕೊಲ್ಲಲಾಗಿದೆ. ಕಾಂಗ್ರೇಸ್‌ ಆಳ್ವಿಕೆಯಲ್ಲಿ ನಿರ್ಧೋಷಿಗಳು ಅಮಾನುಷವಾಗಿ ಕೊಲೆಯಾಗುತ್ತಿದ್ದು, ಗೂಂಡಾಗಳು ರಾಜಾರೋಷವಾಗಿ ನಿರ್ಭಯವಾಗಿ ಒಡಾಡುತ್ತಿದ್ದಾರೆ. ಅಧಿಕಾರದ ಮದವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಳಿಸಲಿದೆ. ಇಂದಿನ ತ್ರಿಪುರಾ ರಾಜ್ಯ ಚುನಾವಣೆಯ ಫಲಿತಾಂಶವನ್ನು ಉದಾಹರಿಸಿದ ಸಚಿವ ಜಾವಡೇಕರ್‌ ದೇಶದ ಎಲ್ಲಾ ರಾಜ್ಯಗಳು ಬಿಜೆಪಿಮಯವಾಗುತ್ತಿದೆ. ಇಂದು ಬಿಜೆಪಿ ಎವ್ರಿ ವೆರ್‌…ಕಾಂಗ್ರೆಸ್‌ ನೋವೆರ್‌ ಆಗುತ್ತಿದೆ ಎಂದು ಕಾಂಗ್ರೆಸ್‌ನ್ನು ಛೇಡಿಸಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್‌ ಜಾತಿ, ಧರ್ಮಗಳನ್ನು ಒಡೆಯುವ ಕೆಲಸಮಾಡುತ್ತಿದೆ. ಕಾಂಗ್ರೆಸ್‌ನ ದುರಾಡಳಿತವನ್ನು ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಜನತೆಗೆ ತಿಳಿಸಬೇಕಾಗಿದೆ. ಇದು ಎರಡು ಪಕ್ಷಗಳ ನಡುವಿನ ಹೋರಾಟವಲ್ಲ. ಎರಡು ಸಂಸ್ಕೃತಿಗಳ ನಡುವಿನ ಹೋರಾಟ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನಹಿತ ದೃಷ್ಠಿಯಿಂದ ಬಿಜೆಪಿ ಅಧಿಕಾರಕ್ಕೆ ತರುವ ಅನಿವಾರ್ಯತೆಯನ್ನು ಜನತೆಗೆ ಮನವರಿಕೆಮಾಡುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕೆಂದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ ರಾಜ್ಯದಲ್ಲಿ ಭ್ರಷ್ಟ, ಹಿಂದುವಿರೋಧಿ ಕಾಂಗ್ರೆಸ್‌ ಸರ್ಕಾರವನ್ನು ಜನತೆ ಕಿತ್ತೊಗೆಯಬೇಕಿದೆ. ನಿತ್ಯ ಅಮಾಯಕ ಹಿಂದುಗಳ ಕೊಲೆ ನಡೆಯುತ್ತಿದ್ದರೂ ಕಾಂಗ್ರೆಸ್‌ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ರಾಜೇಶ ನಾಯಕ, ಮಹಿಳಾಮೊರ್ಚಾದ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ ಮುಂತಾದವರು ಇದ್ದರು.

loading...