ಕಾಂಗ್ರೆಸ್‌ನ್ನು ಬೇರು ಸಹಿತ ಕಿತ್ತೊಗೆರಿ: ಸಚಿವ ಅನಂತಕುಮಾರ

0
17
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್‌ನ್ನು ಬೇರು ಸಹಿತ ಕಿತ್ತೊಗೆದರೆ ಮಾತ್ರ ಕಾಂಗ್ರೆಸ್‌ ಮುಕ್ತ ರಾಜ್ಯವನ್ನಾಗಿ ಮಾಡಬಹುದು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಅವರು ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಬಿಜೆಪಿಯ ಜಿಲ್ಲಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ ನೇತೃತ್ವದ ಪಾಪಿ ಸರಕಾರ. ಪಾಪಿ ಮುಖ್ಯಮಂತ್ರಿಯ ಕೊನೆಯ ದಿನ ಹತ್ರ ಬರುತ್ತಿದೆ. ನಮ್ಮ ಬೂತ್‌ನಲ್ಲಿ ನಮ್ಮ ಪಕ್ಷ ಗೆದ್ದರೆ ನಾವು ಗೆದ್ದಂತೆ. ಕಾರ್ಯಕರ್ತರಿಗೆ ಗೆಲುವಿನ ಗುರಿ ಸ್ಪಷ್ಟವಾಗಿರಬೇಕು. ಗುರಿ ಗುರುತಿಸಿಕೊಂಡು ಚುನಾವಣೆಗೆ ಅಣಿಯಾದರೆ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭ್ಯರ್ಥಿ ಯಾರೇ ಆದರೂ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಮತದಾರರ ಮನ ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕು. ಶಾಸಕರು ಏನು ಮಾಡಿದ್ದಾರೆ, ಸರ್ಕಾರ ಏನು ಮಾಡಿದೆ ಎನ್ನುವ ಬಗ್ಗೆ ಚಾರ್ಜ್‌ಶೀಟ್‌ ಮೂಲಕ ಜನರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು ಮಾತನಾಡಿ, ಕರುನಾಡ ಜಾಗೃತಿ ಜಾಥಾ ಇಂದಿನಿಂದ ಏ.5 ವರೆಗೆ ರಾಜ್ಯದಾದ್ಯಂತ ಎಲ್ಲಾ ತಾಲೂಕುಗಳಲ್ಲಿ ನಡೆಯಲಿದೆ. ಜಾಥಾದಲ್ಲಿ ಬೈಕ್‌ ರ್ಯಾಲಿ ಮೂಲಕ ಸರ್ಕಾರದ ವೈಫಲ್ಯಗಳ ಕುರಿತು ಮನೆ ಮನೆಗೆ ತಲುಪಿ ಮತದಾರರ ಮನವೊಲಿಸಲಾಗುವುದೆಂದರು.
ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ವಿಕಾಸ ಪುತ್ತೂರು, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಮಹೇಶ ಪೂಜಾರಿ ಮಾತನಾಡಿದರು.
ಪ್ರಮುಖರಾದ ಗುರುಪ್ರಸಾದ ಹೆಗಡೆ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಯೋಗೇಶ ಹಿರೇಮಠ ಇದ್ದರು. ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ ಸ್ವಾಗತಿಸಿದರು. ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅನಿಲ್‌ ಮುತ್ನಾಳ ವಂದಿಸಿದರು.

loading...