ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ : ಮೋಹನ

0
17
loading...

ಕುಮಟಾ : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕಿ ನನ್ನ ತಾಯಿ ಶಾರದಾ ಮೊಹನ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಅವಿರತ ಪ್ರಯತ್ನಿಸಿ ಸಾವಿರಾರು ರೂ ವೆಚ್ಚದಲ್ಲಿ ಹಿಂದೆಂದ್ದೂ ಕಾಣದ ಅಭಿವೃದ್ಧಿ ಕಾಮಗಾರಿಕೆ ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಪ್ರದಾನ ಕಾರ್ಯಧರ್ಶಿ ರವಿಕುಮಾರ ಮೋಹನ ಶೆಟ್ಟಿ ಹೇಳಿದರು.
ಅವರು ರವಿವಾರ ತಾಲೂಕಿನ ಬರ್ಗಿಯ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಟ್ಕುಳಿ ಉರ್ದು ಶಾಲಾ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಕಮಿಟಿಯ ಉಪಾಧ್ಯಕ್ಷ ಮಹ್ಮದ ಹಾಸಂ ಆಗಾ ಇವರ ಮುಂದಾಳತ್ವದಲ್ಲಿ ನಡೆದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕುಮಟಾ ಇವರ ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತರ ಬೂತ್‌ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಬೆಟ್ಕುಳಿಯ ಕುಗ್ರಾಮದಲ್ಲಿ ರಸ್ತೆಯ ದುಸ್ಥಿತಿ ಮನಗಂಡು ಸಿಮೇಂಟ್‌ ಕಾಂಕ್ರೇಟ್‌ ರಸ್ತೆ, ಟಾರ್‌ ರಸ್ತೆ ನಿರ್ಮಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಪ ಸಂಖ್ಯಾತರಾದ ಮುಸ್ಲಿಂ ಸಮೂದಾಯದ ಖಬರಸ್ಥಾನಕ್ಕೆ ವಿದ್ಯುತ್‌ ಇಲ್ಲದೆ ಕಾರ್ಗತ್ತಲು ಆವರಿಸಿದಾಗ ಸ್ವಂತಃ ಹಣದಿಂದ 9 ವಿಧ್ಯುತ್ತ್‌ ಕಂಬ ತರಿಸಿ ಜನರ ತೊಂದರೆಯನ್ನು ನೀಗಿಸಿದ್ದಾರೆ. ಕುಡಿಯುವ ನೀರಿನ ತುಟ್ಟಾಗ್ರತೆ ಎದುರಾದಾಗ ಶರಾವತಿ ಯೋಜನೆಯಡಿ ಸಕಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಗೊಳಿಸಿದ್ದಾರೆ. ಹಾಗಾಗಿ ಕಾಂಗ್ರೇಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಶಾಸಕಿ ಶಾರದ್ಾಮೋಹನ ಶೆಟ್ಟಿ ಅವರ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು.
ಅಲ್ಪ ಸಂಖ್ಯಾತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷ ಮಹ್ಮದ ಹಾಸಂ ಆಗಾ ಮಾತನಾಡಿ, ಈ ಹಿಂದೆ ಕಾಂಗ್ರೆಸ್‌ ನೇತೃತ್ವದಲ್ಲಿ ಅಧಿಕಾರ ಪಡೆದ ಕೆಂದ್ರ ಸರಕಾರದ ಪ್ರಧಾನಿ ಮನಮೊಹನ ಸಿಂಗ್‌ ಸಿಲೆಂಡರ್‌ ದರ 350 ನೀಡಿದರು. ನಂತರ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಮೋದಿ ಪ್ರಧಾನಿ ಆಗುತ್ತಲೆ ಅಡಿಗೆ ಅನಿಲ ಬೆಲೆ 810 ರೂ ಏರಿಕೆ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆ ತೀರಾ ಇಳಿಕೆ ಯಾಗಿದ್ದರೂ ಬಿಜೆಪಿ ಸರಕಾರ ಸುಖಾಸುಮ್ಮನೆ ದರ ಎರಿಕೆ ಮಾಡಿ ಜನವಿರೋದಿ ನೀತಿ ಅನುಸರಿಸಿದೆ ಎಂದು ಟಿಕಿಸಿದ ಅವರು ಈಗಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜಿಪಿ ನಡುವೆ ಹಣಾಹಣಿ ನಡೆಯಲಿದ್ದು ಜೆ,ಡಿಎಸ್‌ ಗೆ ಮತ ನೀಡಿದರೆ ಬಿಜೆಪಿಗೆ ಗೆಲವು ಸುಲಭವಾಗುತ್ತದೆ, ಈ ಬಾರಿ ಅಲ್ಪಸಂಖ್ಯಾತ ಸಮೂದಾಯ ಯೋಚಿಸಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಬಿಜೆಪಿ ಗೆಲುವಿಗೆ ಕಡಿವಾಣ ಹಾಕಬೇಕು ಎಂದರು.
ಬ್ಲಾಕ್‌ ಕಾಂಗ್ರೆಸ್‌ ಸಮಿತಿ ತಾಲೂಕಾಧ್ಯಕ್ಷ ವಿ ಎಲ್‌ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅಲ್ಪ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಪ್ರಾನ್ಸಿಸ್‌ ಫರ್ನಾಂಡಿಸ್‌, ಕಾಂಗ್ರೆಸ್‌ ಮಹಿಳಾ ತಾಲೂಕಾಧ್ಯಕ್ಷೆ ಸುರೇಖಾ ವಾಲೆಕರ್‌, ಬರ್ಗಿ ಗ್ರಾ ಪಂ ಅಧ್ಯಕ್ಷ ರಾಮ ಪಟಗಾರ, ಕಾಂಗ್ರೆಸ್‌ ಬರ್ಗಿ ಘಟಕಾಧ್ಯಕ್ಷ ಹುಸೇನ್‌ ಮೊಹನ್ನಾ, ಇದ್ರಿಸ್‌ ಮೂಸಾ ಮುಝಾವತ್‌, ದಾವುದಲ್ಲಿ ಗಾರಿಯಾ, ಮಹ್ಮದ ಇಸ್ಮಾಯಿಲ್‌ ಮುಲ್ಲಾ, ಮಹ್ಮದ ಅಲಿ ಬುದವಂತ, ಖಾಸಿಂ ಇಬ್ರಾಹಿಂ ಬುದವಂತ, ಯಾಕೂಬ ಸುಲೇಮಾನ್‌ ಮುಲ್ಲಾ, ಇಲಿಯಾಸ್‌ ಉಮರ್‌ ಬುದವಂತ, ಯಾಕೂಬ ಉಡೆಕರ್‌, ಶಬ್ಬಿರ್‌ ಅಲಿ ಉಡೇಖರ, ಯಾಸಿನ್‌ ಅಬ್ಬುಲ್‌ ರಹೂಪ್‌, ನೂರ ಅಹ್ಮದ ಅಮೀರ ಶೇಖ್‌, ಇಸ್ಮಾಯಿಲ್‌ ಉಪ್ಪಾರಕರ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...