ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಸಹಕರಿಸಿ: ಬಂಡಿ

0
22
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಸಮೀಪದ ಮಾರನಬಸರಿ ಗ್ರಾಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಪೂರ್ವಭಾವಿ ಬಿಜೆಪಿ ಸಬೆಯನ್ನು ಕರೆಯಲಗಿತ್ತು ಮಾಜಿ ಸಚಿವ ಕಳಕಪ್ಪ ಬಂಡಿ ಸಭೆಯನ್ನುದ್ದೆಶಿಸಿ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ ಯೊಚನೆಯನ್ನು ಹೊಂದಿದ್ದು ಇದಕ್ಕೆ ಈ ನಾಡಿನ ಜನತೆ ಸಹಕರಿಸುವರೆಂಬ ಆತ್ಮ ವಿಶ್ವಾಸ ನಮ್ಮಲ್ಲಿದೆ. ಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಯುವಶಕ್ತಿ ಸನ್ನದ್ಧವಾಗಬೇಕಾಗಿದೆ.
ಆ ನಿಟ್ಟನಲ್ಲಿ ತಾವೆಲ್ಲರು ಒಂದಾಗಿ ಶ್ರಮವಹಿಸಿದಲ್ಲಿ ಯಶಸು ನಮ್ಮದಾಗುವದರಲ್ಲಿ ಯಾವ ಸಂದೆಹವೂ ಇಲ್ಲ ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯನವರ ನೆತ್ರತ್ವದ ಕಾಂಗ್ರೇಸ್‌ ಸರಕಾರ ಜನ ವಿರೋದಿ ಸರಕಾರವಾಗಿದ್ದು ಇವರು ಜನಸಾಮಾನ್ಯರನ್ನು ಭಯ ಭಿತರನ್ನಾಗಿಸಿದ್ದಾರೆ. ಕಾಂಗ್ರೇಸ್‌ ಮುಕ್ತ ಭಾರತವನ್ನಾಗಿಸುವ ನಮ್ಮ ಹೆಮ್ಮೆಯ ಪ್ರದಾನಿ ನರೇಂದ್ರ ಮೊದಿಯವ ಕನಸನ್ನು ನನಸಾಗಿಸಲು ನಮ್ಮ ಕಾರ್ಯಕರ್ತರು ಈ ಲಸ ಬಿಜೆಪಿ ಬೆಂಬಲಕ್ಕಾಗಿ ಮತದಾರಲ್ಲಿ ಜಾಗ್ರತಿ ಮೂಡಿಸುವ ಮಹತ್ತರ ಕಾರ್ಯವನ್ನು ಮಡುವ ಮೂಲಕ ಈ ಸಲ ಬಿಜೆಪಿ ಸರಕಾರಕ್ಕಾಗಿ ಶ್ರಮಿಸೋಣ ಎಂದರು.
ಗದಗ ಜಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಮುತ್ತು ಕಡಗದ ಮಾತನಾಡಿ ಬಿಜೆಪಿ ಪಕ್ಷದಲ್ಲಿನ ಯುವ ಶಕ್ತಿಯ ಸಕ್ರೀಯ ಕಾರ್ಯ ಚಟುವಟಿಕೆ ಪ್ರಾಮುಖ್ಯತೆಯಿದ್ದು ಯುವ ಹಾಗೂ ಜನಸಾಮಾನ್ಯರರನ್ನು ಬಿಜೆಪಿಯತ್ತ ಸೆಳೆಯಲು ಶ್ರಮವಹಿಸಬೇಕಾಗಿದೆ.
ಆ ನಿಟ್ಟಿನಲ್ಲಿ ತಾವುಗಳೆಲ್ಲಾ ಕ್ರಿಯಾತ್ಮಕಾವಾಗಿ ಕಾರ್ಯಪ್ರವೃತ್ತರಗುವಿರೆಂಬ ನಂಬಿಕೆ ನನಗಿದೆ. ಗದಗ ಜಿಲ್ಲಾ ಯುವ ಮೊರ್ಚಾ ಕಾರ್ಯದರ್ಶಿಯಾಗಿ ನಾನು ನಿಮ್ಮೊಂದಿಗೆ ಸದಾವಕಲ ಪಕ್ಷದ ಕಾರ್ಯಚಟುವಟಿಕೆಗಾಗಿ ಕೈಜೋಡಿಸಲು ಸಿದ್ದನಿದ್ದೆನೆ. ಕಾರಣ ಈ ಸಲದ ಚುನಾವಣೆಯಲ್ಲಿ ನಮ್ಮ ಮಾಜಿ ಸಚಿವರನ್ನು ಹೆಚ್ಚಿನ ಸಂಖೆಯಲ್ಲಿ ಅವರಿಗೆ ಮತ ನೀಡುವದರೊಂದಿಗೆ ಮತ್ತೆ ಈ ಜಿಲ್ಲೆಯ ಉತ್ತಮ ಸಚಿವಸ್ಥಾನ ದೊರುಕುವಂತೆ ನಾವು ನೀವುಗಳೆಲ್ಲ ಶ್ರಮಿಸೋಣ ಎಂದು ಬಿಜೆಪಿ ಕಾರ್ಯರ್ತರನ್ನುದ್ದೆಶಿಸಿ ಹೇಳಿದರು.
ಈ ಸಂದರ್ಬದಲ್ಲಿ ಹಾಲುಮತ ಸಮಾಜದ ಮುಖಂಡರಾದ ಶರಣಪ್ಪ ದೊಣ್ನೆಗುಡ್ಡ, ತಾ.ಪಂ ಸದಸ್ಯ ಸಂದೇಶ ದೊಡ್ಡಮೇಟಿ, ಶೇಖರಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಅಯ್ಯಪ್ಪ ಮಾದರ, ಶಂಕರೆಗೌಡ ಮಲಿಪಾಟೀಲ, ಚನ್ನಯ್ಯ ಹಿರೇಮಠ, ಚಂದ್ರು ಮಾರನಬಸರಿ, ಶಿವುಕುಮಾರ ದಿಂಡೂರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ತಿತರಿದ್ದರು.

loading...