ಕಾಂಗ್ರೆಸ್‌ ಸರಕಾರ ಕಮೀಷನ್‌ ಸರಕಾರವಾಗಿದೆ: ಪ್ರಹ್ಲಾದ ಜೋಶಿ

0
18
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಇಂದು ದೇಶದ ಎಲ್ಲಾ ದಿಕ್ಕಿನಲ್ಲೂ ಬಿ.ಜೆಪಿ ಪ್ರಬಲವಾಗಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ರವರ ಸಂಘಟನಾ ಚತುರತೆಯೇ ಕಾರಣವಾಗಿದೆ. 3ವರ್ಷಗಳ ಅವಧಿಯಲ್ಲಿ ನಡೆದ 24 ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆಪಿ 22 ಚುನಾವಣೆಯಲ್ಲಿ ಜಯಗಳಿಸಿದೆ. ಎಂದು ಸಂಸದ ,ಯಲ್ಲಾಪುರ ಮತ್ತು ಹಳಿಯಾಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಪ್ರಹ್ಲಾದ ಜೋಶಿ ಹೇಳಿದರು.
ಜನರ ಸಂಪರ್ಕದಲ್ಲಿದ್ದು ಅವರ ಮನವೂಳಿಸಿ ಮತ ಪರಿವರ್ತನೆಮಾಡುವ ಕಾರ್ಯ ಕಾರ್ಯಕರ್ತರಿಂದಾಬೇಕು. ಕೇಂದ್ರದಲ್ಲಿವೀರಭದ್ರನಂತೆ 24 ಗಂಟೆ ಕ್ರೀಯಾಶೀಲವಾಗಿರುವ ಸರಕಾರವಿದ್ದರೆ ರಾಜ್ಯದಲ್ಲಿ ಕುಂಭಕರ್ಣನಂತೆ ನಿದ್ರಾಮಯ್ಯ ಸರಕಾರವಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಹೇಗೆ ಗಲ್ಲಿಸಬೇಕೆಂದರೆ ಕಾಂಗ್ರೆಸ್‌ ಠೇವಣಿ ಕಳೆದುಕೊಂಡು ಧೂಳಿಪಟವಾಗಬೇಕು ಎಂದು ಕಾಯಕರ್ತರನ್ನು ಹುರಿದುಂಬಿಸಿದರು.
ಪ್ರಮುಖರಾದ ಮಾಜಿ ಶಾಸಕ ವಿ.ಎಸ್‌ ಪಾಟೀಲ, ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಎಲ್‌.ಟಿಪಾಟೀಲ, ಉಮೇಶ ಭಾಗ್ವತ್‌, ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ಸದಾನಂದ ಭಟ್ಟ, ಕೃಷ್ಣ ಎಸಳೆ, ಜಿ,ಪಂ ಸದಸ್ಯರಾದ ಶೃತಿ ಹೆಗಡೆ, ರೂಪಾ ಬೂರ್ಮನೆ, ಗಣೇಶ ಸಣ್ಣಲಿಂಗಣ್ಣವರ ಮುಂತಾದವರು ವೇದಿಕೆಯಲ್ಲಿದ್ದರು.
ಯಲ್ಲಾಪುರ ತಾಲೂಕಾ ಬಿಜೆಪಿ ಅಧ್ಯಕ್ಷ ಗೋಪಲಕೃಷ್ಣ ಹಂಡ್ರಮನೆ, ಸ್ವಾಗತಿಸಿದರು. ಜಿಲ್ಲಾಧÀ್ಯಕ್ಷ ಕೆ.ಜಿ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ನರಸಿಂಹ ಕೋಣೆಮನೆ ನಿರ್ವಹಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಂದೇ ಮಾತರಂ ಹಾಡಿದರು. ಮುಂಡಗೋಡ ಘಟಕಾಧ್ಯಕ್ಷ ಗುಡ್ಡಪ್ಪ ಕಾತೂರ ವಂದಿಸಿದರು.

loading...