ಕಾಗಿನೆಲೆ ಅಂತರಾಷ್ಟ್ರೀಯ ಪ್ರವಾಸಿತಾಣ: ಸಚಿವ ರೇವಣ್ಣ

0
68
loading...

ಬಂಕಾಪುರ : ಕನಕದಾಸರ ಜನ್ಮಸ್ಥಳ ಬಾಡ ಹಾಗು ಕಾಗಿನೆಲೆ 67 ಕೋಟಿ ರೂ ವೆಚ್ಚದಲ್ಲಿ ಅಭೂತಪೂರ್ವ ಅಭಿವೃದ್ದಿ ಹೊಂದಿ ಅಂತರಾಷ್ಟ್ರೀಯ ಪ್ರವಾಸಿತಾಣಗಳಲ್ಲೊಂದಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಅವರು ಬಾಡ ಗ್ರಾಮದಲ್ಲಿ ವಿವಿಧ ಕಾಮಗಾರಿಗಳು ನೂತನ ಕನಕ ಕಲಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿದಿನ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬಂದು ಕನಕದಾಸರ ಇತಿಹಾಸವನ್ನು ತಿಳಿದುಕೊಂಡು ಹೊಗುತ್ತಿದ್ದಾರೆ. ಬಸವಣ್ಣನವರ ಹಾಗೆ ಕನಕದಾಸರೂ ಕೂಡಾ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಮುಜರಾಯಿ ಜವಳಿ ಖಾತೆ ಸಚಿವರಾದ ರುದ್ರಪ್ಪ ಲಮಾಣಿ ಮಾತನಾಡಿ ಇತಿಹಾಸ ಮೇರೆದ ಕನಕದಾಸರ ಸಾಮ್ರಾಜ್ಯ ಬಾಡ ಗ್ರಾಮದಲ್ಲಿ ಪುನರ್ ಸ್ಥಾಪನೆ ಗೊಳ್ಳುತ್ತಲಿದೆ. ಕರ್ನಾಟಕ ಭೂಪೂಟದಲ್ಲಿಯೇ ಅಭಿವೃದ್ದಿಚಿiÀು ಪರ್ವ ಬಾಡ ಗ್ರಾಮದಲ್ಲಿ ನಡೆಯುತ್ತಲಿದೆ. ಕನಕದಾಸರ ಅರಮನೆ ಆವರಣದಲ್ಲಿ ಇಂದು ಉದ್ಘಾಟನೆಗೊಂಡ ಕನಕರ ಜೀವನ ಚರಿತ್ರೆಯುಳ್ಳ 4 ಡಿ ಚಿತ್ರಪ್ರದರ್ಶನ ಭಾರತ ದೇಶದಲ್ಲಿಯೇ ಎರಡನೆಚಿiÀುದಾಗಿದೆ ಎಂದು ಹೇಳಿದರು.

ಸಭೆಯ ಅದ್ಯಕ್ಷತೆ ವಹಿಸಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ಮನುಷ್ಯ ಇತಿಹಾಸದ ಬಾಗವಾಗಿರಬೇಕು. ಇಲ್ಲವೆ ಹೊಸ ಇತಿಹಾಸವನ್ನು ನಿರ್ಮಿಸುವಂತಾಗಬೇಕು. ಅಂತಹ ಕನಕದಾಸರ ಇತಿಹಾಸವನ್ನು ಪುನರುತ್ಥಾನಗೊಳಿಸಲು ಪ್ರಥಮ ಹಂತದಲ್ಲಿ ದೊಡ್ಡ ಮೊತ್ತದ ಅನುದಾನ ನೀಡಿ ಮುನ್ನುಡಿ ಇಟ್ಟವರು ಬಿ.ಎಸ್.ಯಡಿಯೂರಪ್ಪನವರು ನಚಿತರದ ಕಾರ್ಯವನ್ನು ಮುಂದುವರೆಸಿಕೊಂಡು ಹೊಗಲು ಅನುದಾನ ನೀಡಿ ಪ್ರೋತ್ಸಾಹಿಸುತ್ತಿರುವವರು ಸಿ.ಎಂ.ಸಿದ್ದರಾಮಯ್ಯನವರು ಎಂದು ಹೇಳಿದರು.
ಬಾಡದಲ್ಲಿ ಕನಕದಾಸರ ಜೀವನ Z್ಪರಿತ್ರೆಯನ್ನು ತಿಳಿಯಲು ಹೊರಗಡೆ ಅರಮನೆಯನ್ನು ಆಕರ್ಷಣೆ ಮಾಢಲಾಗಿದೆ. ಆಕರ್ಷಣೆಯನ್ನು ಕಂಡು ಬರುವ ಪ್ರವಾಸಿಗರಿಗೆ ಕನಕದಾಸರ ಜೀವನ ಚರಿತ್ರೆಯನ್ನು ತಿಳಿಯಪಡೆಸುವ ಸದುದ್ದೆಶದಿಂದ 4 ಡಿ ಹಾಲೋಗ್ರಾಮ್ ಸ್ಟೂಡಿಯೋ ವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ 4 ಡಿ ಹಾಲೋಗ್ರಾಮ್ ಸ್ಟೂಡಿಯೋ ವನ್ನು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ನವರು ಉದ್ಘಾಟಿಸಿದರು.
ಮಾಜಿ ಶಾಸಕ ಅಜ್ಜೀಂಪೀರ ಖಾದ್ರಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಕೋಟ್ರೆಸಪ್ಪ ಬಸಗೇಣ್ಣಿ, ದೀಪಾ ಅತ್ತಿಗೇರಿ, ಪಾರವ್ವ ಆರೇರ, ಶೋಭಾ ಗಂಜಿಗಟ್ಟಿ, ರಾಮಪ್ಪ ತಳ್ಳಳ್ಳಿ, ಶಿವಾನಂದ ರಾಮಗಿರಿ, ಎಂ.ಎನ್.ವೆಂಕೋಜಿ, ವಿಶ್ವನಾಥ ಹರವಿ, ಎಲ್ಲಪ್ಪ ನರಗುಂದ, ನಿಂಗಪ್ಪ ಕಮ್ಮಾರ, ಶಿವಪ್ರಸಾದ ಸುರಗಿಮಠ, ಮಹಬಳೇಶ ಹೊನಕೇರಿ, ರಾಜು ಕಮ್ಮಾರ, ಚನ್ನಕುಮಾರ ದೇಸಾಯಿ, ಫಕ್ಕೀರಪ್ಪ ಕುಂದೂರ, ಬಸವನಗೌಡ ದೇಸಾಯಿ, ಮತ್ತಿತರರು ಇದ್ದರು. ಕಾಗಿನೆಲೆ ಪ್ರಾದಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಸ್ವಾಗತಿಸಿದರು. ಅಧಿಕಾರಿ ಜಗನ್ನಾಥ ನಿರೂಪಿಸಿದರು.

loading...