ಕಾನೂನು ಮಾಹಿತಿ ಕಾರ್ಯಕ್ರಮ

0
35
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕೇಂದ್ರ ಮಾವಿನಕುರ್ವೆಯಲ್ಲಿನ ತ್ರೈಮಾಸಿಕ ಸಭೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಸಲಾಯತು.
ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರ ಕ್ಷೇತ್ರದ ಕಾರ್ಯಕ್ರಮಗಳಿಂದ ಇಂದು ಪ್ರತಿಯೊಂದು ಮಹಿಳೆಯರೂ ಕೂಡಾ ಸಾಮಾಜಿಕ ಜಾಗೃತಿಯೊಂದಿಗೆ ಆರ್ಥಿಕ ಜಾಗೃತಿಯನ್ನು ಕೂಡಾ ಹೊಂದಿದ್ದಾರೆ. ಇಂದಿನ ಹಣಕಾಸು ವ್ಯವಹಾರಕ್ಕನುಗುಣವಾಗಿ ಮಹಿಳೆಯರು ಮೊಬೈಲ್ ಬ್ಯಾಂಕಿಂಗ್, ಇಂಟರ್‍ನೆಟ್ ಬ್ಯಾಂಕಿಂಗ್ ಸಹಿತ ಆಧುನಿಕತೆಗೆ ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳೆಯರ ಕುರಿತು ಅನೇಕ ಕಾನೂನುಗಳು ರಚನೆಯಾಗಿದ್ದು ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಇತ್ಯಾದಿ ಸೇರಿದಂತೆ ಅನೇಕ ಕಾನೂನುಗಳು ರಚನೆಯಾಗಿವೆ. ಮಹಿಳೆಯರಿಗೆ ಯಾವುದೇ ಸಂದರ್ಭದಲ್ಲಿ ಉಚಿತ ಕಾನೂನು ನೆರವು ದೊರೆಯುವುದರೊಂದಿಗೆ ವಿಶೇಷ ರಿಯಾಯಿತಿಗಳೂ ಇದೆ ಎಂದರು.
ವಿವಾಹ ವಿಚ್ಚೇದನಕ್ಕೆ ಸಂಬಂಧ ಪಟ್ಟಂತೆ ಸಂಪೂರ್ಣ ವಿವರವನ್ನು ನೀಡಿದ ಅವರು ಎರಡನೇ ವಿವಾಹವೆಂದೂ ಸಿಂಧುವಾಗದು ಎಂದು ಹೇಳಿದರು. ಮೊದಲ ಪತ್ನಿಯು ಜೀವಂತವಾಗಿರುವಾಗ ಇಲ್ಲವೇ ಅವಳಿಂದ ವಿಚ್ಚೇದನ ಪಡೆಯದೇ ಇರುವವರಿಗೆ ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡದಂತೆಯೂ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನೆಯ ಮೇಲ್ವಿಚಾರಕ ಭರತ್, ತಾಂತ್ರಿಕ ಸಂಯೋಜಕ ಮಾದೇವ ನಾಯ್ಕ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತ್ರಿವೇಣಿ, ವಿಮಲಾ, ರೇಖಾ, ಕಮಲಾ, ರೇಷ್ಮಾ ಮುಂತಾದವರು ಉಪಸ್ಥಿತರಿದ್ದರು. ಯೋಜನೆಯ ಮೇಲ್ವಿಚಾರಕಿ ನಾಗವೇಣಿಯವರು ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು.

loading...