ಕಾರವಾರದಲ್ಲಿ ಬಿಜೆಪಿಯ ನೂತನ ಕಾರ್ಯಾಲಯ ಉದ್ಘಾಟನೆ

0
17
loading...

ಕನ್ನಡಮ್ಮ ಸುದ್ದಿ-ಕಾರವಾರ: ಭಾರತೀಯ ಸಂಸ್ಕೃತಿಯ ಆದರ್ಶ ಪುರುಷ ಶ್ರೀರಾಮಚಂದ್ರನಿಂದ ಪ್ರೇರಣೆ ಪಡೆದು ದೇಶದಲ್ಲಿ ರಾಮರಾಜ್ಯ ಸ್ಥಾಪಿಸುವಂತಾಗಲಿ ಎಂದು ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ನಗರದ ಗ್ರೀನ್‌ ಸ್ಟ್ರೀಟ್‌ನಲ್ಲಿ ಹೊಸ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಪರಮಾತ್ಮ ಸ್ವರೂಪಿ ದೇವರಾದ ರಾಮ ಮತ್ತು ಕೃಷ್ಣರಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಶ್ರೀರಾಮ ನವಮಿಯ ಶುಭ ಸಂದರ್ಭದಲ್ಲಿ ಪಕ್ಷದ ಕಚೇರಿ ಉದ್ಘಾಟನೆ ಮಾಡಿರುವುದರಿಂದ ಒಳ್ಳೆಯದಾಗಲಿದೆ ಎಂದು ಅವರು ಹೇಳಿದರು.
ಮಹಿಳಾ ಮೋರ್ಚಾ ರಾಜ್ಯ ಪರಿಷತ್‌ ಸದಸ್ಯೆ ರೂಪಾಲಿ ನಾಯ್ಕ ಮಾತನಾಡಿ, ನಗರದ ಹೃದಯ ಭಾಗದಲ್ಲಿ ಪಕ್ಷಕ್ಕೆ ಒಂದು ಕಚೇರಿಯ ಅವಶ್ಯಕತೆ ಇತ್ತು.ಈಗ ಕಚೇರಿಯ ಕನಸು ಸಾಕಾರಗೊಂಡಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಗಣಪತಿ ಉಳ್ವೇಕರ ಮಾತನಾಡಿ, ಹೊಸ ಕಚೇರಿ ಪ್ರಾರಂಭಿಸಿರುವುದರಿಂದ ಸಂಘಟನಾ ದೃಷ್ಠಿಯಿಂದ ಪಕ್ಷದ ಕಾರ್ಯಕರ್ತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರವೀಂದ್ರ ಪವಾರ್‌, ಅಶೋಕ್‌ ಕಾಮತ್‌, ಜಿಲ್ಲಾ ವಕ್ತಾರ ರಾಜೇಶ ನಾಯಕ, ಜಿ.ಪಂ.ಸದಸ್ಯ ಜಗದೀಸ್‌ ನಾಯಕ ಮೊಗಟಾ, ನಗರಸಭೆ ಸದಸ್ಯರಾದ ಡಾ.ನಿತೀನ್‌ ಪಿಕಳೆ, ದೇವಿದಾಸ್‌ ನಾಯ್ಕ, ಮಾಜಿ ಸದಸ್ಯೆ ದಿವ್ಯಾ ನಾಯ್ಕ, ಭಾಸ್ಕರ್‌ ನಾರ್ವೇಕರ್‌, ಕಿಷನ್‌ ಕಾಂಬ್ಳೆ, ಸಂದೀಪ್‌ ಶೆಟ್ಟಿ, ದಿಗಂಬರ್‌ ಹಳದನಕರ, ಉದಯಬಶೆಟ್ಟಿ, ಸುಭಾಸ್‌ ಗುನಗಿ, ದಿಲೀಪ್‌ ನಾಯ್ಕ, ಸುಭಾಸ್‌ ನಾಯ್ಕ ಅಮದಳ್ಳಿ, ನಾಗೇಶ ಕುಡತಳಕರ, ರೋಷನ್‌ ವೇರ್ಣೇಕರ ಉಲ್ಲಾಸ್‌ ಪ್ರಭು ಮುಂತಾದವರು ಹಾಜರಿದ್ದರು.

loading...