ಕೆಜೆಪಿಯಲ್ಲಿನ ಬಿರುಕಿಗೆ ಶೋಭಾ ಕಾರಣ: ಪದ್ಮನಾಭ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕ ಜನತಾ ಪಕ್ಷದಲ್ಲಿ ಬಿರುಕು ಉಂಟಾಗಲು  ಶೋಭಾ ಕರಂದ್ಲಾಜೆಯೇ ಕಾರಣವೆಂದು ಕೆಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ ಹೇಳಿದ್ದಾರೆ.
ಅವರು ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲನೇಯ ಅಂತಿಮ ಪಟ್ಟಿ ಬಿಡುಗಡೆಗೊಳಿ ಮಾತನಾಡಿದರು.
ಕೆಜೆಪಿ ಪಕ್ಷದಲ್ಲಿ ಹೈಡ್ರಾಮಾ ನಡೆಯಲು ಪ್ರಮುಖ ಕಾರಣ ಬಿಜೆಪಿಯ ಶೋಭಾ ಕರಂದ್ಲಾಜೆ, ಅವರಿಂದಲೇ ಪಕ್ಷದ ಒಡಕಿಗೆ ಕಾರಣವಾ ಯಿತು. ಕೆಜೆಪಿಯಲ್ಲಿ ನಡೆಯುವ ಹೈಡ್ರಾಮಕ್ಕೆ ಯಡಿಯೂರಪ್ಪನವರು ಎಂದು ತಿಳಿದುಕೊಂಡಿದ್ದೆವು ಆದರೆ ತದನಂತರ ಗೊತ್ತಾಗಿದೆ. ಇದ್ದಕ್ಕೆಲ್ಲಾ ಕಾರಣ ಕರಂದ್ಲಾಜೆಯಂದು, ಯಡಿಯೂರಪ್ಪನವರು ನನಗೆ ತಂದೆ ಇದ್ದಂತೆ, ಅವರು ನನ್ನ ರಾಜಕೀಯ ಗುರು ಎಂದು ಸಹ ತಿಳಿಸಿದರು.
ಉತ್ತರ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಕೆಜೆಪಿ ಗೆಲುವು ಸಾಧಿಸಲು ಎಲ್ಲ ತಂತ್ರಗಳನ್ನು ಮಾಡಲಾಗಿದೆ. ಈ ಭಾಗದ ಸ್ಪರ್ಧೆಯಲ್ಲಿ ಗೆಲುವು ನಮ್ಮದೆಯಾಗಲಿದೆ. ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 20ರಿಂದ 30 ಕ್ಷೇತ್ರಗಳನ್ನು ಗೆಲುವು ಸಾಧಿಸುವ ಗುರಿ ಹೊಂದಿದ್ದೆವೆ. ಕೆಲವು ಕ್ಷೇತ್ರಗಳಾದ ಬೆಳಗಾವಿ ಉತ್ತರ ಹಾಗೂ ದಕ್ಷಿಣ, ಸವದತ್ತಿ, ರೋಣ ಸೇರಿದಂತೆ 30ಕ್ಷೇತ್ರದಲ್ಲಿ ಭಲವಾದ ಸ್ಪರ್ಧಿಗಳು ಕಣಕ್ಕೆ ಇಳಿಯುವ ಕಾರಣ ಕೆಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು. ಶೋಭಾ ಅವರಿಂದ ನನಗೆ ಅನ್ಯಾಯವಾಗಿದೆ ಅವರಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ನಾನು ಸಹ ಎರಡು ಕ್ಷೇತ್ರಗಳಾದ ತೇರದಾಳ ಹಾಗೂ ಯಶವಂತಪುರದಿಂದ ಸ್ಪರ್ಧಿಸುತ್ತಿದ್ದೆನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಭೂಪಾಲಅಣ್ಣಾ ಅತ್ತು, ಪ್ರಧಾನ ಕಾರ್ಯದರ್ಶಿ ಸಂತೋಷ ದುಂಡಪ್ಪಾ ಪದ್ಮಣ್ಣವರ, ಜಿಲ್ಲಾ ಉಪಾಧ್ಯಕ್ಷ ಈರಣ್ಣಾ ಜೊಂಡ ಸೇರಿದಂತೆ ಇತರರು ಇದ್ದರು.

loading...