ಕೆರೆ ನೀರು ಉಳಿಸಲು ಶುದ್ಧೀಕರಣ ಘಟಕ ಬಳಸದ ಜನ

0
11
loading...

ನರಗುಂದ: ತಾಲೂಕಿನ ಗುರ್ಲಕಟ್ಟಿ ಗ್ರಾಮಸ್ಥರು ಕೆರೆಯ ನೀರು ಕಲ್ಮಶವಾಗಿದೆ ಎಂದು ಟೀಕೆ ಮಾಡುತ್ತಿರುವ ಮಧ್ಯೆಯೂ ಅದೇ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಗ್ರಾಮದ ಸುಮಾರು 900ಕ್ಕೂ ಹೆಚ್ಚು ಜನ ಈ ಕೆರೆಯ ನೀರನ್ನೇ ಆಶ್ರಯಿಸಿದ್ದಾರೆ.
ಕೆರೆ ನೀರನ್ನು ಶುದ್ದೀಕರಣ ಮಾಡಲು ಕಳೆದ 10 ವರ್ಷಗಳಿಂದ ಶುದ್ಧೀಕರಣ ಘಟಕ ಇದ್ದರೂ ಕೂಡಾ ಶುದ್ಧೀಕರಣ ಘಟಕ ಕಾರ್ಯರಾಂಭಿಸಲು ಸಾಧ್ಯವಾಗಿಲ್ಲ. ಕಾರಣ ಈ ಘಟಕದಿಂದ ನೀರನ್ನು ಪೂರೈಸಿದ್ದಲ್ಲಿ ಕೆರೆಯ ನೀರು ಬಹುಬೇಗ ಖಾಲಿಯಾಗುವುದೆಂಬ ಭಯದಿಂದ ಗ್ರಾಮಸ್ಥರು ಕುಡಿಯುವ ನೀರನ್ನು ನೇರವಾಗಿ ಕೊಡ ಹೊತ್ತು ಮನೆಗಳಿಗೆ ಒಯ್ಯುವುದು ಕಂಡು ಬರುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕವನ್ನೂ ಕೆರೆಯ ಪಕ್ಕದಲ್ಲಿ ಅಳವಡಿಸಲಾಗಿದೆ. ಆದರೆ ಈ ಶುದ್ದ ಕುಡಿಯುವ ನೀರಿನ ಘಟಕದಿಂದ ಕೇವಲ ನಾಲ್ಕು ಮನೆಯವರು ಮಾತ್ರ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಣ ನೀಡಿ ನೀರು ಕೊಂಡುಕೊಳ್ಳುವುದು ಬೇಡವೆಂದು ಗ್ರಾಮದ ಹೆಚ್ಚಿನ ಸಂಖ್ಯೆ ಜನ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಪಡೆದುಕೊಳ್ಳುತಿಲ್ಲ.
ಗ್ರಾಮದ ಪ್ರತಿಮನೆಗಳಿಗೆ ಗ್ರಾಪಂ ವತಿಯಿಂದ ನೀರಿನ ನಲ್ಲಿಗಳನ್ನು ಜೊಡಿಸಲಾಗಿದೆ. ಗ್ರಾಮದ ಬಳಿ ಇರುವ ಬೋರವೆಲ್‌ ನೀರನ್ನು ದಿನ ಬಳಕೆಗೆ ಬಳಸಲು ನಲ್ಲಿ ಮೂಲಕ ಒದಗಿಸಲಾಗುತ್ತಿದೆ. ಆದರೆ ಕುಡಿಯಲು ಕೆರೆಯ ನೀರನ್ನು ನೇರವಾಗಿ ಬಳಸುತ್ತಿರುವ ಜನರಿಗೆ ಅನೇಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂಬ ಆತಂತ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ.
ಈ ಕುರಿತು ಗ್ರಾಪಂ ಪಿಡಿಒ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರಿನ ಕುರಿತು ಮಾಹಿತಿ ನೀಡಬೇಕಾಗಿದ್ದು ಆ ಕಾರ್ಯವನ್ನೂ ಈವರೆಗೂ ಅವರು ಮಾಡಿಲ್ಲ. ಶುದ್ದೀಕರಣ ಘಟಕದಿಂದ ಕೆರೆ ನೀರು ಪೂರೈಕೆ ಮಾಡಿದಲ್ಲಿ ಗ್ರಾಮಸ್ಥರು ಬಳಕೆ ಮಾಡಲು ಈ ನೀರನ್ನೇ ಉಪಯೋಗ ಮಾಡುವುದಿರಿಂದ ಕೆರೆಯ ನೀರು ಖಾಲಿಯಾಗುತ್ತದೆ ಎಂಬ ಆತಂಕದಿಂದ ಕುಡಿಯಲು ಮಾತ್ರ ಬಳಕೆ ಮಾಡುತ್ತಿದ್ದಾರೆಂದು ಗ್ರಾಮದ ಹೆಚ್ಚಿನ ಸಂಖ್ಯೆ ಜನ ಈ ಮಾತನ್ನೇ ಹೇಳುತ್ತಿದ್ದಾರೆ.
ಕುಡಿಯುವ ನೀರಿನ ಸೌಲಭ್ಯ ಕುರಿತು ಗುರ್ಲಕಟ್ಟಿ ವ್ಯಾಪ್ತಿ ಸಂಬಂಧಿಸಿದ ಕಣಕೀಕೊಪ್ಪ ಪಿಡಿಒ ಡಿ.ಕೆ. ಸಾವಳಗಿ ಅವರನ್ನು ವಿಚಾರಿಸಿದಾಗ, ಗ್ರಾಮದಲ್ಲಿ ಬಹುತೇಕ ಎಲ್ಲ ಜನರು ಕೆರೆಯ ನೀರಿನ್ನು ಕುಡಿಯಲು ಒಯ್ಯುತ್ತಾರೆ. ಜಿಪಂದಿಂದ ಗ್ರಾಮ ನೈರ್ಮಲ್ಯ ಯೋಜನೆ ಅಡಿಯಲ್ಲಿ ಕೆರೆಗೆ ಶುದ್ದೀಕರಣ ಘಟಕವನ್ನು ಕಳೆದ 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಆದರೆ ಈ ಘಟಕದ ನೀರು ಗ್ರಾಮಕ್ಕೆ ಕೊಡುವುದು ಬೇಡ, ಕೆರೆ ಚಿಕ್ಕದಾಗಿರುವುದರಿಂದ ಶುದ್ದೀಕರಣ ಘಟಕದಿಂದ ನೀರು ಒದಗಿಸಿದರೆ ಬಳಕೆಗೆ ಜನ ಈ ನೀರನ್ನು ಉಪಯೋಗ ಮಾಡುವುದರಿಂದ ಕೆರೆ ನಿರು ಬರಿದಾಗುತ್ತಿದೆ. ಕೆರೆ ಬರಿದಾದರೆ ನಿಗಧಿತ ಅವಧಿಯಲ್ಲಿ ನೀರಾವರಿ ನಿಗಮ ಅಧಿಕಾರಿಗಳು ತಕ್ಷಣ ಕೆರೆಗೆ ಕಾಲುವೆ ಮುಖಾಂತರ ನೀರು ಹರಿಸುವುದಿಲ್ಲ. ಹೀಗಾಗಿ ಸದಾ ಅಧಿಕಾರಿಗಳ ಹತ್ತಿರ ನೀರು ಕೊಡಿ ಎಂದು ಮನವಿ ಮಾಡುವುದೇ ತಲೆ ನೋವಾಗುವುದರಿಂದ ಗ್ರಾಮಸ್ಥರು ಕುಡಿಯಲು ಕೊಡಗಳ ಮೂಲಕ ನೀರು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಬಳಕೆ ಮಾಡಲು ಬೋರವೆಲ್‌ಗಳಿಂದ ನಳಗಳ ಮುಖಾಂತರ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆರೆಯ ನೀರು ಕಲುಷಿತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಗೆ ವರದಿ ಕಳುಹಿಸಲಾಗಿದ್ದು, ನೀರಿನ ಸ್ಯಾಂಪಲ್‌ ಪಡೆದುಕೊಂಡಿದ್ದಾರೆ. ಕಳೆದ ಫೆಬ್ರವರಿ ತಿಂಗಳ ವರದಿ ಕುಡಿಯುವ ನೀರು ಕಲ್ಮಶವಿಲ್ಲ ಎಂದಿತ್ತು. ಈ ತಿಂಗಳ ವರದಿ ಎಪ್ರಿಲ್‌ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯಿಂದ ಲಭ್ಯವಾಗಲಿದೆ.
ಡಿ.ಕೆ. ಸಾವಳಗಿ
ಕಣಕೀಕೊಪ್ಪ ಪಿಡಿಒ

loading...