ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗೆ ಆಕ್ರೋಶ

0
12
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳಿಗೆ ಅನಗತ್ಯ ತಿದ್ದುಪಡಿ ತರುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರಿಂದ ಕಾರ್ಮಿಕರ ಸವಲತ್ತುಗಳನ್ನು ಕಸಿದುಕೊಳ್ಳೂವ ಯತ್ನ ನಡೆಯುತ್ತಿದೆ ಎಂದು ಸಿ.ಐ.ಟಿ.ಯು ರಾಜ್ಯಾದ್ಯಕ್ಷೆ ಹಾಗೂ ಸಿ.ಐ.ಟಿ,ಯು ಸಂಯೋಜಿತ ಅಂಗನವಾಡಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮಿ ಆಕ್ಷೇಪಿಸಿದ್ದಾರೆ.
ದಾಂಡೇಲಿಯಲ್ಲಿ ಸುದ್ದಿಗಾರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಮಾರ್ಚ 23 ರಿಂದ 16 ರವರೆಗೆ ಕ್ಯಾಲಿಕಾಟ್‌ನಲ್ಲಿ ಸಿ.ಐ.ಟಟಿ.ಯು ಜನರಲ್‌ ಕೌನ್ಸಿಲ್‌ ಸಭೆ ನಡೆಯಲಿದ್ದು ಈ ಸಭೆಯಲ್ಲಿ ದೇಶದ ಕಾರ್ಮಿಕರ ಸಮಸ್ಯೆ, ಅಂಗನವಾಡಿ ನೌಕರರು ಹಾಗೂ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಯಲಿದೆ. ದೇಶದಲ್ಲಿ ಶೇ. 77 ರಷ್ಟು ಕುಟುಂಭಗಳಿಗೆ ಖಾಯಂ ಕೆಲಸಗಳಿಲ್ಲ. ಶೇ. 55.2 ರಷ್ಟು ಕುಟುಂಭಗಳು 10 ಸಾವಿರ ರೂ.ಗಳಿಗೂ ಕಡಿಮೆ ವೇತನ ಪಡೆಯುತ್ತಿವೆ. ಶೇ.. 38.5 ರಷ್ಟು ಕುಟೂಂಬದವರು ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಇಂತಹ ದುಸ್ಥತಿ ನಮ್ಮ ದೇಶದಲ್ಲಿದೆ. ಈ ಸರಕಾರದಲ್ಲಿ ಕಾರ್ಮಿಕರನ್ನು ಕನಿಷ್ಠವಾಗಿ ಕಾಣಲಾಗುತ್ತಿದೆ. ಕೇಂದ್ರ ಸರಕಾರ ಕಾರ್ಮಿಕರ ಕನಿಷ್ಠ ವೇತನ ಕಾಯಿದೆಗೂ ತಿದ್ದುಪಡಿ ತರಲು ಹೊರಟಿದೆ.  ಪ್ರಜ್ಞಾವಂತ ಸಮಾಜ ಇಂತಹ ವಿದ್ಯಾಮಾನಗಳಿಂದ ಎಚ್ಚೆತ್ತುಕೊಳ್ಳಬೇಕಿದೆ. ಕೋಮು ಶಕ್ತಿಗಳಿಗೆ ಕಡಿವಾಣ ಹಾಕಬೇಕಿದೆ ಎಂದರು. ಈ ಸಂದರ್ಭದಲ್ಲಿ ಸಿ.ಐ.ಟಿಯು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಯಮುನಾ ಗಾಂವಕರ, ಸಿ.ಐ.ಟಿ.ಯು ಮಾಜಿ ಜಿಲ್ಲಾಧ್ಯಕ್ಷ ಹರೀಶ ನಾಯ್ಕ, ಡಿ.ವೈ.ಎಪ್‌.ಐ.ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್‌, ಅಂಗನವಾಡಿ ನೌಕರರ ಜಿಲ್ಲಾ ಮುಖಂಡೆ ನೇತ್ರಾವತಿ ಭರತನಳ್ಳಿ, ಹಳಿಯಾಳ ಅದ್ಯಕ್ಷೆ ಸರಿತಾ ಪಾವಲೆ, ಕಮಲಾ ಕಲ್ಲಗುಡಿ ಮುಂತಾದವರಿದ್ದರು.

loading...