ಕೊರಮಾರ ರಸ್ತೆ ಸುಧಾರಣೆಗೆ ಆಗ್ರಹಿಸಿ ರೈತರ ಧರಣಿ

0
16
loading...

ಬಸವನಬಾಗೇವಾಡಿ: ಪುರಸಭೆಯ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಪವನ (ವಿಂಡ್‌) ವಿದ್ಯುತ್‌ ಹಾಕುತ್ತಿರುವುದು ಪಟ್ಟಣದ ಸಮೀಪದ ಕೊರಮಾರಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆ ಸುಧಾರಣೆ ಮಾಡಬೇಕೆಂದು ಪುರಸಭೆ ಸದಸ್ಯ ನೀಲಪ್ಪ ನಾಯಕ ಒತ್ತಾಯಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಕೊರಮಾರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಪವನ(ವಿಂಡ್‌) ವಿದ್ಯತ್‌ ಕಂಪನಿಯ ಭಾರಿ ವಾಹನ ಬಿದ್ದಿರುವ ಜಾಗೆಯಲ್ಲಿ ಭಾನುವಾರ ರೈತರು ಧರಣಿಯ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರವಾನಿಗೆ ಇಲ್ಲದೇ ಪುರಸಭೆಗೆ ತೆರಿಗೆ ಕಟ್ಟದೆಯೇ ವಂಚನೆ ಮಾಡುತ್ತಿರುವ ಪವನ(ವಿಂಡ್‌) ವಿದ್ಯುತ್‌ ಕಂಪನಿಗಳ ಮೇಲೆ ಮಾರ್ಚ 11 ರೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಮಾರ್ಚ 12 ರಂದು ಪುರಸಭೆಗೆ ಬೀಗ್‌ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಧರಣಿಯಲ್ಲಿ ಪುರಸಭೆ ಸದಸ್ಯರಾದ ಪ್ರವೀಣ ಪವಾರ, ಶ್ರೀಕಾಂತ ನಾಯಕ, ಪರಶುರಾಮ ಅಡಗಿಮನಿ, ಬಸನಗೌಡ ಪಾಟೀಲ(ವಾಲಿಬಾಲ), ಎಸ್‌.ಆರ್‌ ಹೂಗಾರ, ಸಂಗಯ್ಯ ನರಸಲಗಿಮಠ, ಗುರುನಗೌಡ ಪಾಟೀಲ, ಸಂಗಪ್ಪ ಸಂಗಮ, ಭೀಮರಾಯ ಸಂಗಮ, ಮಾನಸಿಂಗ್‌ ರಜಪೂತ, ಜಮೀರ ಮೋಮಿನ, ರವಿ ನಾಯಕ, ಲಕ್ಷ್ಮಣ ಅಗಸರ, ಮುತ್ತು ಬಿರಾದಾರ, ಮಲ್ಲಪ್ಪ ಜಮಖಂಡಿ, ನಿಂಗಪ್ಪ ಅಂಗಡಿ ಸೇರಿದಂತೆ ಮುಂತಾದವರು ಇದ್ದರು.

loading...