ಕೋಣಗಳ ಸಾಗಾಟ, ಮೂವರು ಆರೋಪಿ ಬಂಧನ

0
23
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಕಲಘಟಗಿಯಿಂದ ಮಂಗಳೂರಿಗೆ ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಕಸಾಯಿಖಾನೆಗೆ ಲಾರಿಯ ಮೂಲಕ ಕೋಣಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಯಲ್ಲಾಪುರ ಪೊಲೀಸರು 18 ಕೋಣಗಳ ರಕ್ಷಿಸಿ, ಮೂವರು ಆರೋಪಿಯನ್ನು ವಶಪಡಿಸಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

ಮಂಗಳೂರಿನ ವೇಣೂರಿನ ನಿವಾಸಿಗಳಾದ ಲಾರಿ ಚಾಲಕ ಹೈದರ್ ರಮಣದ್(35), ಬಾಬು ಮಾದು(58) ಹಾಗೂ ಫಾರುಕ್ ಮಂಗಳೂರ(30) ಈ ಮೂವರು ಬಂಧಿತ ಆರೋಪಿಗಳಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಮಂಗಳೂರಿನ ಕಸಾಯಿಖಾನೆಗೆ ನೀರು ಆಹಾರವಿಲ್ಲದೇ ಸಾಗಿಸುತ್ತಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಪಟ್ಟಣದ ಕೆ.ಮಿಲನ್ ಹೊಟೆಲ್ ಬಳಿ ಕೋಣ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ರಕ್ಷಿಸಿದ ಕೋಣಗಳನ್ನು ಹುಬ್ಬಳ್ಳಿಯ ಗೋಶಾಲೆಗೆ ಸಾಗಿಸಲಾಗಿದೆ.

ಸಿ.ಪಿ.ಐ ಡಾ.ಮಂಜುನಾಥ ನಾಯಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರತ್ನಕುಮಾರ ನೇತೃತ್ವದಲ್ಲಿ ಎ.ಎಸ್.ಐಗಳಾದ ಶಿವಕುಮಾರ ಬಿ.ವಿ., ಭೀಮಾ ನಾಯಕ, ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಉದಯ ನಾಯ್ಕ, ಜಟ್ಟಪ್ಪ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

loading...