ಕೋಮುಭಾವನೆಗೆ ಧಕ್ಕೆ ತಂದರೆ ಕ್ರಮ: ಪಿಎಸ್‌ಐ ನಾಯ್ಕ

0
31
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ:ಸಂಪ್ರದಾಯಕವಾಗಿ ಆಚಾರಿಸುತ್ತ ಬಂದಿರುವ ಧಾರ್ಮಿಕ ಆಚರಣೆಗಳಿಗೆ ಯಾವುದೆ ನಿರ್ಭಂದ ಪೋಲಿಸ್‌ ಇಲಾಖೆಯಿಂದ ಇಲ್ಲಾ. ಆದರೆ ಕಾನೂನಿಗೆ ವಿರುದ್ದವಾಗಿ ಮತ್ತು ಇತರರಿಗೆ ಕಿರಿ ಕಿರಿ ಉಂಟು ಮಾಡುವದರೊಂದಿಗೆ ಕೋಮುಭಾವನೆ ಕೆರಳಿಸುವ ವ್ಯಕ್ತಿಗಳನ್ನು ಮುಲಾಜಿಲ್ಲದೆ ಕಾನೂನಿಡಿಯಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುವದು ಎಂದು ಪಿಎಸ್‌ಆಯ್‌. ಸುಮಾ ನಾಯ್ಕ ಹೇಳಿದರು.
ಪಟ್ಟಣದ ಪೋಲಿಸ್‌ ಠಾಣೆಯಲ್ಲಿ ಬುಧವಾರ ಕರೆದಿದ್ದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಆಚಾರ ವಿಚಾರಗಳು ನಮ್ಮಲ್ಲಿರುವ ಕಲ್ಮಶವನ್ನು ದೂರುಗೊಳಿಸಿ ಸರ್ವರಲ್ಲಿ ಬಾತೃತ್ವದ ಗುಣ ಬೆಳೆಸುತ್ತವೆ. ಕೆಲವರು ತಮ್ಮ ವೈಕ್ತಿಕ ದ್ವೇಷ ಅಸೂಹೆಗಳನ್ನು ಹಬ್ಬದ ದಿನಗಳಲ್ಲಿ ತೊರ್ಪಡಿಸಿ ಸಮಾಜದಲ್ಲಿ ಭಯದ ವಾತಾವರಣ ಮುಡಿಸುವದನ್ನು ಕಾನೂನು ಎಂದು ಒಪ್ಪುವದಿಲ್ಲ. ಅಂತಹ ಸಂಶಯ ವದ್ಯಕ್ತಿಗಳು ಕಂಡುಬಂದರೆ ಕೂಡಲೆ ನಿಮ್ಮ ಬೀಟ್‌ ಪೋಲಿಸ್‌ ಅಥವಾ ಕುದ್ದಾಗಿ ತಾವು ನನಗೆ ನೇರವಾಗಿ ಮಾಹಿತಿ ನೀಡಿ. ಇಂತಹ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವದು ಎಂದರು.
ಈಗಾಗಲೆ ಹಬ್ಬಗಳಲ್ಲಿ ಪರಸ್ಪರ ತಂಟೆ ಮಾಡಿಕೊಂಡ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ಸಿಟ್ಟಿನ ಸಮಯದಲ್ಲಿ ಮಾಡಿದ ಅಪರಾಧಕ್ಕೆ ಶಿಕ್ಷೆ ಅನುಭವಿಸುವ ಮೊದಲು ವಿಚಾರವಂತರಾಗಿ ಸಮಾಜದಲ್ಲಿ ಸ್ನೇಹ, ಪ್ರೀತಿ ವಿಶ್ವಾಸದಿಂದ ಇರುವದನ್ನು ರೂಢಿಸಿಕೊಳ್ಳಬೇಕು. ಬಾರ ಮಾಲಿಕರು ವೇಳೆಗೆ ಸರಿಯಾಗಿ ತಮ್ಮ ಅಂಗಡಿಗಳನ್ನು ಮುಚ್ಚಬೇಕು ಅಲ್ಲದೆ ಹಬ್ಬದ ದಿನ ಅಕ್ರಮವಾಗಿ ಮದ್ಯ ಮಾರಾಟ ಮಾಟದಂತೆ ಎಚ್ಚರವಹಿಸಲು ಸೂಚಿಸಿದರು.
ಶಾಂತಿ ಸಭೆಯ ಆಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಸದಸ್ಯ ನ್ಯಾಯವಾದಿ ಫಕೀರಗೌಡ ಸಿದ್ದನಗೌಡರ ಮಾತನಾಡಿ, ಪಟ್ಟಣದಲ್ಲಿ ಅನೇಕ ಜ್ಯಾತಿ ಮತ ಪಂತಗಳ ಇದ್ದರು ಪ್ರತಿಯೊಂದು ಹಬ್ಬದಲ್ಲಿ ಇಲ್ಲಿಯ ಜನರು ಸಾಮರಸ್ಯದಿಂದ ಪ್ರತಿಯೊಬ್ಬರು ಪಾಲ್ಗೊಂಡು ನಾಡಿನ ಇತರರಿಗೆ ಭಾವೈಕ್ಯದ ಅರಿವು ಮೂಡಿಸಿ, ಬೈಲಹೊಂಗಲ ಜ್ಯಾತಿ ರಹಿತ ಪಟ್ಟಣವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಕಳಂಕ ತರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದ್ದು ಪವಿತ್ರ ಹೋಳಿ ಹಬ್ಬವನ್ನು ನಮ್ಮ ಪ್ರೀತಿ ಪಾತ್ರರಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸೋಣ. ಹಬ್ಬದ ಹೆಸರಿನಲ್ಲಿ ಸರಾಯಿ ಸೇವಿಸಿ ಅದರ ಪಾವಿತ್ರ್ಯಕ್ಕೆ ಕಳಂಕ ತರುವ ಕೆಲಸ ಯಾರು ಮಾಡಬಾರದು. ಹಬ್ಬಗಳ ಆಚರಣೆಗಳನ್ನು ಧಾರ್ಮಿಕ ತಳಹದಿಯ ಮೇಲೆ ಹಬ್ಬಗಳನ್ನು ಆಚರಿಸಿ ನಮ್ಮ ಮುಂದಿನ ಪಿಳಿಗೆಗೆ ಅವುಗಳ ಮಹತ್ವವನ್ನು ತಿಳಿಯುವ ರೀತಿಯಲ್ಲಿ ನಡೆದುಕೊಳ್ಳೊಣ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮಹಾಂತೇಶ ತುರಮರಿ, ಶಿವಯೋಗಿ ಹುಲೆಣ್ಣವರ, ರಫೀಕ ಭಡೆಗಾರ, ಅಬ್ದುಲ ರಹೇಮಾನ ಹುಬ್ಬಳ್ಳಿ, ವಿಶಾಲ ಹೊಸುರ, ಗಂಗಪ್ಪ ಸಂಗೊಳ್ಳಿ, ಮಹಾಂತೇಶ ಸೂಳೆಬಾಂವಿ, ಶ್ರೀಕಾಂತ ಶಿರಹಟ್ಟಿ, ಆನಂದ ಅಂಗಡಿ, ಬಾಳು ಪಟ್ಟಿಹಾಳ, ತಿಪ್ಪಣ್ಣ ಸವದತ್ತಿ, ಬಾರ ಮತ್ತು ರೆಸ್ಟೊರೆಂಟ್‌ ಮಾಲಿಕರಾದ ದೀಪಕ, ಸುಶಾಂಕ, ವಜ್ರೇಶ ಹಾಗೂ ನೂರಾರು ನಾಗರಿಕರು ಉಪಸ್ಥಿತರಿದ್ದ ಸಲಹೆ ಸೂಚನೆ ನೀಡಿದರು. ಸಕ್ರನಾಯ್ಕ ರಾಯನಾಯ್ಕರ ಸ್ವಾಗತಿಸಿ ನಿರೂಪಿಸಿದರು.

loading...