ಕ್ಷೇತ್ರ ಯಾವುದೇ ಇರಲಿ ಅದನ್ನು ನಿಭಾಯಿಸುವ ಗುಣ ಮಹಿಳೆಯರಲ್ಲಿದೆ: ಸೀಮಾ ಲಾಟ್ಕರ

0
29
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಂತರಾಷ್ಟ್ರೀಯ ಮಹಿಳಾದಿನಾಚರಣೆ ಅಂಗವಾಗಿ ಕೆ ಎಲ್ ಇ ವೇಣುಧ್ವನಿ, ಬೆಳಗಾವಿಯ ಮಹಿಳಾ ಉದ್ಯಮಿಗಳ ಸಂಘಟನೆ ಮತ್ತು ಡೊಮೆಸ್ಟಿಕ್ ವರ್ಕರ್ಸ ಅಸ್ಸೋಸಿಯೇಶನ್ ಆಫ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಮನೆಯಲ್ಲಿಯೇ ದೊರೆಯುವ ಕಚ್ಚಾ ಸಾಮಗ್ರಿಗಳಿಂದ ಬ್ಯಾಗ್ ಪೇಪರ್ ಬ್ಯಾಗ್ ಪರಿಸರ ಸ್ನೇಹಿ ಅಗರಬತ್ತಿ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.
ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಕಾಂiÀರ್iಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆ ಯಾವುದೇ ವಿಷಯದಲ್ಲಿ ತಾನು ಕಡಿಮೆ ಎಂದು ಭಾವಿಸಬಾರದು ಕ್ಷೇತ್ರ ಯಾವುದೇ ಇರಲಿ ಅದನ್ನು ನಿಭಾಯಿಸುವ ಗುಣ ಮಹಿಳೆಯರಲ್ಲಿ ತೀರ ನೈಸರ್ಗಿಕವಾಗಿ ಬರುವಂತದ್ದು. ಸಾಧನೆಗೆ ಸಮಯದ ಕೊರತೆ ಅಡ್ಡಿಯಾಗ ಬಾರದು ತಮ್ಮಲ್ಲಿರುವ ಅಂತಃ ಶಕ್ತಿಯನ್ನು ಗುರುತಿಸಿ ಅದನ್ನು ಪೋಷಿಸಿಕೊಂಡು ಹೋಗಬೇಕೆಂದು ಕರೆ ನಿಡಿದರು.
ಬೆಳಗಾವಿ ಮಹಿಳಾ ಉದ್ಯಮಿಗಳ ಸಂಘಟನೆಯ ಅದ್ಯಕ್ಷೆ ಪೈ ಬೇಕರಿಯ ಮಾಲಿಕರಾಗಿರುವ ಜೊತ್ಸ್ನಾ ಪೈ, ಗ್ರೀನ್ ಅರ್ಥ ಬಯೋ ಫುಯಲ್‍ನ ಮಾಲೀಕರಾದ ಮಾಧುರಿ ಪಟೇಲ್ ಟೈಮ್ ಇನ್ಸ್‍ಟಿಟ್ಯುಟ್‍ನ ನಿರ್ದೇಶಕರಾದ ತುಳಸಾ ಪಾಟೀಲ್, ಮೈರಾ ಇವೆಂಟ್ಸ ಮತ್ತು ಮೈರಾ ಹ್ಯಾಂಡಿಕ್ರಾಫ್ಟನ ಮಾಲೀಕರಾದ ರೂಪಾ ದೇಸಾಯಿ, ಭಾತ್ಕಾಂಡೆ ಸ್ಪೋಟ್ರ್ಸನ ಮಾಲೀಕರಾದ ಬಬಿತಾ ಭಾತಕಾಂಡೆ, ನೇತಲ್ಕರ್ ಪವರ್ ಟ್ರಾನ್ಸಮಿಶನ್ಸ್‍ನ ಮಾಲೀಕರಾದ ಆರತಿ ನೇತಲ್ಕರ್, ಅನಿತಾ ಕಣಬರಗಿ ಹಣಕಾಸು ಸಲಹೆಗಾರರು ಬ್ಯೂಟಿ ಥೆರಪಿ ಟ್ರೈನರ್ ಗೀತಾ ಕಿತ್ತೂರ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಹಳೆಯ ಬಟ್ಟೆ ಮತ್ತು ಬೇಡವಾದ ಸೀರೆಗಳಿಂದ ಬ್ಯಾಗ್ ತಯಾರಿಕೆ ಪೇಪರ್ ಬ್ಯಾಗ್ ತಯಾರಿಕೆ ಮತ್ತು ಅಗರಬತ್ತಿ ತಯಾರಿಕೆಯ ಬಗ್ಗೆ ತರಬೇತಿ ನೀಡಿ ಇವುಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮಾಹಿತಿಯನ್ನು ಸಹ ನೀಡಿದರು. ತಮಗಿರುವ ಆದಾಯದಲ್ಲಿಯೇ ಯಾವ ರೀತಿ ಉಳಿತಾಯ ಮಾಡಬೇಕು ಯಾವ ರೀತಿ ಮಹಿಳೆಯರು ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಯ್ದುಕೊಳ್ಳಬೇಕು ಯಾವರೀತಿ ತಮ್ಮ ಜೀವನ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಬಹುದು ಎನ್ನುವ ಕುರಿತು ಮಾರ್ಗದರ್ಶನ ನೀಡಿದರು.
ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ವೇಣುಧ್ವನಿಯೊಂದಿಗೆ ಬೆಳಗಾವಿಯ ಮಹಿಳಾ ಉದ್ಯಮಿಗಳನ್ನು ಗೌರವಿಸಲಾಯಿತು
ಕೆ ಎಲ್ ಇ ವೇಣುಧ್ವನಿಯ ನಿಲಯ ನಿರ್ವಾಹಕರಾದ ಶ್ರೀ ವೀರೇಶ್ ನಂದಗಾಂವ ಅವರು ಸ್ವಾಗತಿಸಿದರು, ಸುನಿತಾ ದೇಸಾಯಿ ನಿರೂಪಿಸಿದರು, ವೇಣುಧ್ವನಿಯ ಕಾರ್ಯಕ್ರಮ ಸಂಯೋಜಕರಾದ ಭರತ್ ಬಡಿಗೇರ್ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಸಮುದಾಯ ಬಾನುಲಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...