ಖಾಸಗಿ ಬಸ್‌ ಚಾಲಕರಿಗೆ ಖಡಕ ಎಚ್ಚರಿಕೆ

0
36
loading...

ಕನ್ನಡಮ್ಮ ಸುದ್ದಿ- ಧಾರವಾಡ: ಖಾಸಗಿ ಬಸ್‌ ಚಾಲಕರು ವಾಹನ ಚಾಲನೆ ಮಾಡುವಾಗ ಅವರಿಂದಾಗುವ ತೊಂದರೆಯಿಂದ ಬೇಸತ್ತ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಂಚಾರಿ ಪೊಲೀಸ್‌ ಇಲಾಖೆ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸಂಚಾರಿ ಠಾಣೆ ಇನ್ಸಪೆಕ್ಟರ್‌ ಮುರಗೇಶ ಚನ್ನಣ್ಣವರ ಅವರು ಚಾಲಕರಿಗೆ ತಿಳುವಳಿಕೆ ನೀಡುವದಲ್ಲದೇ ಖಡಕ ಎಚ್ಚರಿಕೆ ಕೊಟ್ಟರು. ರಸ್ತೆ ಬದಿ ಚಲಿಸುವ ದ್ವಿಚಕ್ರ ವಾಹನ ಹಾಗೂ ಮತ್ತಿತರ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಬಸ್‌ ಚಾಲಕರ ರ್ಯಾಷ್‌ ಡ್ರೈವಿಂಗ್‌ನಿಂದ ಸಾರ್ವಜನಿಕರು ಸೇರಿದಂತೆ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅತೀ ವೇಗದಿಂದ ವಾಹನ ಚಲಾಯಿಸುವದರ ಜೊತೆಗೆ ಎಲ್ಲೆಂದರಲ್ಲಿ ತಕ್ಷಣ ಬ್ರೇಕ್‌ ಹಾಕುವುದು ಹಾಗೂ ರಸ್ತೆ ಒಳಬದಿ ವಾಹನ ನಿಯಂತ್ರಣವಿಲ್ಲದೆ ಚಲಾಯಿಸುವದು ಇದರಿಂದ ಪ್ರಯಾಣಿಕರು ಮತ್ತು ಪಾದಚಾರಿಗಳು ಜೀವ ಭಯದ ವಾತಾವರಣಕ್ಕೆ ತುತ್ತಾಗಿದ್ದರು. ಪ್ರಯಾಣಿಕರಿಗಂತೂ ಮರ್ಯಾದೆ ಕೊಡದೆ ಬಾಯಿಗೆ ಬಂದಂತೆ ಮಾತನಾಡುವ ಕೆಲ ಚಾಲಕ ಹಾಗೂ ನಿರ್ವಾಹಕರ ಕುರಿತು ಪ್ರಯಾಣಿಕರು ಸಂಚಾರಿ ಇಲಾಖೆಯ ಇನ್ಸಪೆಕ್ಟರ ಗಮನಕ್ಕೆ ತಂದಿದ್ದರು.
ಇತ್ತೀಚೆಗೆ ಪೊಲೀಸ್‌ ಪೇದೆ ಹಾಗೂ ಪತ್ರಕರ್ತರೊಂದಿಗೆ ವಾದ ಮಾಡಿದ ಕೆಲವು ಚಾಲಕರ ವರ್ತನೆಗೆ ಬೇಸರವ್ಯಕ್ತವಾಗಿತ್ತು ಈ ಹಿನ್ನಲೆಯಲ್ಲಿ ಸಂಚಾರಿ ಠಾಣೆ ಪೊಲೀಸರು ಕಲಾಭವನದ ಮೈದಾನದಲ್ಲಿ ಖಾಸಗಿ ಬಸ್‌ ಚಾಲಕ ಹಾಗೂ ನಿರ್ವಾಹಕರನ್ನು ಕರೆಯಿಸಿ ಅವರಿಗೆ ಸಂಚಾರಿ ನಿಯಮ ಪಾಲನೆ ಮಾಡುವದರ ಜೊತೆಗೆ ಸಾರ್ವಜನಿಕ ಮತ್ತು ಪ್ರಯಾಣಿಕರೊಂದಿಗೆ ಉತ್ತಮ ನಡುವಳಿಕೆ ವಹಿಸಬೇಕು ಹಾಗೂ ರಸ್ತೆಯಲ್ಲಿ ವಾಹನ ಚಲಾವಣೆ ಮಾಡುವಾಗ ಇನ್ನುಳಿದ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ಸುರಕ್ಷತೆಯಿಂದ ಬಸ್‌ ಚಲಾಯಿಸುವಂತೆ ತಾಕೀತು ಮಾಡಿದರು.

loading...