ಗೋಧಿ ಹಿಟ್ಟಿನಲ್ಲಿ ಪ್ಯಾಸ್ಟಿಕ್ ಮಿಶ್ರಣ ಜನರಲ್ಲಿ ಆತಂಕ

0
25
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿರುವ ಖಾಸಗಿ ಕಂಪನಿಯ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಮಿಶ್ರಣ ಮಾಡಿರುವುದು ಸಾರ್ವಜನಿಕರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಎರಡು ವಾರದ ಹಿಂದೆ ಮಧುಸುಧನ ನಜರೆ ಎಂಬುವರು ಖಾಸಗಿ ಕಂಪನಿಯ ಗೋಧಿಹಿಟ್ಟನ್ನು ತಂದಿದ್ದರು. ಆಹಾರ ಸೇವಿಸಿದಾಗ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಹಿಟ್ಟನ್ನು ನೀರಿನಲ್ಲಿ ಹಾಕಿ ತಪಾಸಣೆ ಮಾಡಿದಾಗ ಪ್ಲಾಸ್ಟಿಕ್ ಮಿಶ್ರಿತ ಇದೆ ಎಂದು ಆರೋಪಿಸುತ್ತಾರೆ.
ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಕಲಬರಕೆ ಮಾಡಿದರೂ ಆಹಾರ ಮತ್ತು ಸರಬರಾಜು ಇಲಾಖೆ ಮಾತ್ರ ಕಣ್ಣುಮುಚ್ಚಿಕುಳಿತಿರುವುದು ಸಾರ್ವಜನಿಕರ ಅಸಮಾದಾನಕ್ಕೆ ಕಾರಣವಾಗಿದೆ.
ಬೆಳಗಾವಿ ನಗರದಲ್ಲಿ ಗೋದಿ ಹಿಟ್ಟನ್ನು ನೀರಿನಲ್ಲಿ ಹಾಕಿ ಬೆರಸಿದಾಗ ಹಿಟ್ಟಿನ ಜತೆಗೆ ಪಾಸ್ಟಿಕ್ ಮಿಶ್ರಿತವಾಗಿದೆ. ಅಲ್ಲೆ ಕೆಲ ದಿನಗಳಿಂದ ಇದನ್ನೆ ಸೇವನೆ ಮಾಡುತ್ತಿರುವ ನಮ್ಮ ಕುಟುಂಬಸ್ಥರು ಆಸ್ಪತ್ರೆಗೆ ಪರದಾಡುವಂತಾಗಿದೆ ಎಂದು ಮಧುಸುಧನ ಆರೋಪಿಸುತ್ತಿದ್ದಾರೆ.

loading...