ಗೋಯಿಂಗ್ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

0
34
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡೀಲಿನ ಸಭಾ ಭವನದಲ್ಲಿ ಜ್ಞಾನ ಜ್ಯೊತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ ಹಾಗೂ ಕೆ.ವಿ.ಜಿ. ಬ್ಯಾಂಕ್ ಕೋಣಾರ ಇವರ ಸಂಯುಕ್ತ ಆಶ್ರಯದಲ್ಲಿ “ಗೋಯಿಂಗ್ ಡಿಜಿಟಲ್” ಆರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಡೀಲು ಇದರ ಮುಖ್ಯೋಪಾಧ್ಯಾಯ ರಾಮಾ ಗೌಡ ಉದ್ಘಾಟಿಸಿದರು.ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಕಿರಿಯ ಸಮಾಲೋಚಕ ದಯಾನಂದ ಗುಂಡು ಮಾತನಾಡಿ ಆರ್ಥಿಕ ಸಾಕ್ಷರತೆಯ ಮಹತ್ವದ ಬಗ್ಗೆ, ಪ್ರಧಾನ ಮಂತ್ರಿ ಜನ ಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಅಟಲ್ ಪೆನಷನ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ, ಸ್ವ-ಸಹಾಯ ಗುಂಪುಗಳಿಗೆ ರಾóಷ್ಟ್ರೀಕೃತ ಬ್ಯಾಂಕಿನ ಪಾತ್ರ, ಎನ್‍ಆರ್‍ಎಲ್‍ಎಮ್ ಬಗ್ಗೆ ಮಾಹಿತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಜ್ಞಾನ ಜ್ಯೊತಿ ಆರ್ಥಿಕ ಸಾಕ್ಷರತಾ ಕೇಂದ್ರದ ಕಿರಿಯ ಸಮಾಲೋಚಕಿ ಗೀತಾ ನಾಯ್ಕ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

loading...