ಗ್ರಾಮೀಣ ಬ್ಯಾಂಕ್‌À ಕಾರ್ಮಿಕ ಸಂಘಟಣೆಗಳ ಮುಷ್ಕರ

0
20
loading...

ಕನ್ನಡಮ್ಮ ಸುದ್ದಿ- ಧಾರವಾಡ: ಗ್ರಾಮೀಣ ಬ್ಯಾಂಕ್‌ ಮುಖ್ಯ ಕಛೇರಿ ಎದುರು ಗ್ರಾಮೀಣ ಬ್ಯಾಂಕ್‌ಗಳ ಕಾರ್ಮಿಕ ಸಂಘಟಣೆಗಳ ಸಂಯುಕ್ತ ವೇದಿಕೆಯಿಂದ 2 ದಿನಗಳ ಕಾಲ ಮುಷ್ಕರ ಕರೆ ನೀಡಿತ್ತು. ನಿವೃತ್ತಿ ವೇತನದಲ್ಲಿ ಸಮಾನತೆ, ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸುವುದು, ಅನುಕಂಪ ಆಧಾರಿತ ನೇಮಕಾತಿ ಜಾರಿಗೊಳಿಸುವದು, ಸೇವಾ ಹಾಗೂ ಬಡ್ತಿ ನಿಯಮಗಳಲ್ಲಿ ಸಮಾನತೆ, ದಿನಗೂಲಿ ನೌಕರರನ್ನು ಖಾಯಂಗೊಳಿಸುವದು, ಕಂಪ್ಯೂಟರ್‌ ಇಂಕ್ರಿಮೆಂಟ್‌ ಜಾರಿಗೊಳಿಸುವದು, ಮುಂತಾದ ಬೇಡಿಕೆಗಳನ್ನು ಆಧರಿಸಿ ಮೂರು ದಿನಗಳ ಕಾಲ ಮುಷ್ಕರ ನಡೆಸಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ವಿ.ಕೆ, ಬನ್ನಿಗೋಳ,ಎಸ್‌.ಎನ್‌. ಸವದತ್ತಿ, ಆರ್‌.ವಿ ಪತ್ತಾರ, ಜಿ.ಎಮ್‌.ವೈದ್ಯ, ಎ.ಬಿ. ಕುಲಕರ್ಣಿ, ಎಚ್‌.ಎ ಪಾಟೀಲ, ಎ.ಜಿ. ಪಾಟೀಲ, ಎಲ್‌.ಎಸ್‌, ಲೋಕರೆ, ಸಿ. ಎಸ್‌. ಪೂಜಾರ, ಸ್ಟೇಫಿನ್‌ ಪಾಲ್ಗೊಂಡಿದ್ದರು.

loading...