ಗ್ರಾಹಕರ ವೇದಿಕೆ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯ ಕೊರತೆ: ನ್ಯಾ. ಗೋವಿಂದಯ್ಯ

0
17
loading...

ಕನ್ನಡಮ್ಮ ಸುದ್ದಿ-ಕಾರವಾರ: ಗ್ರಾಹಕರ ವೇದಿಕೆಗಳಿರುವ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಗ್ರಾಹಕರ ಹಕ್ಕುಗಳ ಮತ್ತು ಗ್ರಾಹಕ ವೇದಿಕೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಹೇಳಿದರು.

ಅವರು ಗುರುವಾರ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕೊಳ್ಳುವವರು ಸದಾ ಎಚ್ಚರದಿಂದ ಇರಬೇಕು. ಗ್ರಾಹಕರಿಗೆ ಹಕ್ಕುಗಳು ಮತ್ತು ಜವಾಬ್ದಾರಿಗಳಿವೆ. ಗ್ರಾಹಕರು ಕಾನೂನು ಬಗ್ಗೆ ತಿಳಿದುಕೊಂಡಿರಬೇಕು. ತಮಗೆ ಅನ್ಯಾಯವಾದಾಗ ಅದನ್ನು ಪ್ರಶ್ನಿಸಬೇಕು ಎಂದು ಹೇಳಿದರು.

ಗ್ರಾಹಕರ ಜಾಗೃತಿ ಕುರಿತು ಉಪನ್ಯಾಸ ನೀಡಿದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೇಶವ ಭಟ್ ಜಿಲ್ಲೆಯಲ್ಲಿ ಮತ್ತು ನಮ್ಮ ದೇಶಾದ್ಯಂತ್ಯ ಗ್ರಾಹಕ ವೇದಿಕೆಗೆ ದೂರು ನೀಡುವವರ ಸಂಖ್ಯೆ ಬಹಳ ಕಡಿಮೆಯಿದೆ. ದೂರು ಕೊಟ್ಟು ಎಲ್ಲಿ ಅಲೆದಾಡುವದು ಎಂದು ರಾಜಿ ಮಾಡಿಕೊಳ್ಳುವ ಗ್ರಾಹಕರಿದ್ದಾರ. ಕಾನೂನಿನ ಬಗ್ಗೆ ಅರಿವಿನ ಕೊರತೆ ಇದಕ್ಕೆ ಕಾರಣವಿರಬಹುದು. ಗ್ರಾಹಕರ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ತ್ವರಿತವಾಗಿ, ನಿಗದಿತ ಕಾಲದ ಒಳಗಾಗಿ ಪರಿಹರಿಸಲಾಗುವುದು. ಗ್ರಾಹಕರು ಸೇವಾ ನ್ಯೂನತೆಗಳ ಬಗ್ಗೆ ವೇದಿಕೆಗೆ ದೂರುಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ಬಿ.ರಘುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದ್ಮರಾಜ ನಾಯಕ ಅವರು ವಂದನಾರ್ಪಣೆ ಮಾಡಿದರು.

loading...