ಚಂದ್ರು, ಅಸ್ನೋಟಿಕರ್‌ ನಡುವಿನ ಸಂಬಂಧ ತನಿಖೆಗೆ ಆಗ್ರಹ

0
16
loading...

ಕನ್ನಡಮ್ಮ ಸುದ್ದಿ-ಕಾರವಾರ: ಸ್ಲಿಫ್‌ ಆಫ್‌ ದಿ ಟಂಗ್‌ ದೊಡ್ಡ ರಾಜಕಾರಣಿಗಳಿಗೆ ಆಗುವುದುಂಟು, ಅದರಂತೆ ನನಗೂ ಆಗಿದೆ. ಅದನ್ನೇ ದೊಡ್ಡದು ಮಾಡಿ ಮೈಂಡ್‌ ಗೇಮ್‌ ಆಡುವುದು ಬೇಡ ಎಂದು ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ ಗುರುವಾರ ಮಾಜಿ ಸಚಿವ ಅಸ್ನೋಟಿಕರ್‌ಗೆ ತಿರುಗೇಟು ನೀಡಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ನಾನು ಈಚೆಗೆ ಕಾಂಗ್ರೆಸ್‌ ಕಚೇರಿ ಉದ್ಘಾಟನೆಯ ವೇಳೆ ಬಾಯಿ ತಪ್ಪಿ(ಸ್ಲಿಪ್‌ ಆಫ್‌ ದಿ ಟಂಗ್‌) ಶಾಸಕ ಆಸ್ನೋಟಿಕರ್‌ ಎಂದದ್ದು ನಿಜ. ಇಂಥ ತಪ್ಪುಗಳು ದೊಡ್ಡವರಿಂದ ಆಗುತ್ತವೆ. ಇದನ್ನೇ ದೊಡ್ಡದು ಮಾಡಿ ಶಾಸಕ ಸೈಲ್‌ ಹಾಗೂ ನನ್ನ ಮಧ್ಯೆ ವಿರಸ ತರುವ ಮೈಂಡ್‌ ಗೇಮ್‌ ಆಡಬಾರದು. ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಬಿಜೆಪಿ ಬಿಟ್ಟು ಜೆಡಿಎಸ್‌ ಸೇರಿದ ನಂತರ ಮೊದಲ ಬಾರಿಗೆ ಕಾರವಾರ ಬಂದಾಗ ಮಾಧ್ಯಮಗಳ ಎದುರು ಜಿಲ್ಲೆಯಲ್ಲಿ ಆರು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದನ್ನು ಮರೆಯಬಾರದು ಎಂದರು. ಮಾಜಿ ಸಚಿವ ಆಸ್ನೋಟಿಕರ್‌ ಅಪರಾಧ ಹಿನ್ನೆಲೆಯವರನ್ನು ಮನೆಗೆ ಕರೆತಂದ ಉದಾಹರಣೆ ಈಚೆಗೆ ತಾನೇ ನಡೆದಿದೆ. ಇಂಥವರಿಂದ ಅಭಿನಂದನೆ ನನಗೆ ಬೇಡ ಎಂದರು. ಮಾಜಿ ಸಚಿವರು ತಪ್ಪು ಮಾಡಬಾರದು. ನಮ್ಮ ಪಕ್ಷದ ಕಚೇರಿಯ ಸಂದರ್ಭದಲ್ಲಿ ಮಾತಾಡಿದ ಸಂಗತಿ ಅವರಿಗೇಕೆ? ಅವರು ಸಹ ಜೆಡಿಎಸ್‌ ಸೇರಿದ ನಂತರವೂ ಬಿಜೆಪಿ ಗೆಲ್ಲುತ್ತದೆ ಎಂದಿದ್ದರು. ಅದನ್ನು ಮರೆಯಬಾರದು.
ಕಾರವಾರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸಮೀರ್‌ ನಾಯ್ಕ ಮಾತನಾಡಿ ಶಾಸಕ ಸತೀಶ್‌ ಸೈಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರವಾರ ಬಂದಾಗ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಸಹ ಸೈಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಎಂದಿದ್ದಾರೆ. ಹಾಗಾಗಿ ಶಾಸಕರು ಕಾಂಗ್ರೆಸ್‌ ಟಿಕೆಟ್‌ ನಿಂದ ಸ್ಪರ್ಧಿಸುವುದು ಖಚಿತ. ಅವರ ಆಯ್ಕೆಯು ಖಚಿತ. ಅಭಿವೃದ್ಧಿ ಕೆಲಸ ಮುಂದಿಟ್ಟು ಗೆಲ್ಲುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮತ್ತೆ ಬರಲಿದೆ ಎಂದು ಸಮೀರ್‌ ನಾಯ್ಕ ಹೇಳಿದರು. ಅಶೋಕ್‌ ನಾಯ್ಕ, ಜಿ.ಪಂ.ಸದಸ್ಯ ಕೃಷ್ಣ ಮೇಥಾ, ಬಾಂದೇಕರ್‌, ದೇಸಾಯಿ ಇದ್ದರು.

loading...