ಚಾಲಕನಿಗೆ ಹೃದಯಾಘಾತ: ನಿಯಂತ್ರಣ ತಪ್ಪಿದ ಬಸ್‌

0
14
loading...

ಗಂಗಾವತಿ: ಈಶಾನ್ಯ ಸಾರಿಗೆ ಸಂಸ್ಥೆಯ ವಾಹನ ಚಲಾಯಿಸುವ ಸಂದರ್ಭದಲ್ಲಿ ಚಾಲಕ ಸತ್ಯನಾರಾಯಣ ಎಂಬಾತನಿಗೆ ಹೃದಯಾಘಾತ ಸಂಭವಿಸಿದ ಕಾರಣದಿಂದ ತಾಲೂಕಿನ ಮರಳಿ ಗ್ರಾಮದ ಹತ್ತಿರ ಇರುವ ಟೋಲ್‌ಗೇಟ್‌ ಒಳಗಡೆ ವಾಹನ ನುಗ್ಗಿ ಅಪಘಾತ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಸಾರಿಗೆ ಸಂಸ್ಥೆಯ ಯಲಬುರ್ಗಾ ಘಟಕದ ಈ ವಾಹನ ಕುಕನೂರಿನಿಂದ ಗಂಗಾವತಿ ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿತ್ತು. ಲಘು ಹೃದಯಾಘಾತ ಸಂಭವಿಸಿದ ಕಾರಣ ವಾಹನ ನಿಯಂತ್ರಣ ತಪ್ಪಿ ಟೋಲ್‌ಗೇಟ್‌ ಒಳಗಡೆ ನಿಂತಿದ್ದ ಮರಳಿನ ಟ್ರಾಕ್ಟರ್‌ಗೆ ಢಿಕ್ಕಿ ಹೊಡೆದಿದೆ. ಟ್ರಾಕ್ಟರನಲ್ಲಿದ್ದ ಜಂಗಮರ ಕಲ್ಗುಡಿಯ ಮೂರು ಜನ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿ ಅರಿಯದ ಸ್ಥಳೀಯರು ಚಾಲಕ ಸತ್ಯನಾರಾಯಣನಿಗೆ ಹಿಗ್ಗಾಮುಗ್ಗಾ ಥಳಿಸುವ ಸಂದರ್ಭದಲ್ಲಿ ಆತನ ತಲೆಗೆ ತೀವ್ರ ಸ್ವರೂಪದ ಹೊಡೆತಗಳು ಬಿದ್ದಿವೆ. ಪ್ರಜ್ಞಾಹೀನನಾದ ಚಾಲಕ ಮತ್ತು ಗಾಯಗೊಂಡಿರುವ ಕಾರ್ಮಿಕರನ್ನು ಚಿಕಿತ್ಸೆಗಾಗಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...