ಚಿಕ್ಕಮಕ್ಕಳಿಗೆ ದೊರೆಯದ ಚಿಕಿತ್ಸೆ: ತಾಲೂಕಾಸ್ಪತ್ರೆ ವಿರುದ್ಧ ಆಕ್ರೋಶ

0
15
loading...

ನರಗುಂದ: ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ದೊರೆಯುತಿಲ್ಲ. ಇದಲ್ಲದೇ ಚಿಕ್ಕಮಕ್ಕಳ ತಜ್ಞರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಸದಾ ಕಾಲ ಅವರು ಪ್ರತ್ಯೇಕವಾಗಿ ಪಟ್ಟಣದಲ್ಲಿ ತೆರೆದಿರುವ ಖಾಸಗಿ ಆಸ್ಪತ್ರೆಯಲ್ಲಿ ಇದ್ದು ಸರ್ಕಾರಿ ಆಸ್ಪತ್ರೆಗೆ ನಿಗಧಿತ ಅವಧಿಯಲ್ಲಿ ಬರದೇ ಚಿಕ್ಕಮಕ್ಕಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ ಮಾಡುತ್ತಿದ್ದಾರೆಂದು ರಣಧೀರ ಪಡೆಯ ಸದಸ್ಯರು ಹಾಗೂ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಹಿಳೆಯರು ದೂರಿದರಲ್ಲದೇ, ನಿರ್ಲಕ್ಷ್ಯ ಮಾಡುತ್ತಿರುವ ನಿಮ್ಮ ಕಾರ್ಯವೈಖರಿ ಸರಿಯಾಗಿಲ್ಲವೆಂದು ಟೀಕೆ ಮಾಡಿದ ಘಟಣೆ ಗುರುವಾರ ತಾಲೂಕಾ ಆರೋಗ್ಯ ಆಸ್ಪತ್ರೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ರಣಧೀರ ಪಡೆಯ ತಾಲೂಕಾ ಆಧ್ಯಕ್ಷ ಫಾರೂಕ ಮಜೀದಮನಿ ಚಿಕ್ಕಮಕ್ಕಳ ತಜ್ಞ ಪ್ರವೀಂ ಮೇಟಿಯವರ ಮೇಲೆ ರೇಗಿದರಲ್ಲದೇ, ನಿವು ಆರೋಗ್ಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಗಿದ್ದೀರಿ, ಆದರೆ ಇಲ್ಲಿ ನಿತ್ಯ ಅನೇಕ ಮಕ್ಕಳಿಗೆ ಚಿಕಿತ್ಸೆ ನೀಡಲು ತಾವು ಆಸ್ಪತ್ರೆಯಲ್ಲಿ ಇರುವುದಿಲ್ಲ. ನಿವು ನಿಮ್ಮದೇ ಆದ ಖಾಸಗಿ ಆಸ್ಪತ್ರೆ ತೆರೆದು ಅಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ನಿತ್ಯ ನೀಡುತಿದ್ದೀರಿ. ಸರ್ಕಾರ ಆರೋಗ್ಯ ಆಸ್ಪತ್ರೆಯಲ್ಲಿ ನಿಮ್ಮನ್ನು ಚಿಕ್ಕಮಕ್ಕಳ ತಜ್ಞರನ್ನಾಗಿ ನೇಮಿಸಿದೆ. ತಮ್ಮ ಕರ್ತವ್ಯ ಮರೆತು ಆಗೊಮ್ಮೆ ಈಗೊಮ್ಮೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾದರೆ ಸರ್ಕಾರಿ ಸೇವೆ ನಿಮಗೆ ಅಗತ್ಯವಿಲ್ಲ. ನೀವು ನಿಮ್ಮ ಖಾಸಗಿ ಆಸ್ಪತ್ರೆಯಲ್ಲಿಯೇ ಇರುವುದು ಒಳಿತೆಂದು ಸಿಡಿಮಿಡಿಗೊಂಡರು.
ವೈದ್ಯ ಹಾಗೂ ರಣಧೀರ ಪಡೆಯ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ಇದಲ್ಲದೇ ಕೈ ಮೀಲಾಯಿಸುವ ಘಟಣೆಯೂ ಜರುಗುವ ಹಂತದಲ್ಲಿ ಕೆಲವರು ಈ ಘಟಣೆಯನ್ನು ಸಮಾಪ್ತಿಮಾಡಿದರು. ವೈದ್ಯ ಪವೀಣ ಮೇಟಿ ಪೊಲೀಸ್‌ ಠಾಣಗೆ ದೂರು ನೀಡಲು ಸಹ ಸಿದ್ದವಾದರು. ಪೊಲೀಸ್‌ ಠಾಣೆಗೆ ದೂರು ಕೊಡಿ ನಾವು ನಿಮ್ಮ ಮೇಲೆ ದೂರು ಕೊಡುತ್ತೇವೆ ಎಂದು ರಣಧೀರ ಪಡೆಯ ಸದಸ್ಯರು ಕೋಪದಿಂದ ಟೀಕಿಸಿದರು.
ಇಂದು ಮಹಾವೀರ ಜಯಂತಿ ಇದೆ. ರಜೆ ಇದ್ದರೂ ಕೂಡಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ತಾಲೂಕಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೂ ಆಗಿರುವುದರಿಂದ ಹೆಚ್ಚಿನ ಜವಾಬ್ದಾರಿ ಇದೆ. ಆ ಕೆಲಸವನ್ನೂ ನಿಭಾಯಿಸಬೇಕು. ಹೀಗಾಗಿ ಕೆಲ ದಿನ ಆಸ್ಪತ್ರೆಯ ಆಡಳಿತಾತ್ಮಕ ಸೇವೆ ಇರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅಗತ್ಯದ ಸಮಯದಲ್ಲಿ ಸ್ವಲ್ಪ ಮಟ್ಟಿನ ವಿಳಂಭವಾಗಿರಬಹುದು. ಆದರೆ ಯಾವುದೇ ಹಂತದಲ್ಲಿಯೂ ನಾನು ಸೇವೆಯನ್ನು ವಿಳಂಭಗೊಳಿಸಿಲ್ಲ. ಆದರೆ ನೀವೆಲ್ಲ ಟೀಕೆ ಮಾಡುವುದು ಸರಿಯಲ್ಲವೆಂದು ಪ್ರವೀಣ ಮೇಟಿ ಪ್ರತಿಭಟನಾಕಾರರಿಗೆ ಉತ್ತರ ನೀಡಿದರು.
ಕೆಲಕಾಲ ಗೊಂದಲಮಯ ವಾತಾವರಣ ಆಸ್ಪತ್ರೆಯಲ್ಲಿ ನಡೆಯಿತು. ಈ ನಡುವೆ ಚಿಕಿತ್ಸೆ ಪಡೆಯಲು ಬಂದಿದ್ದ ಅನೇಕ ಸಾರ್ವಜನಿಕರು ಚಿಕಿತ್ಸೆ ಕೊಡಲು ವೈದ್ಯರಿಗೆ ಅವಕಾಶಮಾಡಿಕೊಡಿ ನಿಮ್ಮ ರಾಧಾಂತ ಮೊಟಕುಗೊಳಿಸಿ. ಆಸ್ಪತ್ರೆಯ ಕೊಠಡಿಯ ಹೊರಗಡೆ ಅನೇಕರು ಚಿಕಿತ್ಸೆಗಾಗಿ ಬಂದಿದ್ದಾರೆ ಅವರ ಆರೋಗ್ಯ ಪರೀಕ್ಷಿಸಲು ಅವಕಾಶಮಾಡಿಕೊಡಿ ಎಂದು ಪ್ರತಿಭಟನಾಕಾರರ ಮನವೊಲಿಸಿದ್ದರಿಂದ ಈ ಘಟಣೆ ಸಮಾಪ್ತಿಗೊಂಡಿತು.
ರಣಧೀರ ಪಡೆಯ ಕಾರ್ಯದರ್ಶಿ ಲಾಲಸಾಬ ಕಿಲ್ಲೇದಾರ, ಸಾಧಿಕ ನಾಲಬಂಧ, ಅರೀಫ ನಾಲಬಂಧ, ಬಾಬಾಸಾಬ ಮನಿಯಾರ, ಇಮ್ರಾನ ಮುನವಳ್ಳಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...