ಚಿಕ್ಕೋಡಿ ಜಿಲ್ಲಾ ಹೋರಾಟ ತಾತ್ಕಾಲಿಕ ಹಿಂದಕ್ಕೆ

0
19
loading...

|| ಚುನಾವಣಾ ನೀತಿಸಂಹಿತೆ ನಂತರ ಮತ್ತೆ ಹೋರಾಟ: ಸಂಗಪ್ಪಗೋಳ ||ಕನ್ನಡಮ್ಮ ಸುದ್ದಿಚಿಕ್ಕೋಡಿ 27: ಕಳೆದ 51 ದಿನಗಳಿಂದ ನಡೆಯುತ್ತಿದ್ದ ಚಿಕ್ಕೋಡಿ ಜಿಲ್ಲಾ ಹೋರಾಟವನ್ನು ಚುನಾವಣಾ ನೀತಿಸಂಹಿತೆ ಸಲುವಾಗಿ ಹಿಂಪಡೆಯಲಾಗಿದ್ದು, ಚುನಾವಣೆ ಮುಗಿದ ನಂತರ ಮತ್ತೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್‌.ಸಂಗಪ್ಪಗೋಳ ತಿಳಿಸಿದರು. ಪಟ್ಟಣದ ಮಿನಿವಿಧಾನಸೌಧ ಎದುರು ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಾಯಿಸಿ ಕಳೆದ 51 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ವೇದಿಕೆಗೆ ಮಂಗಳವಾರ ಸಿಪಿಐ ಬಸವರಾಜ ಮೂಕರ್ತಿಹಾಳ ಮತ್ತು ತಹಶೀಲ್ದಾರ ಸಿ.ಎಸ್‌.ಕುಲಕರ್ಣಿ ಆಗಮಿಸಿ ಹೋರಾಟಗಾರರ ಮನವೊಲಿಸಿ ಉಪವಾಸ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆಯುವಂತೆ ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದರು. ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಚುನಾವಣಾ ಆಯೋಗದ ಕಾನೂನು ಪಾಲನೆ ಮಾಡುವ ಸದುದ್ದೇಶದಿಂದ ಈಗ ನಾವು ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದ್ದು, ಚುನಾವಣೆ ಮುಗಿದ ನಂತರ ಚಿಕ್ಕೋಡಿ ಜಿಲ್ಲೆಯ ಜತೆಗೆ ಉತ್ತರ ಕರ್ನಾಟಕಕ್ಕಾಗಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಸಕ್ತ ಚುನಾವಣೆಯಲ್ಲಿ ನಾವು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಒಂದೆರಡು ದಿನಗಳಲ್ಲಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು. ಚಿಕ್ಕೋಡಿ ಜಿಲ್ಲೆ ಮಾಡಲು ಅಡ್ಡಗಾಲು ಹಾಕಿದವರಿಗೆ ತಕ್ಕ ಪಾಠ ಕಲಿಸದೇ ನಾವು ಬಿಡುವುದಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಕಿರಿ ಕಾರಿದರು.ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಮಹಾಸ್ವಾಮಿಗಳು, ರೈತ ಸಂಘದ ವಕ್ತಾರ ತ್ಯಾಗರಾಜ ಕದಮ, ಅರ್ಜುನ ಗದಾಡಿ, ಮಾಜಿ ಶಾಸಕ ದತ್ತು ಹಕ್ಯಾಗೋಳ, ಸುರೇಶ ಬ್ಯಾಕೂಡೆ, ಬಸವರಾಜ ಡಾಕೆ, ದೊಂಡಿಬಾ ಹಕ್ಯಾಗೋಳ, ನಿಜಗುಣಿ ಆಲೂರೆ, ಎಂ.ಎ.ಪಾಟೀಲ, ಸಂಜು ಬಡಿಗೇರ, ತುಕಾರಾಮ ಕೋಳಿ, ರಾಘವೇಂದ್ರ ಸನದಿ, ಲಕ್ಷ್ಮಣ ಪೂಜೇರಿ, ಎಸ್‌.ವಿ.ಹೊನ್ನವರ ಮುಂತಾದವರು ಉಪಸ್ಥಿತರಿದ್ದರು

loading...