ಚುನಾವಣೆಗೆ ಬಹಿಷ್ಕಾರ: ಹೆಬ್ಬಾರಗುಡ್ಡ ನಾಗರಿಕರ ನಿರ್ಧಾರ

0
19
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಗುಳ್ಳಾಪುರ ಸಮೀಪದ ಹಳವಳ್ಳಿ ಗ್ರಾಮದ ಹೆಬ್ಬಾರಗುಡ್ಡವೆಂಬ ಕುಗ್ರಾಮದ ನಾಗರಿಕರು ತಮ್ಮ ಊರಿಗೆ ರಸ್ತೆ ಮತ್ತು ವಿದ್ಯುತ್‌ ಸೌಲಭ್ಯವಿಲ್ಲದೇ ಇರುವ ಕಾರಣ ಬರುವ ಚುನಾವಣೆಯೊಳಗೆ ಮೂಲಭೂತವಾದ ಈ ಸೌಕರ್ಯಗÀಳನ್ನು ಒದಗಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ನಿಶ್ಚಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವÀರು. ಕಳೆದ ಅನೇಕ ವರುಷಗಳಿಂದ ಹೆಬ್ಬಾರಗುಡ್ಡದ ನಾಗರಿಕರು ಅನೇಕ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಸಹಾ ಇದುವರೆಗೂ ಸರ್ವಋತು ರಸ್ತೆ ಮತ್ತು ವಿದ್ಯುತ್‌ ಸೌಲಭ್ಯ ಒದಗಿಸಿದ್ದು ಇರುವುದಿಲ್ಲ, ವಿದುತ್‌ ಸಂಪರ್ಕ ಕೊಡುತ್ತೇವೆ ಎಂದು ಅನೇಕ ಬಾರಿ ಪರಿಶೀಲನೆ ನಡೆಸಿದರೂ ಸಹಾ ವಿದ್ಯುತ್‌ ಸಂಪರ್ಕ ಕಲ್ಪಿಸಲಿಲ್ಲ, ಇಲ್ಲಿನ ಜನರ ಬಾಳು ಕತ್ತಲಲ್ಲಿಯೇ ಕಳೆಯ ಬೇಕಾ, ಈಗಂತೂ ಸರಕಾರವು ಚಿಮಣೀ ದೀಪಕ್ಕೆ ಸೀಮೆ ಎಣ್ಣೆಯನ್ನೂ ಸಮರ್ಪಕವಾಗಿ ವಿತರಿಸುತ್ತಿಲ್ಲ, ಅದರಿಂದಾಗಿ ತುಂಬಾ ಅನಾನುಕೂಲವಾಗಿದೆ, ಹೆಬ್ಬಾರಗುಡ್ಡದ ಊರಿಗೆ ವಿದ್ಯುತ್‌ ಮತ್ತು ರಸ್ತೆ ಸಂಪರ್ಕವನ್ನು ಅತಿ ಶೀಘ್ರದಲ್ಲಿ ಕಲ್ಪಿಸಬೇಕು, ಇಲ್ಲದೇ ಇದ್ದರೆ ಚುನಾವಣೆಯನ್ನು ಮತದಾನ ಮಾಡದೇ ಇರುವ ಮೂಲಕ ಬಹಿಷ್ಕರಿಸುವುದಾಗಿ ಹೆಬ್ಬಾರಗುಡ್ಡದ ನಾಗರಿಕರು ತಿಳಿಸಿದ್ದಾರೆ. ಈ ಹಿಂದೆ ಅನೇಕ ಸಲ ಪತ್ರಿಕೆಗಳಲ್ಲಿ ಹೆಬ್ಬಾರಗುಡ್ಡದ ದುಸ್ಥಿತಿ ವರದಿಯಾದರೂ ಸಹಾ ಇನ್ನೂವರೆಗೆ ಯಾವುದೇ ಕ್ರಮ ಕೈಗೊಳ್ಲದೇ ಇರುವುದರ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಲ್ಲದೇ ಇನ್ನೂ ಎಷ್ಟು ಶತಮಾನ ನಾವು ಕತ್ತಲಲ್ಲಿ ಕಳೆಯಬೇಕೆಂದು ಸರಕಾರವನ್ನು ಪ್ರಶ್ನಿಸಿದ್ದಾರೆ.

loading...