ಜಾತ್ರೆಗಳು ಇತಿಹಾಸದ ವೈಭವ ತೋರಿಸುತ್ತಿವೆ: ಶಾಸಕ ಜಾರಕಿಹೊಳಿ

0
26
loading...

ಕನ್ನಡಮ್ಮ ಸುದ್ದಿ-ಗೋಕಾಕ: ಜಾತ್ರೆಗಳು ನಮ್ಮ ಇತಿಹಾಸದ ವೈಭವವನ್ನು ಎತ್ತಿ ತೋರಿಸುತ್ತಿವೆ. ನಮ್ಮ ಕಳೆದುಹೋದ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಜಾತ್ರೆಗಳಲ್ಲಿ ಎಲ್ಲರೂ ಪಾಲ್ಗೊಂಡು ತನು-ಮನದ ಸೇವೆ ಸಲ್ಲಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಇತ್ತೀಚೆಗೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಜಾತ್ರೆಗಳಲ್ಲಿ ಭಾಗಿಯಾದರೆ ನಮ್ಮ ಮನಕ್ಕೆ ಸುಖ-ಶಾಂತಿ ಲಭಿಸುತ್ತದೆ. ದೇವರ ಕೃಪೆಗೆ ನಾವೆಲ್ಲರೂ ಪಾತ್ರರಾಗಬೇಕು ಎಂದು ಹೇಳಿದರು.
ಯಾತ್ರಿ ನಿವಾಸ: ಗೋಸಬಾಳದ ಮಾರುತಿ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣಕ್ಕೆ 50 ಲಕ್ಷ ರೂ. ಹಾಗೂ ಸಂಗೊಳ್ಳಿ ರಾಯಣ್ಣಾ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.

ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯಾ ಮಠದ, ಗೌಡಪ್ಪ ಪಾಟೀಲ, ಸತ್ತೆಪ್ಪ ಹೊಸಟ್ಟಿ, ರಮೇಶ ದಳವಾಯಿ, ಬಾಳಪ್ಪ ಬುಳ್ಳಿ, ಸಿದ್ಧಾರೂಢ ಮಳ್ಳಿಕೇರಿ, ಬೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಅಶೋಕ ಬಂಡಿವಡ್ಡರ, ಮುಂತಾದವರು ಉಪಸ್ಥಿತರಿದ್ದರು.

loading...