ಜಾನುವಾರು ಪ್ರರ್ದಶನ ಕಾರ್ಯಕ್ರಮ

0
27
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಅರ್.ಸೆಟಿ ಮುಂಡಗೋಡ ಶಾಖಾ ವತಿಯಿಂದ ತಾಲೂಕಿನ ಹುನಗುಂದ ಗ್ರಾಮದಲ್ಲಿ ಗುರುವಾರ ಜಾನುವಾರು ಪ್ರರ್ದಶನ ಕಾರ್ಯಕ್ರಮ ನಡೆಯಿತು ಪಶುಸಂಗೋಪನಾ ಇಲಾಖೆ ಅಧಿಕಾರಿ ಬಸವರಾಜ ಮಲ್ನಾಡ ಉದ್ಘಾಟಿಸಿ ಮಾತನಾಡಿ, ಇಲಾಖೆಯಲ್ಲಿ ಇರುವ ಯೋಜನೆಗಳ ಬಗ್ಗೆ ಹಾಗೂ ದನಗಳಿಗೆ ಬರುವ ಕಾಯಿಲೆಗಳ ಬಗ್ಗೆ ಹಾಗೂ ಅವುಗಳ ನಿರ್ವಹಣೆ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು.
ಮುಂಡಗೋಡ ಪಶುಸಂಗೋಪನಾ ಇಲಾಖೆ ವಿಸ್ತರಣಾ ಅಧಿಕಾರಿ ಡಾ!! ಸುನೀಲ ಬನ್ನಿಗೋಳ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಮಾತನಾಡಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಹಾಗೂ ಹೈನುಗಾರಿಕೆಯಲ್ಲಿರುವ ಎರಡು ವಿಧಗಳ ಬಗ್ಗೆ ತಿಳಿಸಿದರು ಪೂರಕವಾದ ಹೈನುಗಾರಿಕೆ ಹಾಗೂ ಲಾಭದಾಯಕ ಹೈನುಗಾರಿಕೆ ಮತ್ತು ಉತ್ತಮವಾದ ಆಕಳುಗಳನ್ನು ಹೈನುಗಾರಿಕೆಯಲ್ಲಿ ತೂಡಗಿಸಿಕೊಳ್ಳುವುದರ ಬಗ್ಗೆ ಹಾಗೂ ಅವುಗಳಿಗೆ ವಿಮೆ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಆಕಳು, ಕರು, ಎಮ್ಮೆಗಳನ್ನು ವೀಕ್ಷಿಸಿ ಅವುಗಳಿಗೆ ಆಹಾರದ ಪ್ಯಾಕೇಟ ಮತ್ತು ಬಹುಮಾನ ವಿತರಿಸಲಾಯಿತು. ಹುನಗುಂದ ಪಶುಸಂಗೋಪನಾ ವೈದ್ಯಾದಿಕಾರಿ ಡಾ!!ನಿರ್ಮಲಾ ಕೊಣ್ಣೂರ, ರುಡ್ ಸೆಟಿ ಗ್ರಾಮೀಣಾಭಿವೃದ್ದಿ ಅಧಿಕಾರಿ ಮಹಾಬಲೇಶ್ವರ ನಾಯ್ಕ, ಭರಮಣ್ಣಾ ದೂಪದ, ಬಸವನಗೌಡ್ರ ರಾಯನಗೌಡ್ರ, ಮಾದೇವಪ್ಪಾ ಬಡಿಗೇರ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಹಾಗೂ 50ಕ್ಕೂ ಹೆಚ್ಚು ಜಾನುವಾರುಗಳು ಸೇರಿದ್ದವು. ವಿಜಯಾ ನಾಯ್ಕ ಸ್ವಾಗತಿಸಿದರು. ಈರಯ್ಯಾ ಚಿಕ್ಕಮಠ ನಿರುಪಿಸಿದರು. ವಿನಾಯಕ ಸುಣಗಾರ ವಂದಿಸಿದರು.

loading...