ಜಾರಕಿಹೊಳಿ ಸಹೋದರರು ಬೆಂಬಲ ನನಗಿದೆ:ಹುಣಚಾಳಕರ

0
30
loading...

 

ಜಾರಕಿಹೊಳಿ ಸಹೋದರರು ಬೆಂಬಲ ನನಗಿದೆ:ಹುಣಚಾಳಕರ

ಕನ್ನಡಮ್ಮ ಸುದ್ದಿ

ಸಂಕೇಶ್ವರ 12:ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ಸತೀಶ ಜಾರಕಿಹೊಳಿ ಅವರ ಬೆಂಬಲ ನನಗೆ ಆದ್ದರಿಂದ ಹುಕ್ಕೇರಿ ಮತಕ್ಷೇತ್ರದ ಕಾಂಗ್ರೇಸ್ ಟಿಕೆಟ ನನಗೆ ದೊರೆಯುವ ಭರವಸೆಯಿದೆ ಎಂದು ಸಂಕೇಶ್ವರ ಬ್ಲಾಕ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ನಭಿಸಾಬ ಹುಣಚಾಳಕರ ಹೇಳಿದರು.

ರವಿವಾರ ಪಟ್ಟಣದಲ್ಲಿ ಪತ್ರಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹುಕ್ಕೇರಿ ಮತಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಮುಸ್ಲಿಂ ಸಮಾಜದವರಿಗೆ ಅವಕಾಶ ನೀಡಿಲ್ಲ ಆದ್ದರಿಂದ ಈ ಬಾರಿ ಅಲ್ಪಸಂಖ್ಯಾತರಿಗೆ ಮನ್ನಣೆ ನೀಡಿ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೆ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದೆನೆ ಹಾಗೂ ಜಿಲ್ಲೆಯ ನಾಯಕರುಗಳ ಬೆಂಬಲವು ನನಗಿದೆ ಎಂದು ಟಿಕೆಟ ದೊರೆತರೆ ಈ ಬಾರಿ ಬದಲಾವಣೆ ಬಯಸಿದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

loading...