ಠೇವಣಿ ಇಟ್ಟಿರುವ ಹಣ ಮರಳಿಸುವಂತೆ ಪ್ರತಿಭಟನೆ

0
19
loading...

 

ಕನ್ನಡಮ್ಮ ಸುದ್ದಿ-ವಿಜಯಪುರ : ಈಶ್ವರ ಕೊ-ಆಫ್ ಸೊಸೈಟಿಯ ಠೇವುದಾರರು ಇಟ್ಟಿರುವ ಹಣವನ್ನು ಮರಳಿಸುವ ಮೂಲಕ ಠೇವಣಿದಾರರನ್ನು ಸಂಕಷ್ಟದಿಂದ ಪಾರುಮಾಡುವಂತೆ ಒತ್ತಾಯಿಸಿ ಠೇವುದಾರರ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಶರಣು ಸಬರದ ಮಾತನಾಡಿ, ಈಶ್ವರ ಕೊ-ಆಫ್ ಸೊಸೈಟಿಯ ಆಂತರಿಕ ಸಮಸ್ಯೆಯಿಂದಾಗಿ ಠೇವಣಿದಾರರು ತೊಂದರೆ ಅನುಭವಿಸುವಂತಾಗಿದೆ. ಠೇವುದಾರರ ಪರಿಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಿದೆ. ಇಟ್ಟಂತಹ ಠೇವಣಿ ಹಣದಲ್ಲಿ ತಮ್ಮ ಮಕ್ಕಳ ಮದುವೆ ಹಾಗೂ ಶಿಕ್ಷಣಕ್ಕಾಗಿ ಹಾಗೂ ನಿವೃತ್ತ ನೌಕರರು, ಮುಂದಿನ ತಮ್ಮ ಭವಿಷ್ಯಕ್ಕಾಗಿ, ನಿತ್ಯ ಜೀವನ್ಕಾಗಿ ಕೂಡಿಟ್ಟ ಹಣವನ್ನು ಈ ಸೊಸೈಟಿಯಲ್ಲಿ ಠೇವಣಿ ಮಾಡಿದ್ದಾರೆ. ಆದರೆ ಠೇವಣಿ ಮಾಡಿದ ಹಣವು ಇಂದಿಗೂ ಠೇವಣಿದಾರರಿಗೆ ಕೈ ಸೇರಿಲ್ಲ. ಇದರಿಂದಾಗಿ ಗ್ರಾಹಕರಿಗೆ ತೀವ್ರತರವಾದ ಅನ್ಯಾಯವಾಗಿದೆ. ಈ ಬಗ್ಗೆ ಈಶ್ವರ ಕೋ-ಆಫ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಿಗೆ ಸಂಪರ್ಕಿಸಿದರೆ ಅವರು ಉಡಾಫೆ ಉತ್ತರ ನೀಡುತ್ತಿದ್ದು, ಅದರಲ್ಲಿ ಕೆಲವು ಠೇವಣಿದಾರರು ವಿಷಯ ತಿಳಿದಾಗಿನಿಂದ ಚಿಂತೆಯಲ್ಲಿ ತೊಡಗಿದ್ದು, ಕೆಲವರಂತು ಹೃದಯಘಾತಕ್ಕೆ ಒಳಗಾಗಿದ್ದಾರೆ. ಅತೀ ಶೀಘ್ರದಲ್ಲಿ ಠೇವಣಿದಾರರಿಗೆ ಹಣವನ್ನು ಮರಳಿ ನೀಡಬೇಕು, ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಎಸ್.ಎಸ್. ಹತ್ತಿ, ಬಿ.ಎಸ್. ಅಂಗಡಿ, ಎನ್.ಎಂ.ಪೂಜಾರಿ, ಎ.ಎಸ್. ಕೋರಿ, ಹೆಚ್.ಆರ್. ವಾಲಿಕಾರ, ಬಿ.ವಾಯ್. ಪಾಟೀಲ, ಬಿ.ಎಸ್. ಮಠ, ಸಿದ್ರಾಮಪ್ಪ ಮಾತಳ್ಳಿ, ಎಸ್.ಎಸ್. ರೂಡಗಿ, ಎಂ.ಜಿ.ಯಾದವಾಡ, ಆರ್.ಎಸ್. ನಾಗೂರ, ಬಿ.ಐ. ಬಿಜ್ಜರಗಿ, ಎಸ್.ಬಿ. ಕೊಟ್ನಾಳ, ಎಸ್.ಪಿ. ಸಾಗಾಯಿ, ವಿ.ಕೆ. ಏಳಗಿ, ಬಿ.ಎಸ್. ವಾಮಾ, ಸಿ.ಎಕಸ್.ಸುರಪೂರ ಉಪಸ್ಥಿತರಿದ್ದರು.

loading...