ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ

0
19
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಯಾರೋ ದುಷ್ಕರ್ಮಿಗಳು ಸಂಶಯಾಸ್ಪದ ರೀತಿಯಲ್ಲಿ ಜೆಡಿಎಸ್‌ ದುರೀಣ ಸಂತೋಷ ರಾಯ್ಕರ ಅವರ ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಮಹಿಂದ್ರಾ ಸ್ಕಾರ್ಪಿಯೊ ವಾಹನದ ಗಾಜು ಒಡೆದು ವಾಹನ ಜಖಂಗೊಳಿಸಿ ಪರಾರಿಯಾದ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.
ಸುತ್ತ ತಡೆಗೋಡೆ ಹೊಂದಿರುವ ಮನೆಯ ಎದುರು ನಿಲ್ಲಿಸಲಾಗಿದ್ದ ಸಂತೋಷ ರಾಯ್ಕರ ಅವರ ವಾಹನದ ಹಿಂದಿನ ಗಾಜನ್ನು ಒಡೆದುಹಾಕಲಾಗಿದ್ದು, ಸದಸದು ಕೆಳಿಸಿ ಮನೆಯಲ್ಲಿದ್ದವರು ಹೊರಗೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಿಂದ ಮಳಗಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸರು ಈ ಪ್ರಕರಣವನ್ನು ತೀವ್ರ ಗಂಬೀರವಾಗಿ ತೆಗೆದುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

loading...