ತರಕಾರಿ ಮಾರುಕಟ್ಟೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ

0
20
loading...

ಮುಂಡರಗಿ: ಸೂಕ್ತ ತರಕಾರಿ ಮಾರುಕಟ್ಟೆ ನಿರ್ಮಿಸಲು ಆಗ್ರಹಿಸಿ ಹಳೆ ತರಕಾರಿ ಮಾರುಕಟ್ಟೆ ಹೋರಾಟ ಸಮಿತಿ, ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ, ಉತ್ತರ ಕರ್ನಾಟಕ ಪ್ರದೇಶ ರೈತ ಸಂಘಗಳಿಂದ ಸೋಮವಾರ ಮುಂಡರಗಿ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಪುರಸಭೆ ಕಾರ್ಯಾಲಯದ ಮುಖ್ಯ ವ್ಯವಸ್ಥಾಪಕಿ ಹೂಗಾರಗೆ ಮನವಿ ಸಲ್ಲಿಸಿದರು.

ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ ಮುಂಡರಗಿ ಪುರಸಭೆ ಕಾರ್ಯಾಲಯವು ಸ್ವತಂತ್ರ ಭಾರತದ ನಂತರ ಮುಂಡರಗಿ ಪಟ್ಟಣದ ಆಡಳಿತವನ್ನು ನಡೆಸಿ 7ದಶಕ ಕಳೆದರು ಕೂಡಾ ಮುಂಡರಗಿ ಪಟ್ಟಣದಲ್ಲಿ ಸುಸರ್ಜಿತ ಹಣ್ಣು, ಹೂವು ಮತ್ತು ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿರುವುದಿಲ್ಲ ಇದರಿಂದ ಮುಂಡರಗಿ ಸಾರ್ವಜನಿಕರು ಹಣ್ಣು, ಹೂವು ಮತ್ತು ತರಕಾರಿ ಖರೀದಿ ಮಾಡಲು ದಿನನಿತ್ಯ ಪೇಚಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ, ಮುಂಡರಗಿ ಪಟ್ಟಣದಲ್ಲಿ ಹಳೆ ತಹಶಿಲ್ದಾರ್ ಕಾರ್ಯಾಲಯದ ಜಾಗವು ಹಾಳು ಬಿದ್ದಿರುವುದರಿಂದ ಅದು ಮುಂಡರಗಿ ಪಟ್ಟಣದ ಮಧ್ಯ ಭಾಗದಲ್ಲಿರುವುದರಿಂದ ಮುಖ್ಯ ಬಜಾರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹತ್ತಿರವಾಗಿರುವುದರಿಂದ ಈ ಜಾಗದಲ್ಲಿ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆಂದು ದಿ:12/03/2018 ರಂದು ಮುಂಡರಗಿ ತಹಶಿಲ್ದಾರ್ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ತಹಶಿಲ್ದಾರ್ ಮುಂಡರಗಿ ರವರು ದಿ:16/03/2018 ರಂದು ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ ಮುಖ್ಯಾಧಿಕಾರಿಗಳು ಪುರಸಭೆ ಮುಂಡರಗಿ ಮುಂದಿನ ಸೂಕ್ತ ಕ್ರಮಕ್ಕಾಗಿ ನಮ್ಮ ಮನವಿ ಪತ್ರವನ್ನು ಕಳುಹಿಸಿರುತ್ತಾರೆ. ಅದನ್ನು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪುರಸಭೆ ಕಾರ್ಯಾಲಯದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಇದರ ಬಗ್ಗೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಅಂದನಗೌಡ ಕುಲಕರ್ಣಿ, ಬಸಪ್ಪ ವಡ್ಡರ, ಇಸ್ಮಾಯಿಲ ಗೋರಿ, ದೇವೇಂದ್ರಪ್ಪ ದೊಡ್ಡಮನಿ, ಇಮಾಂಬಿ ದೊಡ್ಡಮನಿ, ಕಾಸಿಂಬಿ ಕುಂಟಸಾಬಣ್ಣವರ್, ಹಸನಸಾಬ ಅಳವಂಡಿ, ಕಾಜಮ್ಮ ಬೆಟಗೇರಿ, ಗುರುರಾಜ ಅಂಗಡಿ, ಮಾಬುಸಾಬ ಕುಂಟಸಾಬಣ್ಣವರ, ನೀಲವ್ವ ಕುಂಕುಮಗಾರ ಮುಂತಾದವರು ಉಪಸ್ಥಿತರಿದ್ದರು.

loading...