ತಾಪಂ ಸಭೆಗೆ ಅಧಿಕಾರಿಗಳ ಗೈರು: ತರಾಟೆ

0
14
loading...

ಯಲಬುರ್ಗಾ: ಜಿಲ್ಲೆಗೆ ಸಚಿವರ ಕಾರ್ಯಕ್ರಮವಿದ್ದಾಗ ಮಾತ್ರ ಹಾಜರಾಗುತ್ತಿರಿ,ಆದರೆ ನಮ್ಮ ತಾಲೂಕಾ ಪಂಚಾಯತಿ ಸಭೆಗಳಿಗೆ ಯಾಕೆ ಗೈರಾಗುತ್ತಿರಿ ಎಂದು ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌ ಭೂಸೇನೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಸೋಮವಾರ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಜರಗಿತು.
ಇಲ್ಲಿಯ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀ ಗೌಡರ ಇವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭೂಸೇನೆ ಇಲಾಖೆಯ ಸಿಬ್ಬಂದಿ ಇಲಾಖೆವಾರು ವರದಿ ಹೇಳುತ್ತಿದ್ದಂತೆ,ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ತಾಪಂ ಸಭೆಯ ಪ್ರತಿಯೊಂದು ಯಾವುದೇ ಸಭೆಗಳಿಗೆ ಗೈರಾಗುತ್ತಿರಿ ,ಅಧಿಕಾರಿಗಳ ಬದಲು ಸಿಬ್ಬಂದಿಗಳನ್ನು ಕಳುಹಿಸುತ್ತಿರಿ, ಇದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ಸಚಿವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಿ.ಆದರೆ ತಾಪಂ ಸಭೆಗೆ ಪ್ರತಿ ಸರಿ ಗೈರಾಗುತ್ತಿರಲ್ಲ ಎಂದು ಪ್ರಶ್ನಿಸಿದರು.
ಆಗಾ ಅಧ್ಯಕ್ಷೆ ಲಕ್ಷ್ಮೀ ಗೌಡರ ಮಾತನಾಡಿ, ಅಲ್ರಿ ಸಭೆಗೆ ನಿಮ್ಮನ್ನು ಕಳಿಸಿದ್ದಾರೆ. ಸಭೆಗೆ ತಮಗೆ ಮಾಹಿತಿ ನೀಡಲು ಆಗುತ್ತಿಲ್ಲ.ಸರಿಯಾದ ಮಾಹಿತಿ ಸಹ ತಮ್ಮಿಂದ ಸಿಗಲ. ಅಲ್ಲದೇ ಒಮ್ಮೊಮ್ಮೆ ಇಲಾಖೆಯ ಬೇರೆ ಸಿಬ್ಬಂದಿಗಳು ಬರುತ್ತಿರಿ.ಯಾರು ಸರಿಯಾದ ಭೂಸೇನೆ ಅದಿಕಾರಿ ಅಂತಾ ಗುರ್ತಿಸುವುದು ಹೇಗೆ. ನಿಮ್ಮ ಇಲಾಖೆಯ ಅಧಿಕಾರಿಗಳು ಅಪರೂಪಕ್ಕೊಮ್ಮೆ ಬರುತ್ತಿರಿ. ಸಭೆಯಲ್ಲಿ ವರದಿ ಓದಬೆಡಿ, ನಿಮ್ಮಿಂದ ಸರಿಯಾದ ಮಾಹಿತಿ ಸಿಗಲ್ಲ ಎಂದು ಸೂಚಿಸಿದರು.
ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಕ್ಷಯ ರೋಗದಿಂದ ಒಂದೇ ಮನೆಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಈಗ ಅದೆ ಮನೆಯಲ್ಲಿ ಮತ್ತೊಬ್ಬರಿಗೆ ಕಾಣಿಸಿಕೊಂಡಿದೆ.ಆಸ್ಪತ್ರೆಗೆ ಹೋಗಿ ಬರುವಂತೆ ಹೇಳಿದರು ಅವರು ಹೋಗುತ್ತಿಲ್ಲ.ನಿರ್ಲಕ್ಷ ವಹಿಸುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸುವುದು ಹೇಗೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾಸ ಮಾದಿನೂರು ಆರೋಗ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಕ್ಷಯ ರೊಗ ಕಾಣಿಸಿಕೊಂಡ ಕೂಡಲೇ ಅಂಥವರ ಕಫವನ್ನು ಪರೀಕ್ಷೆ ಮಾಡಿಸಲಾಗುತ್ತಿದೆ. ಕಂಡು ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಗುಣಪಡಿಸಲಾಗುತ್ತಿದೆ. ಹೇದರುವಂತ ಪ್ರಶ್ನೆ ಇಲ್ಲ. ಧೈರ್ಯದಿಂದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದರು.ಬೇಸಿಗೆ ಆರಂಭವಾಗಿದೆ. ದಮ್ಮು,ಕೆಮ್ಮು ಜಾಸ್ತಿ ಜನರಲ್ಲಿ ಕಾಣಿಸಿಕೊಳ್ಳುತ್ತೆ.ಆದರೆ ಅವರು ಆಸ್ಪತ್ರೆಗೆ ತೋರಿಸಿಕೊಳ್ಳಲಿಕ್ಕೆ ಬಂದರೆ ಆಕ್ಸಿಂಜನ್‌ ಯಲಬುರ್ಗಾದ ಆಸ್ಪತ್ರೆಯಲ್ಲಿ ಇಲ್ಲಾಂತ.ಬೇರೆ ಕಡೆ ಕಳುಹಿಸಿಕೊಡುತ್ತಾರೆ ಅಂತಾ ಮಾತು ಕೇಳಿ ಬರುತ್ತಿದೆ. ಕೂಡಲೇ ಆಕ್ಸಿಂಜನ್‌ ಪ್ರಾರಂಭಿಸುವಂತೆ ಸುಭಾಸ ಮಾದಿನೂರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್‌ ಇಲಾಖೆ ಮಾಹಿತಿ ನಿಡುತ್ತಾ,ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 256,ಹಾಗೂ ಪ್ರೌಢ ಶಾಲೆಯಲ್ಲಿ 64 ಹುದ್ದೆಗಳು ಖಾಲಿ ಇವೆ.ತಾಲೂಕಿನಲ್ಲಿ ಈ ಭಾರಿ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮತ್ತು ಫಲಿತಾಂಶ ಬರಲಿ ಎಂಬ ಉದ್ದೇಶದಿಂದ ತಜ್ಞರಿಂದ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ.ಮುಂಬರುವ ಪರೀಕ್ಷೆಯು ಕಟ್ಟು ನಿಟ್ಟಾಗಿ ನಡೆಸುವ ಉದ್ದೇಶದಿಂದ ಪರೀಕ್ಷೆ ಕೇಂದ್ರದ ಎಲ್ಲಾ 12 ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮರಗಳನ್ನು ಆಳವಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆವಾರು ಅಧಿಕಾರಿಗಳು ತಮ್ಮ ಇಲಾಖೆ ವರದಿ ಓದಿದರು.ಅಧ್ಯಕ್ಷತೆಯನ್ನು ಅಧ್ಯಕ್ಷೆ ಲಕ್ಷ್ಮೀ ಗೌಡರ ವಹಿಸಿದ್ದರು.ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌,ಸ್ಥಾಯಿ ಸಮಿತಿ ಅಧ್ಯಕ್ಷ ಸುಭಾಷ ಮಾದಿನೂರು,ಅಕ್ಷರ ದಾಸೋಹ ಅಧಿಕಾರಿ ಅಶೋಕ ಪತ್ತಾರ ಉಪಸ್ಥಿತರಿದ್ದರು.

loading...